Advertisement

Modi ಕಳವಳ: ಸೂಕ್ತ ತರಬೇತಿ ನೀಡದಿದ್ದರೆ ಎಐ ತಂತ್ರಜ್ಞಾನದ ದುರುಪಯೋಗ

12:34 AM Mar 30, 2024 | Team Udayavani |

ಹೊಸದಿಲ್ಲಿ: ಜನರಿಗೆ ಸೂಕ್ತ ತರಬೇತಿ ನೀಡದಿದ್ದರೆ ಕೃತಕ ಬುದ್ಧಿಮತ್ತೆ(ಎಐ)ಯಂಥ ತಂತ್ರಜ್ಞಾನ ದುರ್ಬಳಕೆ ಆಗಬಹುದು. ಎಐ ಅನ್ನು ಮ್ಯಾಜಿಕ್‌ ಸಾಧನವಾಗಿ ಬಳಸಿದರೆ, ಅದು ಗಂಭೀರ ಅನ್ಯಾಯಕ್ಕೆ ಕಾರಣವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರೊಂದಿಗೆ ಶುಕ್ರವಾರ ನಡೆಸಿದ ಸಂವಾದದಲ್ಲಿ ಅವರು ಎಐ, ಡೀಪ್‌ಫೇಕ್‌ನಂಥ ತಂತ್ರಜ್ಞಾನಗಳ ಅಪಾಯಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

“ಡೀಪ್‌ ಫೇಕ್‌ ಸವಾಲನ್ನು ಎದುರಿಸಲು ಎಐ ತಂತಜ್ಞಾನದಿಂದ ಸೃಷ್ಟಿಸಿದ ವೀಡಿಯೋಗಳು, ಫೋಟೋಗಳು ಅಥವಾ ಯಾವುದೇ ಕಂಟೆಂಟ್‌ ವಾಟರ್‌ಮಾರ್ಕ್‌ ಹೊಂದಿರಬೇಕು. ಇದರಿಂದ ಯಾರೂ ದಾರಿ ತಪ್ಪುವುದಿಲ್ಲ’ ಎಂದು ಸಲಹೆ ನೀಡಿದ ಪ್ರಧಾನಿ, “ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಯಾರಾದರೂ ಡೀಪ್‌ ಫೇಕ್‌ ಅನ್ನು ಬಳಸಬಹುದು’ ಎಂದರು.

“ಮಾನವ ಉತ್ಪಾದಕತೆಯನ್ನು ಸುಧಾರಿಸಲು ಚಾಟ್‌ಜಿಪಿಟಿಯಂತಹ ಪರಿಕರಗಳ ಬಳಕೆ ಉಪಯುಕ್ತವಾಗಿವೆ. ಆದರೆ ತಂತ್ರಜ್ಞಾನವನ್ನು ಬಳಸುವವರು ಸೋಮಾರಿಯಾಗಿ ತಪ್ಪು ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಬಿಲ್‌ಗೇಟ್ಸ್‌, “ಇದು ಎಐ ಆರಂಭಿಕ ದಿನಗಳು. ಇದು ನಮಗೆ ಕಷ್ಟಕರವೆಂದು ಭಾವಿಸುವ ಕೆಲಸಗಳನ್ನು ಮಾಡುತ್ತದೆ. ಆದರೆ ನಾವು ಸುಲಭ ಎಂದು ಭಾವಿಸುವ ಯಾವುದನ್ನಾದರೂ ಮಾಡಲು ವಿಫ‌ಲವಾಗುತ್ತದೆ. ಎಐ ಒಂದು ದೊಡ್ಡ ಅವಕಾಶ. ಆದರೊಂದಿಗೆ ಕೆಲವು ಸವಾಲುಗಳು ಕೂಡ ಇವೆ’ ಎಂದು ಹೇಳಿದರು.

“ನಮೋ ಡ್ರೋನ್‌ ದೀದಿ’ ಅಂತಹ ನವೀನ ಯೋಜನೆಗಳ ಮೂಲಕ ಮಹಿಳೆಯರ ಸಶಕ್ತೀಕರಣದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್‌ ತಂತ್ರಜ್ಞಾನ ವಿಸ್ತರಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಇದೇ ಸಂದರ್ಭದಲ್ಲಿ ನಮೋ ಆ್ಯಪ್‌ ಬಳಸಿ ಮೋದಿ ಅವರೊಂದಿಗೆ ಬಿಲ್‌ಗೇಟ್ಸ್‌ ಸೆಲ್ಫಿ ತೆಗೆದುಕೊಂಡರು.

Advertisement

ಪ್ರಧಾನಿ ಮೋದಿ ಏನು ಹೇಳಿದರು?
ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ತಂತ್ರಜ್ಞಾನ ದೊಡ್ಡ ಪಾತ್ರ ವಹಿಸಲಿದೆ.
ಎಐ ತಂತಜ್ಞಾನದಿಂದ ಸೃಷ್ಟಿಸಿದ ವೀಡಿಯೋಗಳು, ಫೋಟೋಗಳು ವಾಟರ್‌ಮಾರ್ಕ್‌ ಹೊಂದಿರಬೇಕು.
ವಿಶ್ವದಲ್ಲಿ ಡಿಜಿಟಲ್‌ ವಿಭಜನೆಯ ಬಗ್ಗೆ ಮಾತುಗಳು ಬರುತ್ತಿವೆ. ಭಾರತದಲ್ಲಿ ಆ ರೀತಿ ಆಗಲು ಬಿಡುವುದಿಲ್ಲ.
ಕಡಿಮೆ ವೆಚ್ಚದಲ್ಲಿ ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ಹಣಕಾಸಿನ ನೆರವಿನ ಭರವಸೆ.

ಮರುಬಳಕೆ ವಸ್ತುಗಳಿಂದ ತಯಾರಿಸಿದ ಮೋದಿ ಹಾಫ್ ಜಾಕೆಟ್‌
ಬಿಲ್‌ಗೇಟ್ಸ್‌ ಜತೆ ಮಾತುಕತೆ ವೇಳೆ ಭಾರತ ದಲ್ಲಿ ತ್ಯಾಜ್ಯವನ್ನು ಹೇಗೆ ಮರುಬಳಕೆ ಮಾಡಲಾಗುತ್ತದೆ ಎಂಬುದನ್ನು ಮೋದಿ ವಿವರಿಸಿದರು. ಅಲ್ಲದೇ ತಾವು ಧರಿಸಿರುವ ಹಾಫ್ ಜಾಕೆಟ್‌ ಸಹ ಮರುಬಳಕೆಯ ವಸ್ತು ಗಳನ್ನು ಬಳಸಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು. ಟೈಲರ್‌ ಅಂಗಡಿಗಳಲ್ಲಿ ಉಳಿದ ಸಣ್ಣ-ಪುಟ್ಟ ಬಟ್ಟೆ ತುಂಡುಗಳು ಹಾಗೂ ಮರುಬಳಕೆಯ ಪ್ಲಾಸ್ಟಿಕ್‌ ಬಾಟಲ್‌ಗ‌ಳನ್ನು ಬಳಸಿ ಈ ಹಾಫ್ ಜಾಕೆಟ್‌ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು. ಅಲ್ಲದೇ ನವೀಕರಿಸ ಬಹುದಾದ ಇಂಧನಕ್ಕೆ ಭಾರತದಲ್ಲಿ ಹೆಚ್ಚಿನ ಉತ್ತೇಜನೆ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next