Advertisement

Modi; ದಿವಾಳಿಯಾಗಿದ್ದ ಭಾರತ ಜಗತ್ತಿಗೆ ಕೊಡುವಷ್ಟು ಬೆಳೆದಿದೆ: ಪಿ.ರಾಜೀವ್

06:29 PM Mar 04, 2024 | Team Udayavani |

ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತದಿಂದಾಗಿ ದಿವಾಳಿಯಾಗಿದ್ದ ಭಾರತ ಜಗತ್ತಿಗೆ ಕೊಡುಗೆ ಕೊಡುವಷ್ಟರ ಮಟ್ಟಿಗೆ ಬೆಳೆದಿದೆ. ಕೇವಲ 10 ವರ್ಷದಲ್ಲಿ ಜಗತ್ತು ನಿಬ್ಬೆರಗಾಗಿ ನೋಡುವಷ್ಟರ ಮಟ್ಟಿಗೆ ಬೆಳೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.

Advertisement

ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಮುಖರ ಸಭೆಯಲ್ಲಿ ಮಾತನಾಡಿ ಚುನಾವಣೆಗೆ ಬಿಜೆಪಿ ಪಕ್ಷವು ಸಂಪೂರ್ಣ ಸಿದ್ದವಾಗಿದೆ. ಚುನಾವಣೆಯ ವಿಷಯ ಅಭಿವೃದ್ಧಿ, ಚುನಾವಣೆಯ ಕೇಂದ್ರ ಬಿಂದು ನರೇಂದ್ರ ಮೋದಿ. ಸಂಘಟಿತ ಕಾರ್ಯಕರ್ತರ ಪಡೆಯಿನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತದೆ ಎಂದರು.

65 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಭಾರತವನ್ನು ಮಾಡಿತ್ತು. 2013ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರು ದೇಶದ ಚಿತ್ರಣ ಬದಲಿಸಿದರು‌. ಇಂದು ಜಗತ್ತಿಗೆ ಕೊಡುಗೆ ನೀಡುವಷ್ಟರ ಮಟ್ಟಿಗೆ ಬೆಳೆದಿದೆ. ಇದನ್ನು ಜಗತ್ತಿನ ಯಾವ ರಾಷ್ಟ್ರಗಳು ನಿರೀಕ್ಷೆ ಮಾಡಲಿಲ್ಲ. ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತ ಇದಕ್ಕೆ ಕಾರಣ. ಇಷ್ಟು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಇಲ್ಲ. ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ‌ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗೆಲುವು ನಿಶ್ಚಿತ ಎಂದರು

Advertisement

Udayavani is now on Telegram. Click here to join our channel and stay updated with the latest news.