Advertisement

ಕಾಂಗ್ರೆಸ್‌ ನಾಶಕ್ಕೆ ಮೋದಿ ಯತ್ನ

07:00 AM Mar 18, 2018 | Team Udayavani |

ಹೊಸದಿಲ್ಲಿ: ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ಅಹಂಕಾರ ಮತ್ತು ಅಧಿಕಾರದ ಹಪಾಹಪಿ ಹೊಂದಿದೆ. ಮೋದಿಯ ವರ್ತನೆ ನಾಟಕೀಯವಾಗಿದೆ. ಪ್ರಾಮಾಣಿಕತೆಯೇ ಇಲ್ಲ ಎಂದು ನವದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಪೂರ್ಣಾಧಿವೇಶನದಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಮೊದಲು ಕರ್ನಾಟಕದಲ್ಲಿ ಬಿಜೆಪಿ ಸೋಲಲಿದೆ. ನಂತರ ಇಡೀ ದೇಶದಲ್ಲಿ ನಾವು ಬಿಜೆಪಿಯನ್ನು ಸೋಲಿಸುತ್ತೇವೆ. ಪಕ್ಷದ ಕಾರ್ಯಕರ್ತರು ಎಂದಿಗೂ ತಮ್ಮೊಳಗಿನ ಜಗಳದಲ್ಲಿ ಮುಳುಗಬಾರದು. ಬದಲಿಗೆ ಬಿಜೆಪಿಯ ಸರ್ವಾಧಿಕಾರಿ ಮತ್ತು ಅಸಹಿಷ್ಣುತೆ ವರ್ತನೆಯ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾರೆ.

Advertisement

ಇಂದಿರಾ ಚಿಕ್ಕಮಗಳೂರಲ್ಲಿ ಗೆದ್ದಂತೆ…: ಚಿಕ್ಕಮಗಳೂರಿನಲ್ಲಿ 40 ವರ್ಷಗಳ ಹಿಂದೆ ಗೆಲ್ಲುವ ಮೂಲಕ ಭಾರತದ ರಾಜಕೀಯಕ್ಕೆ ಹೊಸ ದಿಕ್ಕು ನೀಡಿದ್ದರು. ಮತ್ತೂಮ್ಮೆ ಪಕ್ಷ ಇದೇ ರೀತಿ ಪುಟಿದೇಳಬೇಕಿದೆ. ಪಕ್ಷ ಇಂಥದ್ದೇ ಸಾಧನೆ ಮಾಡಬೇಕು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್‌ ಎಂಬುದು ಕೇವಲ ರಾಜಕೀಯದ ಪಕ್ಷವಲ್ಲ. ಇದೊಂದು ಚಳವಳಿ. ಹಿಂದಿನಿಂದಲೂ ಪುರಸ್ಕರಿಸಲ್ಪಟ್ಟ ಚಳವಳಿ ಇದು. ಗುಜರಾತ್‌, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಹಾಗೂ ಉಪಚುನಾವಣೆಗಳು ಬಿಜೆಪಿಗೆ ಪಾಠ ಕಲಿಸಿವೆ. ಅಲ್ಲಿಯವರೆಗೂ ಕಾಂಗ್ರೆಸ್‌ ಬಗ್ಗೆ ಜನರಿಗೆ ಎಷ್ಟು ಗೌರವವಿದೆ ಎಂಬುದು ಬಿಜೆಪಿಗೆ ತಿಳಿದಿರಲಿಲ್ಲ ಎಂದಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಬಂದಾಗ ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ ಹಾಗೂ ನ ಖಾವೂಂಗಾ, ನ ಖಾನೇ ದೂಂಗಾ ಎಂದು ಮೋದಿ ಸರಕಾರ ಹೇಳಿತ್ತು. ಇವೆಲ್ಲವೂ ಮತ ಪಡೆಯುವ ನಾಟಕಗಳಷ್ಟೇ. ಇದೇ ವೇಳೆ ಕಾಂಗ್ರೆಸ್‌ನ ಘೋಷವಾಕ್ಯವನ್ನು ಉಲ್ಲೇಖೀಸಿದಾಗ ಸೇರಿದ ಪಕ್ಷದ ಕಾರ್ಯಕರ್ತರು ಮೆಚ್ಚುಗೆಯಿಂದ ಕರತಾಡನ ಮಾಡಿದರು.

ಕಾಂಗ್ರೆಸ್‌ ಮುಕ್ತ ಭಾರತಕ್ಕಾಗಿ ಬಿಜೆಪಿ ಶ್ರಮಿಸಿತೇ ಹೊರತು, ದೇಶವನ್ನು ಮುನ್ನಡೆಸಲಿಲ್ಲ. ಕಾಂಗ್ರೆಸ್‌ ನಾಶ ಮಾಡಲು ಕಳೆದ ನಾಲ್ಕು ವರ್ಷದಲ್ಲಿ ಎಲ್ಲ ಪ್ರಯತ್ನವನ್ನೂ ಬಿಜೆಪಿ ಮಾಡಿತು. ಕಾಂಗ್ರೆಸ್‌ ಎಂದಿಗೂ ಬಗ್ಗಿಲ್ಲ. ಬಗ್ಗುವುದೂ ಇಲ್ಲ. ಜನರಿಗೆ ಕಾಂಗ್ರೆಸ್‌ ಮುಕ್ತ ಭಾರತ ಬೇಕಿಲ್ಲ. ಆದರೆ ಅವರಿಗೆ ಭ್ರಷ್ಟಾಚಾರ ಮುಕ್ತ ಭಾರತ ಬೇಕಿದೆ. ಮೋದಿ ಸರಕಾರದ ಅಹಂಕಾರದ ವರ್ತನೆಯು ಸಂಸತ್ತು ಹಾಗೂ ಸಂವಿಧಾನಕ್ಕೂ ಅವಮಾನ ಮಾಡಿದೆ. ಪ್ರತಿಪಕ್ಷಗಳ ಮುಖಂಡರ ಮೇಲೆ ನಕಲಿ ಕೇಸ್‌ಗಳನ್ನು ದಾಖಲಿಸಲಾಯಿತು. ಮಾಧ್ಯಮಗಳನ್ನು ಹತ್ತಿಕ್ಕಲಾಯಿತು. ಇವೆಲ್ಲದರ ವಿರುದ್ಧ ಕಾಂಗ್ರೆಸ್‌ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದೆ. ನಾವು ಮೋದಿ ಹಾಗೂ ಅವರ ಉದ್ದೇಶವನ್ನು ಬಹಿರಂಗ ಗೊಳಿಸುತ್ತಲೇ ಬಂದೆವು ಸವಾಲಿನ ಸಮಯದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡ ರಾಹುಲ್‌ ಗಾಂಧಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ. 

