Advertisement

ಕಥೆ ಹೇಳುವ ತಂಡದ ಜತೆ ಮೋದಿ ಮಾತುಕತೆ

02:12 PM Sep 28, 2020 | Suhan S |

ಬೆಂಗಳೂರು: ತಮ್ಮ ಮಾಸಿಕ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಭಾನುವಾ ರ ಪ್ರಧಾನಿ ನರೇಂದ್ರ ಮೋದಿಯವರು, ನಗರದ “ಇಂಡಿಯನ್‌ ಸ್ಟೋರಿ ಟೆಲ್ಲಿಂಗ್‌ ನೆಟ್‌ವರ್ಕ್‌’ ಬಗ್ಗೆ ಉಲ್ಲೇಖೀಸಿದರಲ್ಲದೆ, ಆ ಸಂಸ್ಥೆಯ ಕಲಾವಿದರೊಂದಿಗೆ ಮಾತನಾಡಿದರು.

Advertisement

ಕಾರ್ಯಕ್ರಮದ ಆರಂಭದಲ್ಲೇ ಭಾರತದಲ್ಲಿ ತಲತಲಾಂತರಗಳಿಂದ ಅಜ್ಜ-ಅಜ್ಜಿಯರ ಮೂಲಕ ಹರಿದು ಬಂದ ಕಥೆ ಹೇಳುವ ಕಲೆಯ ಬಗ್ಗೆ ವಿವರಿಸಿ, ಭಾರತೀಯ ಮಕ್ಕಳ ಮನಸ್ಸಿನ ಮೇಲೆ ಮೂಡಿಸುವ ತತ್ವಾದರ್ಶಗಳ ಮಹತ್ವವನ್ನು ಪ್ರಧಾನಿ ಉಲ್ಲೇಖೀಸಿದರು. “”ಹಿತೋಪದೇಶ, ಪಂಚತಂತ್ರ ಕಥೆಗಳನ್ನು ನಾವೆಲ್ಲರೂ ಕೇಳಿ ಬೆಳೆದಿದ್ದೇವೆ.ಆಕಥೆಗಳಲ್ಲಿ ಬರುತ್ತಿದ್ದ ಕಾಡು-ಮೇಡು, ಬೆಟ್ಟ-ಗುಡ್ಡ, ಪ್ರಾಣಿಗಳು, ಜನರು -ಇವೆಲ್ಲವೂ ಭ್ರಮಾಲೋಕಕ್ಕೆಕೊಂಡೊಯ್ಯುತ್ತಿದ್ದವು. ಇಂಥ ಕಥೆಗಳನ್ನು ಆಧುನಿಕ ತಂತ್ರಗಾರಿಕೆಗಳನ್ನು ಬಳಸಿ ಮಕ್ಕಳಿಗೆ ತಲುಪಿಸಲು ಕೆಲವಾರು ಸಂಸ್ಥೆಗಳು ನಮ್ಮಲ್ಲಿ ಶ್ರಮಿಸುತ್ತಿವೆ” ಎಂದರು.

ಕಲಾವಿದರೊಂದಿಗೆ ಮಾತುಕತೆ : “”ಬೆಂಗಳೂರು ಸ್ಟೋರಿ ಟೆಲ್ಲಿಂಗ್‌ ಸೊಸೈಟಿ ಸಂಸ್ಥೆಯು (ಬಿಎಸ್‌ಎಸ್‌) ಇಂಗ್ಲೀಷ್‌ ಸೇರಿದಂತೆ ಭಾರತದ 20 ಭಾಷೆಗಳಲ್ಲಿ ಮಕ್ಕಳಿಗೆ ಕಥೆಗಳನ್ನು ಡಿಜಿಟಲ್‌ ಮಾದರಿಯಲ್ಲಿ ತಲುಪಿಸುತ್ತಿದೆ” ಎಂದರಲ್ಲದೆ, ಬಿಎಸ್‌ಎಸ್‌ ತಂಡದ ಡಬ್ಬಿಂಗ್‌ ಕಲಾವಿದರಾದ ಅಪರ್ಣಾ ಅಥಾರೆ, ಶೈಲಜಾ ಸಂಪತ್‌, ಸೌಮ್ಯ ಶ್ರೀನಿವಾಸನ್‌, ಅಪರ್ಣಾಜೈಶಂಕರ್‌, ಲಾವಣ್ಯಾಪ್ರಸಾದ್‌ ಜತೆಗೆ ಮಾತುಕತೆ ನಡೆಸಿದರು.

