Advertisement
ಉಪನಾಯಕಿ ನವನೀತ್ ಕೌರ್ 37ನೇ ನಿಮಿಷದಲ್ಲಿ, ದೀಪಿಕಾ 47ನೇ ಹಾಗೂ 48ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಈ ಸಾಧನೆಯೊಂದಿಗೆ ದೀಪಿಕಾ ಪಂದ್ಯಾವಳಿಯಲ್ಲೇ ಅತೀ ಹೆಚ್ಚು 10 ಗೋಲು ಹೊಡೆದ ಸಾಧನೆಗೈದರು. ಇದರಲ್ಲಿ 5 ಪೆನಾಲ್ಟಿ ಕಾರ್ನರ್, 4 ಫೀಲ್ಡ್ ಗೋಲ್ ಮತ್ತು ಒಂದು ಪೆನಾಲ್ಟಿ ಸ್ಟ್ರೋಕ್ ಆಗಿತ್ತು.
ನಲ್ಲಿ ಬೆಳ್ಳಿ ಪದಕ ಗೆದ್ದ ಚೀನ ದ್ವಿತೀಯ ಸ್ಥಾನಿಯಾಗಿದೆ (12 ಅಂಕ). ಶನಿವಾರ ಚೀನವನ್ನು ಮಣಿಸಿದಾಗಲೇ ಭಾರತದ ಸೆಮಿಫೈನಲ್ ಖಾತ್ರಿಯಾಗಿತ್ತು. ಮಲೇಷ್ಯಾ 3ನೇ ಹಾಗೂ ಜಪಾನ್ 4ನೇ ಸ್ಥಾನದೊಂದಿಗೆ ಲೀಗ್ ಸ್ಪರ್ಧೆಗಳನ್ನು ಮುಗಿಸಿದವು. ಭಾರತ-ಜಪಾನ್ ಸೆಮಿಫೈನಲ್
ಮಂಗಳವಾರ ನಡೆಯುವ ಸೆಮಿ ಫೈನಲ್ನಲ್ಲಿ ಭಾರತ 4ನೇ ಸ್ಥಾನಿ ಯಾದ ಜಪಾನ್ ವಿರುದ್ಧ ಸೆಣಸ ಲಿದೆ. ಇನ್ನೊಂದು ಸೆಮಿಫೈನಲ್ ಚೀನ – ಮಲೇಷ್ಯಾ ನಡುವೆ ಸಾಗಲಿದೆ. ಥಾಯ್ಲೆಂಡ್, ದ. ಕೊರಿಯಾ ಹೊರಬಿದ್ದವು.
Related Articles
Advertisement