ಬಿಜೆಪಿ ಕಾರ್ಯಕರ್ತರಂತೆ ಮನೆ ಮನೆಗೆ ತೆರಳಿ: ಖರ್ಗೆ
ಬಿಜೆಪಿ ಹಾಗೂ ಆರೆಸ್ಸೆಸ್‌ ಕಾರ್ಯಕರ್ತ ರಂತೆಯೇ ಕರ್ನಾಟಕದಲ್ಲಿ ಪ್ರತಿ ಮನೆ ಮನೆಗೂ ಕಾಂಗ್ರೆಸ್‌ ಕಾರ್ಯಕರ್ತರು ತೆರಳ ಬೇಕು. ಜನರ ಆಶೀರ್ವಾದ ಮತ್ತು ಸಹಕಾರದಿಂದ ನಾವು ಮತ್ತೂಮ್ಮೆ ಕರ್ನಾಟಕ ದಲ್ಲಿ ಅಧಿಕಾರ ಹಿಡಿಯುತ್ತೇವೆ. ಕಾಂಗ್ರೆಸ್‌ನಿಂದ ಅಧಿಕಾರ ಕಿತ್ತುಕೊಳ್ಳಲು ಭಾರಿ ಶ್ರಮ ವಹಿಸುತ್ತಿದೆ ಎಂದರು. ಶಾಯಿರಿಯನ್ನು ವಾಚಿಸಿದ ಖರ್ಗೆ, ಬಿಜೆಪಿ ಹಾಗೂ ಆರೆಸ್ಸೆಸ್ಸನ್ನು ಜನರ ರಕ್ತ ಕುಡಿಯುತ್ತಿದೆ ಎಂದೂ ಅವರು ಹೇಳಿದರು. 

Advertisement

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ನಿಲುವಳಿಯಲ್ಲಿ ಘೋಷಿಸ ಲಾ ಗಿದೆ. ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್‌ ಮಂಡಿಸಿದ ಈ ನಿಲುವಳಿಯ ಬಗ್ಗೆ ಚರ್ಚೆ ನಡೆಸಲಾಗಿದ್ದು, 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳ್ಳುವ ಹುಸಿ ಭರವಸೆಯನ್ನು ಮೋದಿ ಸರಕಾರ ಘೋಷಿಸಿದೆ. ಆದರೆ ಯುಪಿಎ ಸರಕಾರ 2009ರಲ್ಲಿ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ ಸಾಲ ಮನ್ನಾ ಯೋಜನೆಯಿಂದ 3.2 ಲಕ್ಷ ರೈತರಿಗೆ ಅನುಕೂಲ ವಾಗಿತ್ತು. ಮೋದಿ ಸರಕಾರ ಜಾರಿಗೊ ಳಿ ಸಿರುವ ಬೆಳೆ ವಿಮೆ ಯೋಜನೆಯು ರೈತರಿಗಿಂತ ಖಾಸಗಿ ವಿಮೆ ಕಂಪನಿಗಳಿಗೆ ಅನುಕೂಲವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. 

ಸಮಾನ ಮನಸ್ಕರ ಜತೆಗೆ ಮೈತ್ರಿ: ಇದೇ ವೇಳೆ ದೇಶದಲ್ಲಿ ಮೈತ್ರಿ ರಾಜಕೀಯವೇ ಮುಂದುವರಿದಿ ರುವುದರಿಂದ ಅಗತ್ಯಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುವ  ಬಗ್ಗೆ ನಿಲುವಳಿಯಲ್ಲಿ ಪ್ರಸ್ತಾಪಿಲಾಗಿದೆ. ಈ ಮೂಲಕ 2019ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪ್ರಚಾರಕ್ಕೆ ತಕ್ಕ ಪ್ರತಿತಂತ್ರ ರೂಪಿಸಲೂ ಯೋಜನೆ ರೂಪಿಸಲಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಿಲುವಿನಿಂದಾಗಿ ದೇಶಕ್ಕೇ ಅಪಾಯ ಎಂದು ಕಾಂಗ್ರೆಸ್‌ ಆರೋಪಿಸಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದಾಗಿ ದೇಶದ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಅಪಾಯ ಉಂಟಾಗಿದೆ ಎಂದು ಕಾಂಗ್ರೆಸ್‌ ದೂರಿದೆ. ಮುಂದಿನ ದಿನಗಳಲ್ಲಿ ಸಂವಿಧಾನ ರಕ್ಷಣೆ ಬಗ್ಗೆ ಹೆಚ್ಚಿನ ಗಮನ ನೀಡಲಾ ಗುತ್ತದೆ. ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿಲುವಳಿ ಮಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next