Advertisement
1979ರಲ್ಲಿ ಪ್ರವಾಹಪೀಡಿತ ಮೊರ್ಬಿಯಲ್ಲಿ ಆರೆಸ್ಸೆಸ್‌ನ ಯುವ ಕಾರ್ಯಕರ್ತನಾಗಿ ಒಂದು ತಿಂಗಳ ಕಾಲ ದುಡಿದಾಗ, 2001ರಲ್ಲಿ ಗುಜರಾತ್‌ನ ಕಛ್ ಭೂಕಂಪದ ಸಂದರ್ಭದಲ್ಲಿ ಅಲ್ಲಿಗೆ ಧಾವಿಸಿದಾಗ, 2006ರ ಸೂರತ್ ಪ್ರವಾಹದ ವೇಳೆ ಮುಖ್ಯಮಂತ್ರಿಯಾಗಿ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿದಾಗ, 2014ರಲ್ಲಿ ಪ್ರಧಾನಮಂತ್ರಿಯಾಗಿ ನೆರೆಪೀಡಿತ ಕಾಶ್ಮೀರದಲ್ಲಿ ಪರಿಸ್ಥಿತಿ ಅವಲೋಕಿಸಿದಾಗ, 2020ರಲ್ಲಿ ಕೊರೊನಾ ಸೋಂಕಿನ ಭೀಕರತೆಯನ್ನು ಎದುರಿಸಿದಾಗ…!
Related Articles
ಮೋದಿಯವರು 6 ವಾರಗಳ ಕಾಲ ಪ್ರವಾಹಪೀಡಿತ ಮೊರ್ಬಿಯಲ್ಲೇ ಮೊಕ್ಕಾಂ ಹೂಡಿದ್ದರು. ಕೆಸರು, ಹೂಳುಗಳನ್ನು ಎತ್ತುತ್ತಾ, ಪ್ರಾಣಿಗಳ ಕಳೇಬರಗಳನ್ನು ತೆರವುಗೊಳಿಸುತ್ತಾ, ಕೊಳೆತ ಶವಗಳನ್ನು ಹೊತ್ತೂಯ್ದು ಅಂತ್ಯಕ್ರಿಯೆ ಮಾಡುತ್ತಾ ಕಾಲ ಕಳೆದಿದ್ದರು. ಪ್ರವಾಹದಲ್ಲಿ ಮುಳುಗಡೆಯಾಗುವ ಭೀತಿಯಿಂದ ದೇವಸ್ಥಾನದ ಗೋಪುರವನ್ನು ಹತ್ತಿ ಕುಳಿತಿದ್ದ ಅರ್ಚಕರೊಬ್ಬರನ್ನು ಮೋದಿ ಮತ್ತು ಅವರ ತಂಡ ರಕ್ಷಿಸಿತ್ತು. ಶಾಂತಿವನ ಆಶ್ರಮದೊಳಗೆ 4 ದಿನಗಳಿಂದ ಶವಗಳು ಕೊಳೆತು, ದುರ್ವಾಸನೆ ಮೂಗಿಗೆ ಬಡಿಯುತ್ತಿತ್ತು. ಅತ್ತ ಕಾಲಿಡಲು ಯಾರೂ ಧೈರ್ಯ ತೋರಿರಲಿಲ್ಲ. ಅಂಥ ಸಂದರ್ಭದಲ್ಲಿ ಒಳಗೆ ಹೋಗಿ, 12 ಮೃತದೇಹಗಳನ್ನು ಸ್ವತಃ ಮೋದಿಯವರೇ ಹೊರಗೆ ಸಾಗಿಸಿ, ಅಂತ್ಯಕ್ರಿಯೆ ನೆರವೇರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದನ್ನು ಈ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.
Advertisement
ಮಸೀದಿ ಸ್ವತ್ಛಗೊಳಿಸಿದ್ದರು:ಈದ್ ಹಬ್ಬ ಸಮೀಪಿಸುತ್ತಿದ್ದ ಕಾರಣ ಮೋದಿಯವರೇ ಸ್ವತಃ ಮೊರ್ಬಿಯಲ್ಲಿನ ಮಸೀದಿಯನ್ನು ಸ್ವತ್ಛಗೊಳಿಸುವ ಕೆಲಸ ಮಾಡಿದ್ದರು. ಹಬ್ಬದ ದಿನ ಸ್ಥಳೀಯರು ಮಸೀದಿಯಲ್ಲಿ ನಮಾಜ್ ಮಾಡಲು ಸಾಧ್ಯವಾಗಲಿ ಎಂಬ ಕಾರಣಕ್ಕೆ ಅವರು ಈ ಕೆಲಸ ಮಾಡಿದ್ದರು ಎಂಬ ಸ್ಥಳೀಯರ ಮಾತುಗಳೂ ಈ ಕೃತಿಯಲ್ಲಿವೆ.