Advertisement

ಮೋಡೆಲ್‌ ಕೋ ಆಪ್‌ ಬ್ಯಾಂಕ್‌ಗೆ “ಉತ್ಕೃಷ್ಟ ಸಾಧಕ ಬ್ಯಾಂಕ್‌’ಪುರಸ್ಕಾರ

05:14 PM Mar 07, 2017 | |

ಮುಂಬಯಿ:  ದಿ. ಮಹಾ ರಾಷ್ಟ್ರ ಅರ್ಬನ್‌ ಕೋ- ಆಪರೇಟಿವ್‌ ಬ್ಯಾಂಕ್ಸ್‌ ಫೆಡರೇಶನ್‌ ಲಿಮಿಟೆಡ್‌ ಇದರ 2015-2016ರ ನೇ ಸಾಲಿನ ವಾರ್ಷಿಕ ಬ್ಯಾಂಕ್‌ ಪುರಸ್ಕಾರ ಪ್ರದಾನ ಸಮಾರಂಭವು ಮಾ. 6 ರಂದು ವಡಾಲದ ಭಾರತೀಯ ಕ್ರೀಡಾ ಮಂದಿರ ಸಂಕುಲದ ಸಭಾಗೃಹದಲ್ಲಿ ನಡೆಯಿತು.

Advertisement

ಫೆಡರೇಶನ್‌ ಅಧ್ಯಕ್ಷ ವಿದ್ಯಾಧರ್‌ ಅನಾಸ್ಕರ್‌ ಅಧ್ಯಕ್ಷತೆಯಲ್ಲಿ ಜರಗಿದ ಬ್ಯಾಂಕ್ಸ್‌ ಫೆಡರೇಶನ್‌ ಲಿಮಿಟೆಡ್‌ನ‌ 38ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಪಾರಿತೋಷಕ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಹಾರಾಷ್ಟ್ರ ಸಚಿವ ಸುಭಾಶ್‌ ರಾವ್‌ ದೇಶ್‌ಮುಖ್‌ ಉಪಸ್ಥಿತರಿದ್ದು ಮೋಡೆಲ್‌ ಕೋ-ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಸಂಸ್ಥೆ 2015-2016 ರ ಕ್ಯಾಲೆಂಡರ್‌ ವರ್ಷದ ವಾರ್ಷಿಕ ವ್ಯವಹಾರ 600 ಕೋ. ರೂ. ಗಳ ಮೊತ್ತಕ್ಕಿಂತ ಅಧಿಕ ವ್ಯವಹಾರಕ್ಕಾಗಿ “ಉತ್ಕೃಷ್ಟ ಸಾಧಕ ಬ್ಯಾಂಕ್‌ ಪುರಸ್ಕಾರ-2016′ ಪುರಸ್ಕಾರ  ಹಾಗೂ ನೂರು ವರ್ಷಗಳನ್ನು (ಶತ ಮಾನ) ಪೂರೈಸಿದಕ್ಕಾಗಿ ವಿಶೇಷ ಪ್ರಶಸ್ತಿ ಗೌರವ ಪಾರಿತೋಷಕ ಹಸ್ತಾಂತರಿಸಿ ಶುಭಾರೈಸಿದರು. ಮೋಡೆಲ್‌ ಬ್ಯಾಂಕ್‌ನ  ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲೂ Â.ಡಿ’ಸೋಜಾ ಹಾಗೂ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಲೂಯಿಸ್‌ ಡಿ’ಸೋಜಾ ಪುರಸ್ಕಾರ ಫಲಕ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಹೆಚ್ಚುವರಿ ಪ್ರಧಾನ ಪ್ರಬಂಧ‌ಕ ಹರೋಲ್ಡ್‌ ಎಂ.ಸೆರಾವೋ ಉಪಸ್ಥಿತರಿದ್ದು ಸಂತಸ ವ್ಯಕ್ತಪಡಿಸಿದರು.

ಮೋಡೆಲ್‌ ಬ್ಯಾಂಕ್‌ನ ಗತ ಸಾಲಿನಲ್ಲಿ ಭದ್ರತಾ ಠೇವಣಿ 764.46 ಕೋ. ರೂ. ಗಳನ್ನು  ಹೊಂದಿದ್ದು,  ಮುಂಗಡ ಠೇವಣಿ 415.41 ಕೋ. ರೂ.  ಹೊಂದಿ ಸುಮಾರು 88.11 ಕೋ. ರೂ. ನಿವ್ವಳ ಲಾಭ ಪಡೆದಿದೆ. 834.72 ಕೋ. ರೂ. ಕಾರ್ಯನಿರ್ವಹಣಾ ಬಂಡವಾಳದೊಂದಿಗೆ ವ್ಯವಹರಿಸಿ 76.10 ಕೋ. ರೂ. ಒಟ್ಟು ಲಾಭ ಪಡೆದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವುದನ್ನು ಪರಿಗಣಿಸಿ ಬ್ಯಾಂಕ್ಸ್‌ ಫೆಡರೇಶನ್‌ ನಮ್ಮ ಸಂಸ್ಥೆಯನ್ನು ಗೌರವಿಸಿರುವುದು ಅಭಿಮಾನ ಎನಿಸುತ್ತಿದೆ ಎಂದು ಮೋಡೆಲ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಿ’ಸೋಜಾ ತಿಳಿಸಿದರು. 

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next