Advertisement

ಮೊಮಿನುಲ್‌, ರಹೀಂ ಶತಕ ದೊಡ್ಡ ಮೊತ್ತದತ್ತ ಬಾಂಗ್ಲಾ

06:55 AM Nov 12, 2018 | Team Udayavani |

ಢಾಕಾ: ಜಿಂಬಾಬ್ವೆ ವಿರುದ್ಧ ರವಿವಾರ ಮೊದಲ್ಗೊಂಡ 2ನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಉತ್ತಮ ಆರಂಭ ಕಂಡುಕೊಂಡಿದೆ. ಮೊಮಿನುಲ್‌ ಹಕ್‌ ಮತ್ತು ಮುಶ್ಫಿಕರ್‌ ರಹೀಂ ಅವರ ಶತಕದ ನೆರವಿನಿಂದ 5 ವಿಕೆಟಿಗೆ 303 ರನ್‌ ಪೇರಿಸಿದೆ.

Advertisement

26 ರನ್ನಿಗೆ 3 ವಿಕೆಟ್‌ ಬಿದ್ದ ಬಳಿಕ ಕ್ರೀಸ್‌ ಆಕ್ರಮಿಸಿಕೊಂಡ ಹಕ್‌-ರಹೀಂ 266 ರನ್‌ ಜತೆಯಾಟ ನಿಭಾಯಿಸಿ ಜಿಂಬಾಬ್ವೆ ಬೌಲರ್‌ಗಳಿಗೆ ಬೆವರಿಳಿಸಿದರು. ಹಕ್‌ 161 ರನ್‌ ಹೊಡೆದರು (247 ಎಸೆತ, 19 ಬೌಂಡರಿ). ಇದು ಅವರ 7ನೇ ಸೆಂಚುರಿ. 6ನೇ ಶತಕ ಹೊಡೆದಿರುವ ರಹೀಂ 111 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (231 ಎಸೆತ, 9 ಬೌಂಡರಿ).

ಜಿಂಬಾಬ್ವೆ ಪರ ಕೈಲ್‌ ಜಾರ್ವಿಸ್‌ 3 ವಿಕೆಟ್‌ ಉರುಳಿಸಿದರು. ಮೊದಲ ಟೆಸ್ಟ್‌ ಗೆದ್ದಿರುವ ಜಿಂಬಾಬ್ವೆ 1-0 ಮುನ್ನಡೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next