Advertisement

ಮೋದಿಯೇ ಬೆಸ್ಟ್‌, ಆದರೆ…

11:21 AM Aug 19, 2017 | Team Udayavani |

ಹೊಸದಿಲ್ಲಿ: ಕೇಂದ್ರದಲ್ಲಿ ಎನ್‌ಡಿಎ ಸರಕಾರ ಬಂದು 3 ವರ್ಷ ಕಳೆದಿದೆ. ಇಂದಿಗೂ ಜನರ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಕಿಂಗ್‌. ಮೋದಿ ನಮಗೆ ಇಷ್ಟಾನೇ, ಆದರೆ… ಇನ್ನೂ ಬಗೆಹರಿಸಲಾರದ ವಿಚಾರಗಳಿವೆ ಎಂದೂ ಜನ ಅಭಿಪ್ರಾಯಪಟ್ಟಿದ್ದಾರೆ. 

Advertisement

ಆಂಗ್ಲ ವಾಹಿನಿ ಇಂಡಿಯಾ ಟುಡೆ ನಡೆಸಿದ ಮೂಡ್‌ ಆಫ್ ದಿ ನೇಷನ್‌ನಲ್ಲಿ ಜನ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತತ್‌ಕ್ಷಣಕ್ಕೆ ಲೋಕಸಭೆ ಚುನಾವಣೆ ನಡೆದರೆ ಮೋದಿ ಅವರಿಗೆ ತಮ್ಮ ಒಲವು ಎಂದೂ ಹೇಳಿದ್ದಾರೆ. ಈ ಸಮೀಕ್ಷೆ ಪ್ರಕಾರ ಈಗ ಚುನಾವಣೆ ನಡೆದರೆ ಎನ್‌ಡಿಎ 349 ಸ್ಥಾನ ಗಳಿಸಲಿದೆ. ಯುಪಿಎ 75ಕ್ಕೆ ತೃಪ್ತಿ ಪಟ್ಟುಕೊಂಡರೆ, ಇತರೆ ಪಕ್ಷಗಳು 119ರಲ್ಲಿ ಗೆಲುವು ಸಾಧಿಸಲಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಹಾರದ ಜೆಡಿಯು ನಾಯಕ ನಿತೀಶ್‌ಕುಮಾರ್‌ ಅವರು ಎನ್‌ಡಿಎ ತೆಕ್ಕೆಗೆ ಬಿದ್ದಿದ್ದು, ಬಿಜೆಪಿ ಮೈತ್ರಿಕೂಟವು 400 ಕ್ಕಿಂತ ಹೆಚ್ಚು ಸ್ಥಾನವನ್ನೂ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ಸ್ವಾತಂತ್ರ್ಯನಂತರದ ಅತ್ಯುತ್ತಮ ಪ್ರಧಾನಿಗಳ ರೇಸ್‌ನಲ್ಲೂ ಮೋದಿಯೇ ಮುಂದಿದ್ದಾರೆ. ಇವರ ನಂತರ ಇಂದಿರಾ, ಅಟಲ್‌, ನೆಹರು ಸ್ಥಾನ ಪಡೆದಿದ್ದಾರೆ. ಇನ್ನು 2019ಕ್ಕೆ ಮೋದಿ ಎದುರಿಸುವ ಶಕ್ತಿ ಯಾರಿಗಿದೆ ಎಂಬ ಪ್ರಶ್ನೆಗೆ ಬಹುತೇಕ ಮಂದಿ ರಾಹುಲ್‌ ಗಾಂಧಿ ಕಡೆಗೇ ಬೆರಳು ಮಾಡಿ ತೋರಿಸುತ್ತಾರೆ. 

ಇನ್ನು ಬಿಜೆಪಿಯೊಳಗೇ ಮೋದಿ ಅವರಿಗೆ ಪ್ರತಿಸ್ಪರ್ಧಿಯಾಗಬಲ್ಲವರು ಯಾರು ಎಂಬ ಪ್ರಶ್ನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರ ಹೆಸರೇ ಮುಂಚೂಣಿಗೆ ಬಂದಿದೆ. ನಂತರ ಸುಷ್ಮಾ, ಜೇಟ್ಲಿ, ರಾಜನಾಥ್‌, ಎಲ್‌.ಕೆ. ಆಡ್ವಾಣಿ ಬರುತ್ತಾರೆ. ಭ್ರಷ್ಟಾಚಾರ, ಕಪ್ಪುಹಣ ತಡೆಯಲ್ಲಿ ಮೋದಿ ಆಡಳಿತ ಜನರಿಗೆ ತೃಪ್ತಿ  ತಂದಿದೆ. ಆದರೆ, ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆ, ರೈತರ ಆತ್ಮಹತ್ಯೆಗಳು ಬಾಧಿಸುತ್ತಿವೆ ಎಂದು ಒಪ್ಪಿಕೊಳ್ಳುತ್ತಾರೆ. 

ಸಮೀಕ್ಷೆಯ ಕೆಲ ಅಂಶಗಳು
ಚುನಾವಣಾ ಭರವಸೆಗಳು ಈಡೇರಿವೆಯೇ? 

Advertisement

ಹೌದು    39
ಹಾಗೆಯೇ ಇದೆ   18
ಏನೂ ಆಗಿಲ್ಲ     34
ಗೊತ್ತಿಲ್ಲ   07

ಮೋದಿಗೆ ಪ್ರತಿಸ್ಪರ್ಧಿಯಾಗಬಲ್ಲ ನಾಯಕರು (ಶೇ.)
21 ರಾಹುಲ್‌ ಗಾಂಧಿ               
12 ಸೋನಿಯಾ ಗಾಂಧಿ  
7 ಅರವಿಂದ್‌ ಕೇಜ್ರಿವಾಲ್‌
6 ಪ್ರಿಯಾಂಕಾ ವಾದ್ರಾ
4 ಪಿ.ಚಿದಂಬರಂ

ದೇಶದ ಅತ್ಯುತ್ತಮ ಸಿಎಂಗಳು (ಶೇ)
12 ಮಮತಾ ಬ್ಯಾನರ್ಜಿ
10 ನಿತೀಶ್‌ಕುಮಾರ್‌             
10 ಯೋಗಿ ಆದಿತ್ಯನಾಥ್‌         
6 ಚಂದ್ರಬಾಬು ನಾಯ್ಡು              
6 ಅರವಿಂದ್‌ ಕೇಜ್ರಿವಾಲ್‌              

ಕಾಂಗ್ರೆಸ್‌ ಹೊರತಾದ ಮಹಾಘಟ ಬಂಧನ್‌ ಬೇಕೆ?(ಶೇ.)
ಬೇಕು 33
ಬೇಡ  44
ಗೊತ್ತಿಲ್ಲ 22

ಇವಿಎಂ ತಿರುಚಬಹುದೇ?(ಶೇ.)
ಹೌದು  38
ಇಲ್ಲ 44
ಗೊತ್ತಿಲ್ಲ 21

Advertisement

Udayavani is now on Telegram. Click here to join our channel and stay updated with the latest news.

Next