Advertisement

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

10:50 PM Nov 14, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಶೇ.90ರಷ್ಟು ಮುಸ್ಲಿಮರಿದ್ದಾರೆ. ಹಾಗಾಗಿ ಸಂವಿಧಾನದಲ್ಲಿರುವ ಜಾತ್ಯತೀತ ಪದವನ್ನು ತೆಗೆದು ಹಾಕಬೇಕು ಎಂದು ಬಾಂಗ್ಲಾದೇಶದ ಅಟಾರ್ನಿ ಜನರಲ್‌ ಅಸದುಜ್ಜಮಾನ್‌ ವಾದಿಸಿದ್ದಾರೆ.

Advertisement

ಜತೆಗೆ, ಶೇಖ್‌ ಮುಜಿಬುರ್‌ ರೆಹಮಾನ್‌ ಅವರಿಗೆ ಬಂಗಾಬಂಧು (ಬಾಂಗ್ಲಾದೇಶದ ರಾಷ್ಟ್ರಪಿತ) ಬಿರುದನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ನ ಮುಂದೆ ತಮ್ಮ ವಾದ ಮಂಡಿಸಿದ ಅಸದುಜ್ಜಮಾನ್‌, ದೇಶದ ಪ್ರಜಾಪ್ರಭುತ್ವ ಮತ್ತು ಐತಿಹಾಸಿಕ ಮೌಲ್ಯಗಳೊಂದಿಗೆ ಸಂವಿಧಾನವನ್ನು ಸಮೀಕರಿಸುವ ಅಗತ್ಯವಿದೆ. “ಹಿಂದೆ, ಅಲ್ಲಾನಲ್ಲಿ ನಿರಂತರ ನಂಬಿಕೆ ಇತ್ತು ನಮಗೆ ಅದು ಮೊದಲಿನಂತೆಯೇ ಮುಂದುವರಿಯಬೇಕು. ರಾಜ್ಯವು ಎಲ್ಲಾ ಧರ್ಮಗಳ ಆಚರಣೆಯಲ್ಲಿ ಸಮಾನ ಹಕ್ಕುಗಳು ಮತ್ತು ಸಮಾನತೆಯನ್ನು ಖಾತ್ರಿಪಡಿಸುತ್ತದೆ ಎಂದು ಸಂವಿಧಾನದ 2ನೇ ಪರಿಚ್ಛೇದದಲ್ಲಿ ತಿಳಿಸಲಾಗಿದೆ.

ಆದರೆ, ಆರ್ಟಿಕಲ್‌ 9 ‘ಬಂಗಾಳಿ ರಾಷ್ಟ್ರೀಯತೆ’ ಬಗ್ಗೆ ಮಾತನಾಡುತ್ತದೆ. ಹಾಗಾಗಿ ಇವರೆಡೂ ವ್ಯಕ್ತಿರಿಕ್ತವಾಗಿವೆ’ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next