Advertisement

Modi; ಬದಲಾವಣೆಯ ಹರಿಕಾರ: ಬ್ರಿಟನ್‌ ಮಾಜಿ ಪಿಎಂ ಜಾನ್ಸನ್‌

01:37 AM Oct 14, 2024 | Team Udayavani |

ಲಂಡನ್‌: ಪ್ರಧಾನಿ ನರೇಂದ್ರ ಮೋದಿ ಅವರು ನಾವು ಬಯಸುತ್ತಿರುವ ಬದಲಾವಣೆಯ ಹರಿಕಾರ ಎಂದು ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೊಗಳಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲಿ ಭಾರತ ಹಾಗೂ ಮೋದಿ ಬಗ್ಗೆ ಒಂದು ಅಧ್ಯಾಯ ಬರೆದಿರುವ ಜಾನ್ಸನ್‌, ಮೋದಿ ಅವರನ್ನು ಮೊದಲ ಬಾರಿ ಭೇಟಿ ಮಾಡಿದಾಗ ಅವರ ಸಾಮರ್ಥ್ಯವನ್ನು ನೋಡಿ ನಾನು ಅಚ್ಚರಿಗೊಂಡಿದ್ದೆ. ಮೋದಿ ಅವರು ಒಬ್ಬ ಉತ್ತಮ ಗೆಳೆಯ ಎಂದು ಹೇಳಿದ್ದಾರೆ.

Advertisement

ಅಲ್ಲದೇ ಭಾರತ ಹಾಗೂ ಬ್ರಿಟನ್‌ ನಡುವಿನ ದ್ವಿಪಕ್ಷೀಯ ಸಂಬಂಧ ಹೇಗಿತ್ತು, ಮೋದಿ ಆರಂಭಿಸಿದ ತೆರಿಗೆ ಮುಕ್ತ ವ್ಯಾಪಾರದ ಮಹತ್ವದ ಬಗ್ಗೆಯೂ ಅವರು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next