Advertisement
ಅವರು ಆ. 9ರಂದು ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
Related Articles
ಇದಕ್ಕೆ ಪರಿಹಾರವಾಗಿ ಕಾನೂನು ಮಾರ್ಪಾಡು ಮಾಡುವ ಮೂಲಕ ಎಲ್ಲ ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ಬರುವಂತೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಖಾಸಗಿ ಶಾಲೆಗಳಿಗೆ ಹೋಗುವ ಸಂದರ್ಭವನ್ನು ಸರಕಾರವೇ ಕಲ್ಪಿಸಿದಂತಾಗುತ್ತದೆ ಎಂದು ಅವರು ದೂರಿದರು.
Advertisement
ದುರ್ಬಲ ಕಟ್ಟಡಕೆದಿಲ ಗ್ರಾಮದ ಗಡಿಯಾರದಲ್ಲಿ ಶಾಲಾ ಜಮೀನಿನಲ್ಲಿ ಅಂಗನವಾಡಿ ಕಟ್ಟಡವಿದ್ದು ಅದು ದುರ್ಬಲವಾಗಿದೆ. ಇಲ್ಲಿನ ಶಾಲೆಯ ಎದುರು ಇರುವ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ಆಗುವಂತೆ ಜಮೀನು ಹಸ್ತಾಂತರ ಮಾಡಿಕೊಡಬೇಕು. ಮಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸಂತೆ ಮಾರ್ಕೆಟ್‌ನಲ್ಲಿ ಯಾವುದೇ ನೈರ್ಮಲ್ಯವಿಲ್ಲದೆ ಪರಿಸರ ದುರ್ನಾತ ಬರುತ್ತಿದೆ. ಸ್ವತ್ಛತೆ ಇಲ್ಲದೆ ನಡೆದಾಡಲು ಕೂಡಾ ಹೇಸಿಗೆಯಾಗುತ್ತಿದೆ ಎಂದು ಸ್ಥಳೀಯ ಸದಸ್ಯ ಆದಂ ಕುಂಞ ಹೇಳಿದರು. ಸ್ವಚ್ಚತೆಯ ವಿಚಾರದಲ್ಲಿ ಸ್ಥಳೀಯ ಗ್ರಾ.ಪಂ. ಆಡಳಿತವೇ ಸೂಕ್ತ ಕ್ರಮ ಜರಗಿಸಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದರು. ಸರಕಾರದ ನಿಯಮಾವಳಿ ಪ್ರಕಾರ ಸರಕಾರದ ಜಮೀನನ್ನು ಇನ್ನೊಂದು ಇಲಾಖೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಅನುಮತಿ ಇಲ್ಲದೆ ನೀಡುವಂತಿಲ್ಲ. ಶಾಲೆಯ ಜಮೀನಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸುವುದಕ್ಕೆ ಆಕ್ಷೇಪವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ತಿಳಿಸಿದರು. ಬಂಟ್ರಿಂಜ ಶಾಲೆ ಮತ್ತು ಅಂಗನವಾಡಿ ಕೇಂದ್ರ ಕಟ್ಟಡವು ದುರ್ಬಲವಾಗಿದ್ದು ಅದಕ್ಕೆ ಅನುದಾನ ಒದಗಿಸಬೇಕು ಎಂದು ಸ್ಥಳೀಯ ಸದಸ್ಯೆ ಗೀತಾ ಚಂದ್ರಶೇಖರ್ ಮನವಿ ಮಾಡಿದರು. ಕೊಳ್ನಾಡು ಗ್ರಾಮದ ವಿವಿಧ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯು ವಿದ್ಯಾರ್ಥಿಗಳ ಶೂ ಖರೀದಿಯನ್ನು ಮಾಡಿದೆ. ಶಾಲಾಭಿವೃದ್ಧಿ ಸಮಿತಿಗೆ ಅದನ್ನು ಖರೀದಿಸಲು ಅನುಮತಿ ಹೊಂದಿದೆ. ಆದರೆ ಸಮಿತಿಗೆ ತಿಳಿಯದಂತೆ ಶಾಲೆಗೆ ಶೂ ವಿತರಣೆ ಆಗಿದೆ. ಇದರಿಂದಾಗಿ ಸಮಿತಿ ನಾಮಕಾವಸ್ಥೆಯಾಗಿದೆ ಎಂದು ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೇಳಿದರು. ಇದಕ್ಕೆ ಉತ್ತರಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಇಲಾಖೆಗೆ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲ. ಶಾಲಾ ಮುಖ್ಯಶಿಕ್ಷಕರಿಂದ ಅಂತಹ ಪ್ರಮಾದ ನಡೆದಿದ್ದರೆ ಪರಿಶೀಲಿಸಲಾಗುವುದು ಎಂದರು. ವೈದ್ಯರಿಲ್ಲ
ಸಂಗಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ತೆರವಾಗಿದೆ. ಇಲ್ಲಿಗೆ ಯಾವುದೇ ವೈದ್ಯರು ಬರುವುದಿಲ್ಲ. ಅನೇಕ ವೈದ್ಯರು ವಾಸ್ತವ್ಯದ ಕಚೇರಿ ಕಟ್ಟಡ ಇದ್ದರೆ ಅಲ್ಲಿಗೆ ಬರುವುದಿಲ್ಲ. ಕಾರಣ ಅಲ್ಲಿನ ಡ್ನೂಟಿಗೆ ಹಾಜರಾದರೆ ಅಲ್ಲಿಯೇ ನಿಲ್ಲಬೇಕಾದ ಕಾರಣ ಕಟ್ಟಡ ಇಲ್ಲದ ಸ್ಥಳಕ್ಕೆ ವರ್ಗಾಯಿಸಿಕೊಂಡು ಹೋಗುತ್ತಾರೆ. ಕಾರಣ ಅವರು ರಾತ್ರಿ ನಿಲ್ಲಲು ತಯಾರಿಲ್ಲದ ಸ್ಥಿತಿ ಉಂಟಾಗಿದೆ ಎಂದು ಪ್ರಭಾಕರ ಪ್ರಭು ಹೇಳಿದರು. ಅಶಾ ಕಾರ್ಯಕರ್ತರಿಲ್ಲ
ಅರಳ ಗ್ರಾಮಕ್ಕೆ ಯಾರು ಆಶಾ ಕಾರ್ಯಕರ್ತರಿಲ್ಲ. ಅದನ್ನು ನಿರ್ವಹಿಸಲು ಯಾರೂ ಮುಂದೆ ಬರುತ್ತಿಲ್ಲ. ಆರೋಗ್ಯ ಇಲಾಖೆ ಇಂತಹ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯ ಸದಸ್ಯೆ ಮಂಜುಳಾ ಸದಾನಂದ ಮನವಿ ಮಾಡಿದರು. ಪ್ರಸ್ತುತ ಆಶಾ ಕಾರ್ಯಕರ್ತರಿಗೆ ನೀಡುವ ಸಂಭಾವನೆ ಸಾಕಾಗದೆ ಇರುವುದರಿಂದ ಅದನ್ನು ನಿರ್ವಹಿಸಲು ಯಾರು ಮುಂದೆ ಬರುತ್ತಿಲ್ಲ. ಸರಕಾರದ ಮಟ್ಟದಲ್ಲಿ ಇದಕ್ಕೆ ಸೂಕ್ತ ಪರಿಹಾರ ಆಗಬೇಕು ಎಂದು ಆರೋಗ್ಯ ಅಧಿಕಾರಿ ವಿವರಣೆ ನೀಡಿದರು. ಸಜೀಪಮೂಡ ಅಂಗನವಾಡಿಗೆ ಮಂಜೂರಾದ ಅನುದಾನ ತನಗೆ ಮಾಹಿತಿ ಇಲ್ಲದೆ ನಿಲುಗಡೆ ಮಾಡಿದೆ. ಯಾಕೆ ಹೀಗೆ ಮಾಡಲಾಗಿದೆ ಎಂದು ಕೆ.ಸಂಜೀವ ಪೂಜಾರಿ ಪ್ರಶ್ನಿಸಿದರು. ಜಿಲ್ಲೆಯಿಂದ ಮಂಜೂರಾದ ಅನುದಾನದಲ್ಲಿ ಕೊರತೆ ಆಗಿದ್ದು ಮುಂದಿನ ಹಂತದಲ್ಲಿ ನೀಡಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಜಯಶ್ರೀ ಕೊಡಂದೂರು, ತಾ.ಪಂ. ಸದಸ್ಯರಾದ ರಮೇಶ್ ಕುಡುಮೇರು, ಪದ್ಮಾವತಿ ಬಿ. ಪೂಜಾರಿ, ಮಲ್ಲಿಕಾ ವಿ. ಶೆಟ್ಟಿ, ಸ್ವಪ್ನಾ ವಿಶ್ವನಾಥ ಪೂಜಾರಿ, ಯಶವಂತ ಪೂಜಾರಿ ಪೊಳಲಿ, ಶಿವಪ್ರಸಾದ್ ಕನಪಾಡಿ, ಗಣೇಶ್ ಸುವರ್ಣ, ಗಾಯತ್ರಿ ರವೀಂದ್ರ ಸಪಲ್ಯ, ಬೇಬಿ, ಪದ್ಮಶ್ರೀ ದುರ್ಗೆಶ್ ಶೆಟ್ಟಿ, ನಸೀಮಾ ಬೇಗಂ, ರಘು ಮಲ್ಲಡ್ಕ, ಲಕ್ಷಿ$¾à ಗೋಪಾಲ ಆಚಾರ್ಯ, ಸವಿತ ಹೇಮಂತ ಕರ್ಕೆರ, ಮಹಾಬಲ ಆಳ್ವ, ನವೀನ್ ಪೂಜಾರಿ ಪಾದಲ್ಪಾಡಿ , ಹೈದರ್ ಪಾದಲ್ಪಾಡಿ, ಮಂಜುಳಾ ಕುಶಲ ಎಂ., ಶೋಭಾ ರೈ, ಬಿ ವನಜಾಕ್ಷಿ, ನಾರಾಯಣ ಶೆಟ್ಟಿ, ಕುಮಾರ್ ಭಟ್ ಬದಿಕೋಡಿ, ಪದ್ಮನಾಭ ನಾಯ್ಕ ಅಳಿಕೆ, ಕವಿತಾ ಎಸ್. ನಾಯ್ಕ ಸಹಿತ ಹತ್ತು ಗ್ರಾ.ಪಂ.ಗಳ ಅಧ್ಯಕ್ಷರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಸ್ವಾಗತಿಸಿ ವಂದಿಸಿದರು.