Advertisement

ಈಗಲೂ ದೇಶದಲ್ಲಿ ಮೋದಿ ಹವಾ; ಕೇಂದ್ರದ ನೀತಿ ಬಗ್ಗೆ ಜನರಿಗೆ ಮೆಚ್ಚುಗೆ

06:00 AM Dec 16, 2017 | Team Udayavani |

ನವದೆಹಲಿ: ಗುಜರಾತ್‌ ಚುನಾವಣೆ ನಡೆದು ಫ‌ಲಿತಾಂಶ ನಿರೀಕ್ಷಿಸುತ್ತಿರುವ ಹೊತ್ತಿನಲ್ಲೇ ಖಾಸಗಿ ಸುದ್ದಿ ವಾಹಿನಿ ಟೈಮ್ಸ್‌ ನೌ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಮತ್ತೂಂದು ಅವಧಿಗೂ ಪ್ರಧಾನಿಯಾಗಿ ಆಯ್ಕೆಯಾಗುವ ನಿರೀಕ್ಷೆ ಮೂಡಿದೆ.

Advertisement

ಡಿಸೆಂಬರ್‌ 12ರಿಂದ 15ರ ವರೆಗೆ ಆನ್‌ಲೈನ್‌ನಲ್ಲಿ ಕನ್ನಡವೂ ಸೇರಿದಂತೆ 9 ಭಾಷೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 72 ಗಂಟೆಗಳ ಕಾಲ ನಡೆದ ಈ ಸಮೀಕ್ಷೆಯಲ್ಲಿ ಈಗಲೇ ಲೋಕಸಭೆ ಚುನಾವಣೆ ನಡೆದರೆ ಯಾರಿಗೆ ಮತ ಹಾಕುತ್ತೀರಿ ಎಂದು ಕೇಳಿದಾಗ ಶೇ. 79 ಜನರು ಬಿಜೆಪಿಗೆ, ಶೇ. 16 ರಷ್ಟು ಜನರು ಕಾಂಗ್ರೆಸ್‌ಗೆ ಮತ್ತು ಶೇ. 5ರಷ್ಟು ಜನರು ಇತರೆ ಪಕ್ಷಗಳಿಗೆ ಮತಹಾಕುವುದಾಗಿ ಹೇಳಿದ್ದಾರೆ. ಅಲ್ಲದೆ ಮೋದಿ ಸರ್ಕಾರದ ನೋಟು ಅಮಾನ್ಯ ಮತ್ತು ಜಿಎಸ್‌ಟಿಯಂಥ ಕ್ರಮಗಳಿಗೂ ಜನರ ಬೆಂಬಲ ವ್ಯಕ್ತವಾಗಿದೆ. ಇನ್ನೊಂದೆಡೆ ಉದ್ಯೋಗ ಸೃಷ್ಟಿ ಕೊರತೆಯ ಹೊರತಾಗಿಯೂ ಮೋದಿ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ ಎಂದು ಜನರು ಹೇಳಿದ್ದಾರೆ. 

ಕನ್ನಡಿಗರಲ್ಲಿ ಶೇ.79ರಷ್ಟು ಜನರು ಬಿಜೆಪಿಗೆ, ಶೇ.10ರಷ್ಟು ಜನರು ಕಾಂಗ್ರೆಸ್‌ಗೆ ಮತ್ತು ಶೇ. 11 ರಷ್ಟು ಜನರು ಇತರೆ ಪಕ್ಷಗಳಿಗೆ ಮತ ಹಾಕುವುದಾಗಿ ಹೇಳಿದ್ದಾರೆ.

ಇಂದು ಸಾರ್ವತ್ರಿಕ ಚುನಾವಣೆ ನಡೆದರೆ ಯಾರಿಗೆ ಮತ ಹಾಕುತ್ತೀರಿ?
ಬಿಜೆಪಿ – 79
ಕಾಂಗ್ರೆಸ್‌ – 16
ಇತರೆ – 5

ಈಗ ರಾಹುಲ್‌ ಗಾಂಧಿ ಅಧ್ಯಕ್ಷರಾದ ನಂತರ 2019ರ ಚುನಾವಣೆಯಲ್ಲಿ ಪರ್ಯಾಯ ಶಕ್ತಿಯಾಗಿದೆಯೇ?
ಹೌದು – 21
ಇಲ್ಲ -74
ಹೇಳಲಾಗದು – 5

