Advertisement
ಆರಂಭದಲ್ಲಿ ಇದನ್ನು ತಿಮಿಂಗಿಲ ಎಂದು ತಿಳಿಯಲಾಗಿತ್ತಾದರೂ ಬಳಿಕ ಕೆಲವು ಹಿರಿಯ ಮೀನುಗಾರರು ಅದು ಕಡಲಹಂದಿ ಎಂದು ಗುರುತಿಸಿದರು. ಒಂದು ಟನ್‌ಗೂ ಅಧಿಕ ತೂಕದ ಕಳೇಬರವನ್ನು ಹೂಳಬೇಕಾದರೆ ಕ್ರೇನ್ ತರಿಸಬೇಕೆಂಬ ಕಾರಣಕ್ಕೆ ಸ್ಥಳೀಯರು ಸಮುದ್ರಕ್ಕೆ ದೂಡಿದ್ದಾರೆ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಿಂದಮೀನುಗಾರಿಕಾ ತಜ್ಞರು ಆಗಮಿಸುವ ಮೊದಲೇ ಮೀನು ಸಮುದ್ರ ಪಾಲಾಗಿತ್ತು. ಕೊಳೆತಿರದ ಕಾರಣ ಅದು ಒಂದೆರಡು ದಿನಗಳಿಂದೀಚೆಗೆ ಮೃತಪಟ್ಟಿರಬಹುದು ಎಂದು ಮೀನುಗಾರರು ಹೇಳಿದ್ದಾರೆ.
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ ಡಾ| ಇಂದ್ರಾಣಿ ಕರುಣಾಸಾಗರ್ ಹೇಳುವಂತೆ, ಡಾಲ್ಫಿನ್ ಹೋಲಿಕೆಯುಳ್ಳ ಕಡಲಹಂದಿಯು ಅತ್ಯಂತ ಸೂಕ್ಷ್ಮ ಸಂವೇದಿಯಾಗಿದ್ದು, ಸಮುದ್ರದೊಳಗಿನ ಮಾಲಿನ್ಯದಿಂದಾಗಿ ಅಥವಾ ಮೀನುಗಾರಿಕೆ ಸಂದರ್ಭ ದೊಡ್ಡ ಬಲೆಗಳಿಗೆ ಸಿಲುಕಿಯೋ ಬೋಟ್‌ನ ಯಂತ್ರಗಳಿಗೆ ಸಿಲುಕಿಯೋ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.