Advertisement

ಹೆಚ್ಚುವರಿ ರಸಗೊಬ್ಬರ ಸಬ್ಸಿಡಿಗೆ ಶೀಘ್ರ ಸಂಪುಟ ಅಂಗೀಕಾರ?

12:37 AM Oct 13, 2021 | Team Udayavani |

ಹೊಸದಿಲ್ಲಿ: ರಸ ಗೊಬ್ಬರಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ರೈತ ರಿಗೆ ಒದಗಿಸುತ್ತಿರುವುದಕ್ಕೆ ಪ್ರತಿ ಯಾಗಿ ರಸಗೊಬ್ಬರ ಕಂಪೆನಿ ಗಳಿಗೆ 28,600 ಕೋಟಿ ರೂ.ಗಳ ಪರಿಹಾರವನ್ನು ಹೆಚ್ಚುವರಿಯಾಗಿ ನೀಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಶೀಘ್ರವೇ ಅಂಗೀಕಾರ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲ ಗಳು ತಿಳಿಸಿವೆ.

Advertisement

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿ ರುವ ಸಚಿವ ಸಂಪುಟ ಸಭೆ ಈ ವಾರದಲ್ಲಿಯೇ ಈ ಪ್ರಸ್ತಾವನೆ ಯನ್ನು ಅಂಗೀಕರಿಸುವ ಸಾಧ್ಯತೆಯಿದೆ.

ಚಳಿಗಾಲದಲ್ಲಿ ಬಿತ್ತನೆ ಯಾಗುವ ಬೀಜಗಳಿಗೆ ಸಂಬಂಧಿಸಿ ಈ ಸಬ್ಸಿಡಿ ಸಹಾಯ ಒದಗಲಿದೆ ಎಂದು ಅವು ಹೇಳಿವೆ. ಪ್ರಸ್ತುತ ಡಿಎಪಿ ರಸಗೊಬ್ಬರದ ಪ್ರತೀ ಚೀಲಕ್ಕೆ ನೀಡುವ ಸಹಾಯ ಧನವನ್ನು 1,200 ರೂ. ಗಳಿಂದ 1,650 ರೂ.ಗಳಿಗೆ ಏರಿಸ ಲಾಗಿದೆ.

ಇದನ್ನೂ ಓದಿ:ಉಬೆರ್‌ ಕಪ್‌ ಬ್ಯಾಡ್ಮಿಂಟನ್‌: ಭಾರತ ಕ್ವಾರ್ಟರ್‌ ಫೈನಲ್‌ಗೆ

Advertisement

Udayavani is now on Telegram. Click here to join our channel and stay updated with the latest news.

Next