Advertisement

ನೋಟು ಅಮಾನ್ಯ ಮತ್ತು ಜಿಎಸ್‌ಟಿಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಮೋದಿ ಸರ್ಕಾರದ ಹೆಜ್ಜೆ ಸರಿಯಾಗಿದೆಯೇ?
ಹೌದು – 75
ಇಲ್ಲ – 21
ಹೇಳಲಾಗದು – 4

ಉದ್ಯೋಗ ಅವಕಾಶ ಕೊರತೆಯು ಮೋದಿ ಸರ್ಕಾರದ ಮೇಲಿನ ನಿಮ್ಮ ನಂಬಿಕೆಗೆ ಹೊಡೆತ ನೀಡಿದೆಯೇ?
ಹೌದು – 36
ಇಲ್ಲ – 55
ಹೇಳಲಾಗದು – 9

ಭ್ರಷ್ಟಾಚಾರದ ವಿರುದ್ಧದ ಕ್ರಮಕ್ಕೆ ಫ‌ಲಿತಾಂಶ ಲಭ್ಯವಾಗುತ್ತಿದೆಯೇ?
ಹೌದು – 64
ಇಲ್ಲ – 28
ಹೇಳಲಾಗದು – 8

ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ ಘೋಷಣೆಯಂತೆಯೇ ಮೋದಿ ನಡೆದುಕೊಂಡಿದ್ದರೆಯೇ?
ಹೌದು- 68
ಇಲ್ಲ- 26
ಹೇಳಲಾಗದು – 6

ಎನ್‌ಡಿಎ ಅಡಿಯಲ್ಲಿ ಭಾರತದ ಸಹಿಷ್ಣುತೆ ಕಡಿಮೆಯಾಗಿದೆಯೇ?
ಹೌದು – 32
ಇಲ್ಲ – 62
ಹೇಳಲಾಗದು – 6

2019ರ ಲೋಕಸಭೆ ಚುನಾವಣೆಗೆ ರಾಮ ಮಂದಿರ ಪ್ರಮುಖ ವಿಷಯವಾಗಿರುತ್ತದೆ ಎಂದು ನೀವು ಭಾವಿಸುತ್ತೀರಾ?
ಹೌದು – 34
ಇಲ್ಲ -55
ಹೇಳಲಾಗದು -11

ತ್ರಿವಳಿ ತಲಾಖ್‌, ರೊಹಿಂಗ್ಯಾ ವಿಷಯ, ಸಮಾನ ನಾಗರಿಕ ಸಂಹಿತೆ ವಿಚಾರದಲ್ಲಿ ಮೋದಿ ಸರ್ಕಾರದ ನಿಲುವು ಜಾತ್ಯತೀತೆಯನ್ನು ಸಶಕ್ತಗೊಳಿಸಿದೆಯೇ?
ಹೌದು – 73
ಇಲ್ಲ -21
ಹೇಳಲಾಗದು – 6

ಕ್ಯಾಂಪೇನ್‌ಗಳಲ್ಲಿ ಧಾರ್ಮಿಕ ವಿಷಯಗಳನ್ನು ಪ್ರಸ್ತಾಪಿಸುವುದಕ್ಕಿಂತ ವಿಕಾಸಕ್ಕೇ ಬಿಜೆಪಿ ಬದ್ಧವಾಗಿರಬೇಕೆ?
ಹೌದು – 81
ಇಲ್ಲ -13
ಹೇಳಲಾಗದು -6

ಕಾಂಗ್ರೆಸ್‌ ಅಲ್ಪಸಂಖ್ಯಾತರ ಪರ ಎಂಬ ಕಾಂಗ್ರೆಸ್‌ ದೃಷ್ಟಿಕೋನಕ್ಕೆ ರಾಹುಲ್‌ ಗಾಂಧಿಯ ದೇಗುಲ ಭೇಟಿ ಪ್ರತಿರೋಧಿಸುತ್ತದೆಯೇ?
ಹೌದು – 26
ಇಲ್ಲ – 63
ಹೇಳಲಾಗದು – 11

ಭಾರತದ ಅರ್ಥವ್ಯವಸ್ಥೆ ಬೆಳವಣಿಗೆ ಕಾಣಲಿದೆ ಎಂದು ಮೋದಿ ಸರ್ಕಾರ ನಿರೀಕ್ಷಿಸಿದ್ದು, ನೀವೂ ಈ ನಿರೀಕ್ಷೆ ಹೊಂದಿದ್ದೀರಾ?
ಹೌದು – 74
ಇಲ್ಲ – 21
ಹೇಳಲಾಗದು – 5

Advertisement

Udayavani is now on Telegram. Click here to join our channel and stay updated with the latest news.

Next