Advertisement

ಮೋದಿ, ಸಿಂಗ್‌ ಫಾರಿನ್‌ ಟೂರ್‌

06:00 AM Jul 29, 2018 | Team Udayavani |

ಪ್ರಧಾನಿ ನರೇಂದ್ರ ಮೋದಿ ಸದಾ ವಿದೇಶ ಪ್ರವಾಸದಲ್ಲಿರುತ್ತಾರೆ ಎಂಬ ಪ್ರತಿಪಕ್ಷಗಳ ಟೀಕೆಗಳು ಸಾಮಾನ್ಯವಾಗಿವೆ. ಆದರೆ, ಕಳೆದ ಯುಪಿಎ-2 ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರ ವಿದೇಶಿ ಪ್ರವಾಸವನ್ನು ಮೋದಿಗೆ ಹೋಲಿಕೆ ಮಾಡಿದರೆ ಬಹುತೇಕವಾಗಿ ಸಾಮ್ಯತೆ ಇದೆ. ಎನ್‌ಡಿಎ ಸರ್ಕಾರದ 4 ವರ್ಷದ ಅವಧಿಯಲ್ಲಿ 36 ಬಾರಿ ವಿದೇಶಿ ಪ್ರವಾಸ ಕೈಗೊಂಡಿರುವ ಮೋದಿ, ಏರ್‌ಇಂಡಿಯಾ ವಿಮಾನ ಬಳಸಿದ್ದಕ್ಕಾಗಿ 387.26 ಕೋಟಿ ರೂ. ವ್ಯಯಿಸಿದ್ದಾರೆ. ಯುಪಿಎ-2 ಸರ್ಕಾರದಲ್ಲಿ ಸಿಂಗ್‌ ಕೂಡ 4 ವರ್ಷದಲ್ಲಿ 31 ವಿದೇಶಿ ಪ್ರವಾಸ ಕೈಗೊಂಡು ಏರ್‌ಇಂಡಿಯಾಗೆ 386.35 ಕೋಟಿ ರೂ. ಪಾವತಿಸಿದ್ದಾರೆ. ಇದರಲ್ಲಿ ಸಿಂಗ್‌ಗಿಂತ ಮೋದಿ 91 ಲಕ್ಷ ರೂ. ಹೆಚ್ಚು ವ್ಯಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next