ಅಹಮದಾಬಾದ್: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ (ಸೆಪ್ಟೆಂಬರ್ 20) ಗುಜರಾತ್ ನ ವಡೋದರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ “ಮೋದಿ, ಮೋದಿ” ಎಂದು ಘೋಷಣೆ ಕೂಗುವ ಮೂಲಕ ಸ್ವಾಗತಿಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಾನಿನಿಯರ ಫ್ಯಾಷನ್ ಟ್ರೆಂಡ್, ಫ್ಯಾಸಿನೇಟಿಂಗ್ ನೈಲ್ ಆರ್ಟ್
ಬಳಿಕ ಕೇಜ್ರಿವಾಲ್, ಕೇಜ್ರಿವಾಲ್ ಎಂದು ಘೋಷಣೆ ಕೂಗಿರುವುದಾಗಿ ವರದಿ ವಿವರಿಸಿದೆ.ಅರವಿಂದ್ ಕೇಜ್ರಿವಾಲ್ ಅವರು ಒಂದು ದಿನದ ಭೇಟಿಗಾಗಿ ಗುಜರಾತ್ ಗೆ ಆಗಮಿಸಿದ್ದರು.
ಕೇಜ್ರಿವಾಲ್ ವಡೋದರಾ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ವೇಳೆಯಲ್ಲಿ ಮೋದಿ, ಮೋದಿ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಕೇಜ್ರಿವಾಲ್ ನಗು ಬೀರಿ, ಪತ್ರಕರ್ತರಿದ್ದ ಬಳಿ ತೆರಳಿದ್ದರು ಎಂದು ವರದಿ ಹೇಳಿದೆ.
ಅರವಿಂದ್ ಕೇಜ್ರಿವಾಲ್ ಅವರನ್ನು ಮೋದಿಯ ಗುಜರಾತ್ ಗೆ ಹಾರ್ದಿಕವಾಗಿ ಸ್ವಾಗತಿಸಲಾಗಿದೆ ಎಂದು ಬಿಜೆಪಿಯ ಪ್ರೀತಿ ಗಾಂಧಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಆಮ್ ಆದ್ಮಿ ಪಕ್ಷ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಛಾಪನ್ನು ಮೂಡಿಸುವ ಹುಮ್ಮಸ್ಸಿನಲ್ಲಿದೆ.