Advertisement
ಕಾನ್ಫರೆನ್ಸ್ ನ್ನು ಉದ್ದೇಶಿಸಿ ಮಾತನಾಡಿ, ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿನ ಪರಿಸ್ಥಿತಿಯನ್ನು ನಾವು ಗಮನಿಸಿದ್ದೇವೆ. ವಿಶೇಷವಾಗಿ ಉತ್ತರ ಪ್ರದೇಶದ ಬಡವರು ಮನೆ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ ಅಂತ ನಂಬಿಕೆ ಇಟ್ಟಿರಲಿಲ್ಲ, ಹಿಂದಿನ ಸಾಲಿನ ಆವಾಸ್ ಯೊಜನೆಯಡಿಯಲ್ಲಿ ನಿರ್ಮಾಣವಾದ ಮನೆಗಳನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲವೆಂದು ಮೋದಿ ಹೇಳಿದರು.
Related Articles
Advertisement
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಈ ಆರ್ಥಿಕ ನೆರವನ್ನು ಮೊದಲ ಕಂತಿನಲ್ಲಿ ಸುಮಾರು 5.30 ಲಕ್ಷ ಫಲಾನುಭವಿಗಳು, ಎರಡನೇ ಕಂತಿನಲ್ಲಿ 80,000 ಫಲಾನುಭವಿಗಳು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಆವಾಸ್ ಯೋಜನೆಯಡಿಯಲ್ಲಿ ಈಗಾಗಲೇ 1.26 ಕೋಟಿ ಮನೆಗಳು ಇಡೀ ದೇಶದಾದ್ಯಂತ ನಿರ್ಮಿಸಲಾಗಿದೆ. ಎಂದು ಹೇಳಿದರು.
‘2022ರೊಳಗಾಗಿ ಎಲ್ಲರಿಗೂ ಮನೆ ಸೌಲಭ್ಯ’ (ಹೌಸಿಂಗ್ ಫಾರ್ ಆಲ್ ಬೈ 2022) ಇರಬೇಕು ಎಂಬ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಮುಖ ಕಾರ್ಯಕ್ರಮವನ್ನು ಪ್ರಧಾನಿ ಮೋದಿ 2016 ರ ನವೆಂಬರ್ 20ರಂದು ಘೋಷಿಸಿದ್ದರು.
ಇದನ್ನೂ ಓದಿ : ನೀತಿ ಆಯೋಗ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ: ಶೆಟ್ಟರ್ ಹರ್ಷ
ಫಲಾನುಭವಿಗಳಾದ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮತ್ತು ಸ್ವಚ್ಛ ಭಾರತ್ ಮಿಶನ್ ಯೋಜನೆಯಡಿಯಲ್ಲಿ ಪ್ರೋತ್ಸಾಹಿಸಲಾಗುತ್ತದೆ ಎಂದರು.
ವಿಡೀಯೋ ಕಾನ್ಫರೆನ್ಸ್ ನಲ್ಲಿ ಕೇಂದ್ರೀಯ ಗ್ರಾಮೀಣ ಅಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು.
ಇದನ್ನೂ ಓದಿ : ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