ಶಾರ್ಜಾ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ಥಾನ ತಂಡ ಸತತ ಐದು ಗೆಲುವು ದಾಖಲಿಸಿದೆ. ಈ ಮೂಲಕ ಅಜೇಯವಾಗಿ ಸೆಮಿ ಫೈನಲ್ ಗೆ ಪ್ರವೇಶಿಸಿದೆ. ರವಿವಾರದ ರಾತ್ರಿಯ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧವೂ ಪಾಕಿಸ್ಥಾನ ಸುಲಭ ಗೆಲುವು ದಾಖಲಿಸಿದೆ.
ಇದೇ ವೇಳೆ ಪಾಕ್ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅವರು ವೆಸ್ಟವ ಇಂಡೀಸ್ ನ ಕ್ರಿಸ್ ಗೇಲ್ ದಾಖಲೆಯೊಂದನ್ನು ಅಳಿಸಿ ಹಾಕಿದರು. ಒಂದು ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ರಿಜ್ವಾನ್ ಬರೆದರು.
2015ರಲ್ಲಿ ಕ್ರಿಸ್ ಗೇಲ್ 1665 ರನ್ ಗಳಿಸಿದ್ದರು. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಿಜ್ವಾನ್ ಈ ದಾಖಲೆ ಮುರಿದರು. ರಿಜ್ವಾನ್ 2021ರಲ್ಲಿ ಇದುವರೆಗೆ 1676 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 15 ಅರ್ಧ ಶತಕಗಳು ಸೇರಿದೆ.
ಇದನ್ನೂ ಓದಿ:ಚುಟುಕು ಮಾದರಿ ನಾಯಕನಾಗಿ ಕೊಹ್ಲಿಗಿಂದು ವಿದಾಯ ಪಂದ್ಯ: ಕೋಚ್ ಶಾಸ್ತ್ರಿಗೂ ಅಂತಿಮ ಆಟ
2015ರಲ್ಲಿ ಕ್ರಿಸ್ ಗೇಲ್ 36 ಪಂದ್ಯಗಳಲ್ಲಿ 1665 ರನ್ ಗಳಿಸಿದ್ದರು. ಮೂರು ಶತಕಗಳು ಮತ್ತು 10 ಶತಕಗಳು ಇದರಲ್ಲಿ ಸೇರಿತ್ತು.
ಪಾಕ್ ತಂಡದ ನಾಯಕ ಬಾಬರ್ ಅಜಂ ಕೂಡಾ ಈ ಪಟ್ಟಿಯಲ್ಲಿದ್ದು, ಅವರು ಈ ವರ್ಷ ಇದುವರೆಗೆ 1627 ರನ್ ಗಳಿಸಿದ್ದಾರೆ. ಪಾಕ್ ತಂಡ ಸೆಮಿ ಫೈನಲ್ ಗೆ ಎಂಟ್ರಿ ನೀಡಿರುವ ಕಾರಣ ಗೇಲ್ ದಾಖಲೆ ಮುರಿಯುವ ಅವಕಾಶ ಬಾಬರ್ ಗೂ ಇದೆ.