ಕಥೆ ಕೇಳಿದ ಪ್ರಧಾನಿ : ಪ್ರಧಾನಿಯವರ ಜೊತೆಗೆ ಸಂತೋಷದಿಂದ ತಮ್ಮ ಪರಿಚಯವನ್ನು ಮಾಡಿಕೊಂಡ ಕಲಾವಿದರು, ತಾವು ಕಥೆ ಹೇಳುವ ಕೆಲಸದಲ್ಲಿ ತೊಡಗಿಸಿಕೊಂಡ ಬಗೆಯನ್ನು ವಿವರಿಸಿದರು. ಒಬ್ಬೊಬ್ಬರನ್ನಾಗಿ ಪರಿಚಯ ಮಾಡಿಕೊಂಡ ಪ್ರಧಾನಿ, ಕಲಾವಿದರಲ್ಲಿ ಯಾರಾದರೂ ಒಬ್ಬರು ಶ್ರೋತೃಗಳಿಗಾಗಿ ಒಂದು ಕಥೆಯನ್ನು ಹೇಳುವಂತೆ ಮನವಿ ಮಾಡಿದರು. ಆಗ, ಅಪರ್ಣಾ ಅಥಾರೆ ಅವರು ಶ್ರೀಕೃಷ್ಣ ದೇವರಾಯ ಹಾಗೂ ತೆನಾಲಿರಾಮರ ಕಥೆಯೊಂದನ್ನು ವಿವರಿಸಿದರು.

ಆ ಕಥೆಯು ಆಹಾರಕ್ಕೆ ಸಂಬಂಧಿಸಿದ ಕಥೆಯಾಗಿದ್ದು ಅದನ್ನು ಮೆಚ್ಚಿಕೊಂಡ ಪ್ರಧಾನಿ, “”ಅರ್ಥಗರ್ಭಿತವಾದ ಕಥೆಯನ್ನು ಸರಳವಾಗಿ ಹೇಳುವ ನಿಮ್ಮ ಕಲೆ ಶ್ಲಾಘನೀಯ ಎಂದರಲ್ಲದೆ, ಮಕ್ಕಳಲ್ಲಿ ಕಥೆಗಳ ಮೂಲಕ ನಮ್ಮ ಭಾರತೀಯ ಸಂಸ್ಕೃತಿ, ಸಾಹಿತ್ಯ, ಮೌಲ್ಯಗಳು, ಜ್ಞಾನ, ದೂರದೃಷ್ಟಿತ್ವ, ಜೀವನ ದೃಷ್ಟಿಕೋನಗಳನ್ನು ತಿಳಿಸಿಕೊಡುವ ನಿಮ್ಮ ಪ್ರಯತ್ನ ನಿರಂತರವಾಗಿರಲಿ” ಎಂದು ಹಾರೈಸಿದರು.ಕಲಾವಿದರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.

Advertisement

ಕಥೆಗಾರರಿಗೆ ಪ್ರಧಾನಿ ಕರೆ :  ಇದೇ ವೇಳೆ, ದೇಶದ ಎಲ್ಲಾ ಕಥೆಗಾರರಿಗೆ ಪ್ರಧಾನಿ ಕರೆಯೊಂದನ್ನು ನೀಡಿದರು. “”2022ರಲ್ಲಿ ನಾವು 75ನೇ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಿದ್ದೇವೆ. ಹಾಗಾಗಿ,1857ರಿಂದ1947ರ ಅವಧಿಯಲ್ಲಿ ನಮ್ಮ ಪೂರ್ವಿಕರು ಬ್ರಿಟಿಷರಕೈಕೆಳಗಿನ ಗುಲಾಮಗಿರಿಯಿಂದ ಮುಕ್ತಿ ಪಡೆಯಲು ಮಾಡಿದ ಪ್ರಯತ್ನಗಳನ್ನು ಸ್ವಾರಸ್ಯವಾದಕಥೆಗಳ ರೂಪದಲ್ಲಿ ಮಕ್ಕಳಿಗೆ ತಿಳಿಸಿಹೇಳಿ, ಅವರಲ್ಲಿ ದೇಶಭಕ್ತಿ, ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಪ್ರಯತ್ನಿಸಬೇಕು” ಎಂದು ಅವರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next