Advertisement

17ಕ್ಕೆ ಮಾಲ್ಡೀವ್ಸ್‌ಗೆ ಪಿಎಂ ಮೋದಿ ಭೇಟಿ

08:34 AM Nov 10, 2018 | |

ಹೊಸದಿಲ್ಲಿ/ವಾಷಿಂಗ್ಟನ್‌: ಮಾಲ್ಡೀವ್ಸ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ರಾಹಿಂ ಮೊಹಮ್ಮದ್‌ ಸೊಲಿಹ್‌ ಅವರ ಪ್ರಮಾಣ ವಚನ ಸಮಾರಂಭ ನ. 17ರಂದು ನಡೆಯಲಿದ್ದು, ಈ ಸಮಾರಂಭದಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ. ಇದು ಆ ದೇಶಕ್ಕೆ ಮೋದಿ ನೀಡುತ್ತಿರುವ ಮೊದಲ ಭೇಟಿ. ಸೆಪ್ಟಂಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅಂದಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ ವಿರುದ್ಧ ಐತಿಹಾಸಿಕ ಜಯ ಗಳಿಸಿದ ನಂತರ ಇಬ್ರಾಹಿಂ, ಪದಗ್ರಹಣ ಸಮಾರಂಭಕ್ಕೆ ಬರುವಂತೆ ಪ್ರಧಾನಿಗೆ ಆಹ್ವಾನ ನೀಡಿದ್ದರು. ಈ ಭೇಟಿಗೆ ಮುನ್ನ ಪ್ರಧಾನಿ ಸಿಂಗಾಪುರದಲ್ಲಿ 14, 15ರಂದು ನಡೆಯಲಿರುವ ಪೂರ್ವ ಏಷ್ಯಾ ರಾಷ್ಟ್ರಗಳ 13ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next