ಬೆಂಗಳೂರು: ವಿದ್ಯಾರ್ಥಿಗಳಿಗೆ ಸೂಕ್ತ ಸುರಕ್ಷತೆ, ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿ ನಗರದ ಯಲಹಂಕದ ರೇವಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸ್ಟೇಟ್ ಆಫ್ ದಿ ಆರ್ಟ್ ಸೆಕ್ಯೂರಿಟಿ ಸರ್ವೀಸ್ ಸಿಸ್ಟಂ ನಿರ್ಮಿಸಲಾಗಿದೆ.
ನೂತನ ಸೆಕ್ಯೂರಿಟಿ ಸರ್ವೀಸ್ ಸಿಸ್ಟಂಗೆ ಬುಧ ವಾರ ರೇವಾ ವಿವಿ ಕುಲಾಧಿಪತಿ ಪಿ.ಶ್ಯಾಮರಾಜು ಅವರು ಚಾಲನೆ ನೀಡಿದರು. ನಂತ ರ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಅವರಿಗೆ ಸೂಕ್ತ ಭದ್ರತೆ ಹಾಗೂ ಅವರ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿ ಎಚ್‌ಎಫ್‌ಡಿ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಗೆ ಭೇಟಿ ನೀಡಿದ ವರ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಯಾವುದೇ ರೀತಿ ಅಹಿತಕರ ಘಟನೆ ಸಂಭವಿಸದಂತೆಯೂ ತಡೆಯಬಹುದಾಗಿದೆ ಎಂದರು.
ಅಲರ್ಟ್ ಹೈ ಫ್ರೀಕ್ವೆನ್ಸಿ ಡಿಟೆಕ್ಟರ್ ಎಂದು ಕರೆಯಲ್ಪಡುವ ಈ ರಕ್ಷಣಾ ವ್ಯವಸ್ಥೆಯು ವಿವಿಗೆ ಭೇಟಿ ನೀಡುವವರ ಮಾಹಿತಿಯನ್ನು ವಿಡಿಯೋ ಸಹಿತ ಸ್ವಯಂ ಚಾಲಿತವಾಗಿ ಸಂಗ್ರಹ ಮಾಡಲಿದೆ. ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಬಾರ್ ಕೋಡ್ ನೀಡಿದ್ದು,
ಕಾಲೇಜಿಗೆ ಆಗಮಿಸುವ, ಇಲ್ಲಿಂದ ಹೊರ ಡುವ ಸಮಯ ಸೇರಿ ದಂತೆ ಇನ್ನಿತರ ಸಮಗ್ರ ಮಾಹಿತಿ ಕೂಡ ಈ ರಕ್ಷಣಾ ವ್ಯವಸ್ಥೆಯಡಿ ದಾಖಲಾಗಲಿದೆ ಎಂದರು. ರೇವಾ ವಿವಿ ಉಪಕುಲಪತಿ ಡಾ. ಎಸ್.ವೈ.ಕುಲಕರ್ಣಿ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.