Advertisement
ಆಶಾ ಕಾರ್ಯಕರ್ತರೆಯಾಗಿ ನಮ್ಮ ಸಹೋದರಿಯರ ಕೆಲಸವನ್ನು ನಾವು ಕಂಡಿದ್ದೇವೆ. ಡಿಜಿಟಲ್ ಇಂಡಿಯಾ ಬೆಳವಣಿಗೆಯಲ್ಲಿ ಸಹೋದರಿ ಯರು ಕಾಣಿಕೆ ನೀಡಿದ್ದಾರೆ. ಈಗ ಕೃಷಿ ಸಖೀಯರ ರೂಪದಲ್ಲಿ ಕೃಷಿಯು ಹೊಸ ಶಕ್ತಿಯನ್ನು ಕಂಡು ಕೊಂಡಿದೆ. ಸದ್ಯ 12 ರಾಜ್ಯಗಳಲ್ಲಿ ಕಾರ್ಯಾ ಚರಣೆ ಯಲ್ಲಿರುವ ಕೃಷಿ ಸಖೀ ಉಪಕ್ರಮದಡಿ ಸ್ವ-ಸಹಾಯ ಗುಂಪುಗಳಿಗೆ ನಾವು 30 ಸಾವಿರ ಪ್ರಮಾಣ ಪತ್ರ ವಿತರಿಸಿದ್ದೇವೆ. ಭವಿಷ್ಯದಲ್ಲಿ ಈ ಯೋಜನೆಗೆ ಸಾವಿರಾರು ಸ್ವ-ಸಹಾಯ ಗುಂಪುಗಳನ್ನು ಸೇರಿಸಲಾಗುವುದು. ಸರಕಾರದ ಈ ಕ್ರಮವು, 3 ಕೋಟಿ ಲಕಪತಿ ದೀದಿಯರ ನಿರ್ಮಾಣಕ್ಕೂ ನೆರವು ನೀಡಲಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
Related Articles
Advertisement
ನಾನು ಇತ್ತೀಚೆಗೆ ಜಿ-7 ರಾಷ್ಟ್ರಗಳ ಶೃಂಗಸಭೆಗಾಗಿ ಇಟಲಿಗೆ ತೆರಳಿದ್ದೆ. ಜಿ7ನ ಎಲ್ಲ ರಾಷ್ಟ್ರಗಳ ಮತ ದಾರರನ್ನು ಒಗ್ಗೂಡಿಸಿದರೂ ಭಾರತದ ಮತದಾರರ ಸಂಖ್ಯೆ ಇನ್ನೂ 1.5 ಪಟ್ಟು ಹೆಚ್ಚಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 31 ಕೋಟಿ ಮಹಿಳೆಯರು ಮತದಾನ ಮಾಡಿದ್ದಾರೆ. ಇದು ವಿಶ್ವದಲ್ಲೇ ಅತೀ ಹೆಚ್ಚು ಮಹಿಳಾ ಮತದಾರರ ಸಂಖ್ಯೆಯಾಗಿದೆ. ಅಷ್ಟೇ ಅಲ್ಲದೇ ನಮ್ಮ ಮಹಿಳಾ ಮತದಾರರ ಸಂಖ್ಯೆ ಇಡೀ ಅಮೆರಿಕದ ಜನಸಂಖ್ಯೆಗೆ ಸಮೀಪವಾಗಿದೆ. ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಈ ಚೆಲುವು ಮತ್ತು ಶಕ್ತಿ ಇಡೀ ಜಗತ್ತನ್ನು ಆಕರ್ಷಿಸುತ್ತಿದೆ, ಪ್ರೇರೇಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಹೇಳಿದರು.
60 ವರ್ಷಬಳಿಕ ಈಗ ಹ್ಯಾಟ್ರಿಕ್ ಸರಕಾರ
ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಹ್ಯಾಟ್ರಿಕ್ ಸರಕಾರಗಳ ರಚನೆ ತೀರ ಅಪರೂಪ ಭಾರತ ಇದನ್ನು ಸಾಧಿಸಿದೆ. 60 ವರ್ಷಗಳ ಬಳಿಕ ಈಗ ದೇಶದಲ್ಲಿ ಸತತ 3ನೇ ಬಾರಿಗೂ ಒಂದೇ ಸರಕಾರ ಆಡಳಿತಕ್ಕೆ ಬರುವಂತಾಗಿದೆ. ಲೋಕ ಸಭೆ ಚುನಾವಣೆಯಲ್ಲಿ ದೇಶದ ಜನರು ನೀಡಿ ರುವ ಜನಾದೇಶ ಅಭೂತ ಪೂರ್ವವಾಗಿದ್ದು, ಇದರಿಂದ ಇತಿಹಾಸ ಸೃಷ್ಟಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.