Advertisement

Mohammed Shami; ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್‌ ಶಮಿ! ಸ್ನೇಹಿತ ಹೇಳಿದ್ದೇನು?

02:53 PM Jul 25, 2024 | Team Udayavani |

ಹೊಸದಿಲ್ಲಿ: ಇದು ಟೀಮ್‌ ಇಂಡಿಯಾಕ್ಕೆ ಮರಳುವ ಹಾದಿಯಲ್ಲಿರುವ ವೇಗಿ ಮೊಹಮ್ಮದ್‌ ಶಮಿ ಬದುಕಿನ ದುರಂತಮಯ ಸುದ್ದಿ. ಶಮಿ ಮ್ಯಾಚ್‌ ಫಿಕ್ಸಿಂಗ್‌ ಮಾಡುತ್ತಾರೆಂದು ಪತ್ನಿ ಹಸೀನಾ ಜಹಾನ್‌ ಮಾಧ್ಯಮದವರ ಮುಂದೆ ಆರೋಪಗೈದ ಸಂದರ್ಭದಲ್ಲಿ ನಡೆದದ್ದು. ಇದರಿಂದ ಸಂಪೂರ್ಣ ನಲುಗಿ ಹೋಗಿದ್ದ ಶಮಿ ಆತ್ಮಹತ್ಯೆಗೆ ಮುಂದಾದ ವಿದ್ಯಮಾನ. ಈ ಘಟನೆಯನ್ನು ಮೊಹಮ್ಮದ್‌ ಶಮಿ ಅವರ ಆತ್ಮೀಯರಲ್ಲಿ ಒಬ್ಬರಾಗಿರುವ ಉಮೇಶ್‌ ಕುಮಾರ್‌ ಹೇಳಿದ್ದಾರೆ.

Advertisement

“ಪತ್ನಿಯ ಆರೋಪದಿಂದ ಶಮಿ ಮಾನಸಿಕ ತಳಮಳಕ್ಕೊಳಗಾಗಿದ್ದರು. ಇದನ್ನು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದರು. ಶಮಿ ಒಮ್ಮೆ ನಮ್ಮ ಫ್ಲ್ಯಾಟ್‌ನಲ್ಲಿದ್ದಾಗ ಕಟ್ಟಡದಿಂದ ಹಾರಿ ಆತ್ಮಹತ್ಯೆಯ ಪ್ರಯತ್ನಕ್ಕೆ ಮುಂದಾಗಿದ್ದರು…’ ಎಂಬುದಾಗಿ ಉಮೇಶ್‌ ಕುಮಾರ್‌ ಹೇಳಿದ್ದಾರೆ.

“ಆಗ ಬೆಳಗಿನ ಜಾವ 4 ಗಂಟೆ. ನಾನು ನೀರು ಕುಡಿಯಲೆಂದು ಎದ್ದಾಗ ಶಮಿ ಇರಲಿಲ್ಲ. ಹುಡುಕಿದಾಗ ಅವರು 19ನೇ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದರು. ಅವರು ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರು. ನನ್ನ ಪಾಲಿಗೆ ಅದೊಂದು ಭಯಾನಕ ರಾತ್ರಿಯಾಗಿತ್ತು. ಇದನ್ನು ಯೋಚಿಸಲಿಕ್ಕೂ ಆಗುತ್ತಿಲ್ಲ’ ಎಂದಿದ್ದಾರೆ ಉಮೇಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next