Advertisement
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ-ಆರ್‌ಜೆವಿವೈ) ಹಾಗೂ ಕೃಷಿ ಯೋನ್ನತಿ ಯೋಜನೆಗೆ 1ಲಕ್ಷ ಕೋಟಿ ರೂ. ಅನುದಾನ ಹಂಚಿಕೆಗೆ ಅನುಮೋದಿಸಲಾಗಿದೆ. ಪಿಎಂ- ಆರ್‌ಜೆವಿವೈ ಯೋಜನೆಯು ಸುಸ್ಥಿರ ಕೃಷಿ ಉತ್ತೇ ಜಿಸುವ ಗುರಿ ಹೊಂದಿದ್ದು, ಕೃಷಿಯೋನ್ನತಿ ಯೋಜ ನೆ ಯು ಕೃಷಿ ಸ್ವಾವಲಂಬನೆಯ ಮೂಲಕ ರಾಷ್ಟ್ರದ ಆಹಾರ ಭದ್ರತೆಯನ್ನು ಖಾತರಿಪಡಿಸಿಕೊಳ್ಳು ವುದರ ಬಗ್ಗೆ ಗಮಹರಿಸಲಿದೆ. ಈ ಎರಡೂ ಯೋಜನೆ ಗಳು ಒಟ್ಟು 1,01,321 ಕೋಟಿ ರೂ.ವೆಚ್ಚದಲ್ಲಿ ಜಾರಿಯಾಗಲಿವೆ. ಜತೆಗೆ ಕೃಷಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಈ 2 ಯೋಜನೆಗಳ ಅಡಿಯಲ್ಲಿ ಸಂಯೋಜಿಸಲೂ ಸಮ್ಮತಿಸಲಾಗಿದೆ.
ಮುಂದಿನ 7 ವರ್ಷದಲ್ಲಿ ಖಾದ್ಯ ತೈಲಗಳ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿ ಯಾಗಿಸುವ ನಿಟ್ಟಿನಲ್ಲಿ 10,103 ಕೋಟಿ ರೂ.ವೆಚ್ಚದಲ್ಲಿ ಖಾದ್ಯ ತೈಲಗಳು- ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್ ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಪ್ರಸ್ತಾವಿತ ಯೋಜನೆಯು 2022-23ರಲ್ಲಿ 39 ಮಿಲಿಯನ್ ಟನ್ ಇರುವ ಖಾದ್ಯತೈಲ ಉತ್ಪಾದನೆಯನ್ನು 2030-31ರ ವೇಳೆಗೆ 69.7 ಮಿಲಿಯನ್ ಟನ್‌ಗೆ ಹೆಚ್ಚಿಸಲು ಉದ್ದೇಶಿಸಿದೆ. ಚುನಾವಣೆ ಹೊಸ್ತಿಲಲ್ಲಿ ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ
ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬ ಮಹಾರಾಷ್ಟ್ರದ ಬಹುದಿನಗಳ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಗುರುವಾರ ಸಮ್ಮತಿ ನೀಡಿದೆ. ಮರಾಠಿ ಜತೆಗೆ ಬೆಂಗಾಲಿ, ಪಾಲಿ, ಪಾಕೃತಿ, ಅಸ್ಸಾಮಿ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನ ನೀಡಲು ಸಂಪುಟ ಅನುಮೋದಿಸಿದೆ. ಇದರೊಂದಿಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳ ಸಂಖ್ಯೆ ಕನ್ನಡವೂ ಸೇರಿ 11ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ಚುನಾವಣೆ ಹೊಸ್ತಿಲಿನಲ್ಲೇ ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದು ಮಹತ್ವ ಪಡೆದಿದೆ. ಮೊದಲಿಗೆ ತಮಿಳು (2004) ಅನಂತರ ಸಂಸ್ಕೃತ (2005), ಕನ್ನಡ ಮತ್ತು ತೆಲುಗು (2008), ಮಲಯಾಳ (2013) ಮತ್ತು ಒಡಿಯಾ (2014)ಭಾಷೆಗಳು ಶಾಸ್ತ್ರೀಯ ಸ್ಥಾನಮಾನ ಪಡೆದಿದ್ದವು.
Related Articles
11.72 ಲಕ್ಷಕ್ಕೂ ಅಧಿಕ ರೈಲ್ವೇ ಸಿಬಂದಿಗೆ 78ದಿನಗಳ ವೇತನಕ್ಕೆ ಸಮನಾಗಿ ಉತ್ಪಾದಕತೆ ಆಧಾರಿತ ಬೋನಸ್ ಪಾವತಿಗೂ ಸಮ್ಮತಿಸಲಾಗಿದೆ. ಇದಕ್ಕಾಗಿ 2,029 ಕೋಟಿ ರೂ. ವೆಚ್ಚವಾಗಲಿದೆ. ಇದರ ಜತೆಗೆ ಪ್ರಮುಖ ಬಂದರು ಅಧಿಕಾರಿಗಳು, ಡಾಕ್ ಲೇಬರ್ ಬೋರ್ಡ್ ನೌಕರರು ಸೇರಿದಂತೆ 20,704 ಉದ್ಯೋಗಿಗಳಿಗೂ ಉತ್ಪಾದಕತೆ ಆಧಾರಿತವಾಗಿ 200 ಕೋಟಿ ರೂ.ವೆಚ್ಚದಲ್ಲಿ ಆರ್ಥಿಕ ನೆರವು ನೀಡಲು ಸಮ್ಮತಿಸಿದೆ.
Advertisement