Advertisement
ಕುವೆಂಪು ಮಕ್ಕಳ ಸಾಹಿತ್ಯ ಪರಿಷತ್‌ವತಿಯಿಂದ ನಗರದ ಟ್ಯಾಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಓದಿನಿಂದ ಮಾತ್ರ ಸಾಹಿತ್ಯಾಭಿರುಚಿ ಬೆಳೆಯಲಿದೆ ಎಂಬುದು ಸಾಹಿತಿಗಳ ಅಭಿಮತ ವಾಗಿರುವುದನ್ನು ಪರಿಗಣಿಸಿ ನಮ್ಮ ಶಾಲೆಯಲ್ಲಿ ಪ್ರತಿವರ್ಷ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.
Related Articles
Advertisement
ವಿವಿಧ ಗೋಷ್ಠಿ; ಗೋಷ್ಠಿಯಲ್ಲಿ ಮಕ್ಕಳು ಸ್ವರಚಿತ ಕವನ ವಾಚಿಸಿದರು. ಕಥಾಗೋಷ್ಠಿಯಲ್ಲಿ ಹತ್ತಾರು ಮಕ್ಕಳು ಭಾಗವಹಿಸಿ ತಮ್ಮೊಳಗಿನ ಪ್ರತಿಭೆ ಪ್ರದರ್ಶಿಸಿದರು.ವೈಭವದ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಮೈಸೂರು-ಮಂಗಳೂರು ಹೆದ್ದಾರಿಯಿಂದ ಡೊಳ್ಳುಕುಣಿತ, ವೀರಗಾಸೆ, ಪೂರ್ಣಕುಂಭದೊಂದಿಗೆ ಹೊರಟ ಸಾಹಿತ್ಯ ಮೆರವಣಿಗೆಗೆ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಚಾಲನೆ ನೀಡಿದರು.
ಮಳೆಯ ಸಿಂಚನದ ನಡುವೆಯೂ ಮೆರವಣಿಗೆಯಲ್ಲಿ ಮಕ್ಕಳು, ಕನ್ನಡ ಪ್ರೇಮಿಗಳು ಸಂತಸದಿಂದ ಹೆಜ್ಜೆ ಹಾಕಿದರು. ಸಮ್ಮೇಳನದಲ್ಲಿ ವಿಶೇಷವಾಗಿ ಗುರುಪುರದ ಅನೇಕ ಟಿಬೇಟಿಯನ್ನರು ಮಕ್ಕಳೊಂದಿಗೆ ಭಾಗವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಕೆ.ಮಹಾದೇವ್ ಮಾತನಾಡಿ, ಕನ್ನಡವೆಂದರೆ ಕೇವಲ ಭಾಷೆಯಷ್ಟೇ ಅಲ್ಲ ಅದು ಒಂದು ಪರಂಪರೆಯ ಜೀವಂತಿಕತೆಯ ಕುರುಹು. ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮವನ್ನು ಉದ್ದೀಪನಗೊಳಿಸಿ ಭರವಸೆಯ ಭವಿಷ್ಯಕ್ಕೆ ಅವರನ್ನು ಸಜ್ಜುಗೊಳಿಸಬೇಕಾದ ಬದ್ಧತೆ ಹಾಗೂ ತುರ್ತು ನಮ್ಮ ಮುಂದಿದೆ ಎಂದರು.
ಕಾರ್ಯಕ್ರಮದಲ್ಲಿ ಟ್ಯಾಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ನಾರಾಯಣ್ ರೈ, ನಿರ್ದೇಶಕ ಆರ್.ಎನ್. ಮಂಜುನಾಥ್, ಪ್ರಾಚಾರ್ಯ ಮಂಜುನಾಥ್, ಕರವೇ ಅಧ್ಯಕ್ಷ ಪುರುಷೋತ್ತಮ್, ರೋಟರಿ ಅಧ್ಯಕ್ಷ ಪಾಂಡುಕುಮಾರ್, ಕೆ.ಎಸ್.ರೇಣುಕಾಪ್ರಸಾದ್, ಡಾ.ಮಾದುಪ್ರಸಾದ್, ಎಸ್.ಜಯರಾಮ್, ಜೆ.ಮಹಾದೇವ್‌ಕಲ್ಕುಣಿಕೆ, ಕೃ.ಪಾ.ಮಂಜುನಾಥ್, ಸಾಯಿನಾಥ್ ಇತರರು ಇದ್ದರು.