Advertisement

Gokarna: ಗೋಕರ್ಣದ ಅರಣ್ಯ ಪ್ರದೇಶದಲ್ಲಿ ಎರಡು ಮಂಗಗಳ ಸಾವು : ಜನರಲ್ಲಿ ಆತಂಕ

05:47 PM Mar 12, 2024 | Team Udayavani |

ಗೋಕರ್ಣ : ಇಲ್ಲಿಯ ಸಮೀಪದ ಅಶೋಕೆ ಅರಣ್ಯ ಭಾಗದಲ್ಲಿ ಎರಡು ಮಂಗಗಳ ಶವಗಳು ಸೋಮವಾರ ಪತ್ತೆಯಾಗಿದ್ದು, ಇದರಿಂದ ಇಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ ಉಂಟಾಗಿದೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಸಾವು ನೋವುಗಳು ಕೂಡ ಉಂಟಾಗುತ್ತಿದೆ.

Advertisement

ಜಿಲ್ಲೆಯಲ್ಲಿ 47 ಮಂದಿಗಳಲ್ಲಿ ಈ ಮಂಗನ ಖಾಯಿಲೆ ಪತ್ತೆಯಾಗಿದ್ದು, ಈ ಪೈಕಿ ಐವರು ಸಾವನ್ನಪ್ಪಿದ್ದಾರೆ. ಕಳೆದ ಒಂದು ತಿಂಗಳಿನಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸೀಮಿತವಾಗಿದ್ದ, ಈ ಮಂಗನ ಕಾಯಿಲೆ ವಿವಿಧ ಭಾಗಗಳಿಗೆ ವ್ಯಾಪಿಸಿ ಅಂಕೋಲಾದಲ್ಲಿಯೂ ಕಾಣಿಸಿಕೊಂಡಿತ್ತು. ಈಗ ಗೋಕರ್ಣ ವ್ಯಾಪ್ತಿಯಲ್ಲಿ ಮಂಗ ಸಾವನಪ್ಪಿರುವುದರಿಂದ ಪ್ರವಾಸೋದ್ಯಮದ ಮೇಲೆಯೂ ವಿತರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಗೋಕರ್ಣಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಾರೆ. ಇಲ್ಲಿಯ ಅಶೋಕೆ ಅರಣ್ಯ ಭಾಗದಿಂದಲೇ ವಿಶ್ವವಿಖ್ಯಾತ ಓಂ ಬಿಚ್ಚಿಗೆ ತೆರಳಬೇಕಾಗಿದೆ. ಹೀಗಾಗಿ ಪ್ರವಾಸಿಗರು ಕೂಡ ಸಹಜವಾಗಿಯೇ ಭಯಗೊಳ್ಳುವಂತಾಗಿದೆ. ಈಗಾಗಲೇ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಮುಂಜಾಗ್ರತ ಕ್ರಮವಹಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಮಂಗಗಳ ಸಾವಿನ ಕುರಿತು ಮಾಹಿತಿಗಳು ಹೊರಬರಬೇಕಿದೆ.

ಇದನ್ನೂ ಓದಿ: Loksabha; ಶೋಭಾಗೆ ಬೆಂ.ಉತ್ತರ, ಉಡುಪಿಗೆ ಅಚ್ಚರಿಯ ಅಭ್ಯರ್ಥಿ? ಏನಿದು ಬಿಜೆಪಿ ಲೆಕ್ಕಾಚಾರ?

Advertisement

Udayavani is now on Telegram. Click here to join our channel and stay updated with the latest news.

Next