Advertisement
ತಮಿಳುನಾಡಿನ ಬುಡಕಟ್ಟು ಜನಾಂಗದ ಮಹಿಳೆಯರು ಸಿದ್ಧಪಡಿಸಿದ ಎಂಬ್ರಾಯಡರಿ ಶಾಲು, ಕರಕುಶಲ ಪೇಪರ್ ಪೇಂಟಿಂಗ್, ನಾಗಾ ಸಾಂಪ್ರದಾಯಿಕ ಶಾಲು, ಖಾದಿ ಮಧುಬನಿ ಪೆಂಟೆಡ್ ಸ್ಟೋಲ್, ಪಶ್ಚಿಮ ಬಂಗಾಲದ ಬುಡಕಟ್ಟು ಜನಾಂಗದ ಮಹಿಳೆಯರು ತಯಾರಿಸಿದ ಸೆಣಬಿನ ಫೈಲ್, ಅಸ್ಸಾಂನ ಕಕಾಟಿಪಾಪುಂಗ್ ಡೆವೆಲಪಮೆಂಟ್ ಬ್ಲಾಕ್‌ನ ಸ್ವಸಹಾಯ ಗುಂಪುಗಳಿಂದ ಗಮುಸಾ (ತಲೆಗೆ ಸುತ್ತಿಕೊಳ್ಳುವ ವಸ್ತ್ರ), ಕೇರಳದ ತೆಂಗಿನ ಗರಿಗಳ ವಿಶಿಷ್ಟ ಕರಕುಶಲ “ನಿಲಾವಿಲಕ್ಕು’ ಖರೀದಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಂಕಾ ವಾದ್ರಾ ಕೂಡ ಟ್ವಿಟರ್ ಮೂಲಕ ಮಹಿಳಾ ದಿನದ ಶುಭಾಶಯ ಹೇಳಿದ್ದಾರೆ. ಇತಿಹಾಸ ಸೃಷ್ಟಿಸುವ ಸಾಮರ್ಥ್ಯವುಳ್ಳ ಮಹಿಳೆಯರು ಸಾಕಷ್ಟು ಸಾಧನೆ ಮಾಡಿದ್ದಾರೆ. ಕಾಂಗ್ರೆಸ್ ನಾರಿಯರ ಧ್ವನಿಗೆ ಬಲ ನೀಡುತ್ತ ಬಂದಿದೆ. ಸ್ವಾವಲಂಬಿ ಬದುಕಿಗೆ ಬುನಾದಿ ಹಾಕಿಕೊಟ್ಟಿದೆ. ಸರ್‌ಪಂಚ್‌ನಿಂದ ಹಿಡಿದು ಪ್ರಧಾನಿ ಹುದ್ದೆವರೆಗೂ ಮಹಿಳೆಯರಿಗೆ ಅವಕಾಶ ಕಲ್ಪಿಸಿ ದೇಶವನ್ನು ಮುನ್ನಡೆಸಬಲ್ಲಳು ಎಂಬುದನ್ನು ಸಾಬೀತು ಮಾಡಿದೆ ಎಂದಿದ್ದಾರೆ.