Advertisement
ಇದಕ್ಕೆ ಬೆಳಗಾವಿ ಜಿಲ್ಲೆಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಮಠಾಧೀಶರು ಹಾಗೂ ದಾನಿಗಳ ನೈತಿಕ ಬಲದಿಂದ ಹಮ್ಮಿಕೊಂಡಿರುವ ನಮ್ಮ ಚಿತ್ತ ಹಸಿದವರತ್ತ ಅಭಿಯಾನವೇ ಸಾಕ್ಷಿ. ಕೋವಿಡ್ 19 ವೈರಸ್ ಹಿನ್ನಲೆಯಲ್ಲಿ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಲು ಮುಂದಾಗಿರುವ ಈ ತಂಡದ ನೆರವಿನ ಅಭಿಯಾನ ಒಂದು ತಿಂಗಳು ಯಶಸ್ವಿಯಾಗಿ ಪೂರೈಸಿದೆ. ಜಿಲ್ಲೆಯಲ್ಲಿ ಕಷ್ಟದಲ್ಲಿರುವ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯ ನೀಡಿ ಧನ್ಯವಾಗಿದೆ.
Related Articles
Advertisement
ಶಾಹೂನಗರ, ಅಜಮ್ ನಗರ ಮತ್ತು ನೆಹರೂ ನಗರ, ವೈಭವ ನಗರಗಳಲ್ಲಿ ಈ ಜನರು ವಾಸವಾಗಿದ್ದು ಈಗ ಯಾವುದೇ ಕೆಲಸವಿಲ್ಲ. ಕೈಗೆ ಸಂಬಳವಿಲ್ಲ. ಮನೆ ನಡೆಸಲು ಕಾಳು, ಕಡಿ ಇಲ್ಲ. ಇಂತಹ ಹಲವಾರು ಕುಟುಂಬಗಳಿಗೆ ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯಿಂದ ಆಹಾರ ಧಾನ್ಯಗಳ ಕಿಟ್ ಸೇರಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಕ್ರಿಯಾ ಸಮಿತಿ ಸದಸ್ಯರು ಬೆಳಗಾವಿ ಬಳಿಯ ಕಾಕತಿಯಿಂದ ಹಿಡಿದು ಪೀರನವಾಡಿ, ಹುಂಚಾನಟ್ಟಿ, ಕಣಬರ್ಗಿ, ಲಕ್ಷ್ಮೀ ಟೇಕಡಿ, ಶಹಾಪೂರ, ವೈಭವ ನಗರ, ಶಾಹೂನಗರ, ಸದಾಶಿವನಗರ, ಹನುಮಾನನಗರ, ವಡಗಾವಿ, ಹುಕ್ಕೇರಿ, ಖಾನಾಪುರ ತಾಲೂಕುಗಳಿಗೆ ಸಹ ಹೋಗಿ ಬಂದಿದ್ದಾರೆ. ಅಲ್ಲಿನ ನೂರಾರು ಬಡ ವರ್ಗದ ಜನರಿಗೆ ನೆರವಾಗಿದ್ದಾರೆ.
ಸಂಕಷ್ಟದಲ್ಲಿರುವ ಕುಟುಂಬಗಳ ಪಟ್ಟಿಯು ದಿನೇ ದಿನೇ ಬೆಳೆಯುತ್ತಿದೆ. ಎಲ್ಲರನ್ನೂ ಸಮಾಧಾನಪಡಿಸುವದು ಸಾಧ್ಯವಿಲ್ಲ. ಸರಕಾರ ರೇಶನ್ ಅಂಗಡಿಗಳಲ್ಲಿ ಬಿಪಿಎಲ್ ಜೊತೆಗೆ ಎಪಿಎಲ್ ಕುಟುಂಬದವರಿಗೂ ಅಕ್ಕಿ ಕೊಡಲು ಆರಂಭಿಸಿದೆ. ಆದರೆ ಎಣ್ಣೆ, ಸಕ್ಕರೆ, ಚಹಾಪುಡಿ, ತೊಗರಿ ಬೇಳೆಯೂ ಅವಶ್ಯ. ಈ ಸಾಮಾನುಗಳನ್ನು ಕೊಡುವ ಯತ್ನವನ್ನೂ ನಮ್ಮ ಸಂಘಟನೆ ಮಾಡುತ್ತಿದೆ ಎನುತ್ತಾರೆ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.
ಈ ನಮ್ಮ ಅಭಿಯಾನಕ್ಕೆ ದಾನಿಗಳು ಮುಂದೆ ಬರಬೇಕು. ಹಸಿದ ಹೊಟ್ಟೆಗಳಿಗೆ ಅನ ಹಾಕುವ ಸತ್ಕಾರ್ಯಕ್ಕೆ ಮುಂದಾಗಬೇಕು. ದಾನಿಗಳು ಬೆಳಗಾವಿಯ ಯಾವುದೇ ಅಂಗಡಿಗಳಲ್ಲಿ ಆಹಾರಧಾನ್ಯ ಖರೀದಿಸಿಟ್ಟರೂ ನಮ್ಮ ವಾಹನಗಳು ಅಲ್ಲಿಗೆ ಬಂದು ಸಂಗ್ರಹಿಸುತ್ತವೆ. ಬಡವರಿಗೆ ಸಹಾಯ ಮಾಡುವ ಈ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ ಎಂಬುದು ಸಮಿತಿಯ ಸದಸ್ಯರ ಅಭಯ.
ಕಳೆದ ವರ್ಷ ಎದುರಾದ ನೆರೆ ಹಾವಳಿ ಹಾಗೂ ಈಗ ಬಂದಿರುವ ಕೋವಿಡ್ 19 ನಮಗೆ ಬಹಳ ದೊಡ್ಡ ಸವಾಲುಗಳು. ಎರಡೂ ಸಮಯದಲ್ಲೂ ಬಡ ವರ್ಗದ ಜನರಿಗೆ ತಕ್ಕಮಟ್ಟಿಗೆ ಸಹಾಯ ಮಾಡಿದ ತೃಪ್ತಿ ಇದೆ. ನಮ್ಮ ಸಹಾಯದಿಂದ ತೊಂದರೆಗಳು ಶಾಶ್ವತವಾಗಿ ಮುಗಿಯುವದಿಲ್ಲ ಎಂಬುದು ನಮಗೆ ಗೊತ್ತು. ಆದರೆ ಈ ಸಂದರ್ಭದಲ್ಲಿ ಎದುರಾದ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಇದರಲ್ಲಿ ಸವಿತಿಯ ಸದಸ್ಯರ ಸಹಕಾರ ಬಹಳ ಇದೆ. -ಅಶೋಕ ಚಂದರಗಿ, ಜಿಲ್ಲಾ ಕ್ರಿಯಾ ಸಮಿತಿ ಅಧ್ಯಕ
-ಕೇಶವ ಆದಿ