Advertisement

ನರೇಂದ್ರ ಮೋದಿ ಅತ್ಯಂತ ಪ್ರಜಾಪ್ರಭುತ್ವವಾದಿ ನಾಯಕ: ಪಿಎಂ ಆಡಳಿತ ಶೈಲಿ ಶ್ಲಾಘಿಸಿದ ಅಮಿತ್ ಶಾ

12:53 PM Oct 10, 2021 | Team Udayavani |

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ‘’ನಾನು ಇದುವರೆಗೆ ನೋಡಿದ್ದರಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಪ್ರಜಾಪ್ರಭುತ್ವವಾದಿ ನಾಯಕ’’ ಎಂದು ಶಾ ಹೇಳಿದ್ದಾರೆ.

Advertisement

ಮೋದಿ ‘ಸರ್ವಾಧಿಕಾರಿ’ ಎಂಬ ಮಾತುಗಳನ್ನು ವಿರೋಧಿಸುತ್ತಾ ಸಂಸದ್ ಟಿವಿ ಯಲ್ಲಿ ಸಂದರ್ಶನದ ವೇಳೆ ಅಮಿತ್ ಶಾ ಈ ಮಾತುಗಳನ್ನಾಡಿದ್ದಾರೆ.

“ಮೋದಿ ಅವರ ಜೊತೆ ವಿರೋಧ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಾನು ಅವರಂತಹ ಕೇಳುಗನನ್ನು ಇದುವರೆಗೆ ಭೇಟಿ ಮಾಡಿಲ್ಲ. ಯಾವುದೇ ವಿಷಯದ ಬಗ್ಗೆ ಸಭೆ ಇರಲಿ, ಮೋದಿ ಅವರು ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಾರೆ ಮತ್ತು ಎಲ್ಲರ ಮಾತನ್ನೂ ತಾಳ್ಮೆಯಿಂದ ಕೇಳುತ್ತಾರೆ. ಅವರು ವ್ಯಕ್ತಿಯ ಅಭಿಪ್ರಾಯದ ಮೌಲ್ಯವನ್ನು ಪರಿಗಣಿಸುತ್ತಾರೆ, ಹಾಗಾಗಿ ಅವರು ಸರ್ವಾಧಿಕಾರಿ ಎಂಬ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು.

ಪಿಎಂ ಮೋದಿ ಸಾರ್ವಜನಿಕ ಸೇವೆಯಲ್ಲಿ 20 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಅಮಿತ್ ಶಾ, ಪಿಎಂ ಆಡಳಿತ ಶೈಲಿಯನ್ನು ಶ್ಲಾಘಿಸಿದರು. ಪ್ರತಿಪಕ್ಷಗಳು ಆಧಾರರಹಿತ ಆರೋಪಗಳಿಂದ ಸರ್ಕಾರದ ಪ್ರತಿಷ್ಠೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿವೆ ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯನವರದ್ದು ಅನುಕಂಪ ಗಿಟ್ಟಿಸುವ ನಾಟಕ: ಎಚ್ ಡಿ ಕುಮಾರಸ್ವಾಮಿ

Advertisement

“ಮೋದಿ ಜಿ ಕ್ಯಾಬಿನೆಟ್ ಅನ್ನು ಅತ್ಯಂತ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸುತ್ತಾರೆ. ಒಂದು ವೇದಿಕೆಯಲ್ಲಿ ಏನು ಚರ್ಚಿಸಲಾಗಿದೆ ಎಂಬುದನ್ನು ಸಾರ್ವಜನಿಕ ವಲಯಕ್ಕೆ ಸೋರಿಕೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ತಪ್ಪು ಗ್ರಹಿಕೆ ಇದೆ. ಆದರೆ ಅದು ಹಾಗಲ್ಲ, ಅವರು ವಿಷಯವನ್ನು ಚರ್ಚಿಸುತ್ತಾರೆ, ಎಲ್ಲರ ಮಾತನ್ನು ಕೇಳುತ್ತಾರೆ ಮತ್ತು ಸಾಧಕ -ಬಾಧಕಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಆದರೆ ಅಂತಿಮ ನಿರ್ಧಾರವು ಅವರದ್ದೆ, ಯಾಕೆಂದರೆ ಅವರು ಪ್ರಧಾನಿ ಮಂತ್ರಿ “ಎಂದು ಶಾ ವಿವರಿಸಿದರು.

“ಪ್ರಧಾನಿ ಮೋದಿ ‘ಇಂಡಿಯಾ ಫಸ್ಟ್’ ಗುರಿಯೊಂದಿಗೆ ಕೆಲಸ ಮಾಡುತ್ತಾರೆ. ಸರ್ಕಾರವನ್ನು ನಡೆಸಲು ಮಾತ್ರವಲ್ಲ, ದೇಶವನ್ನು ಬದಲಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅವರು ಈ ಹಿಂದೆ ಅನೇಕ ಬಾರಿ ಹೇಳಿದ್ದಾರೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ನಮ್ಮ ಗುರಿಯಾಗಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಸಂದರ್ಶನದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next