Advertisement

ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ –ಪೊಲೀಸರ ಕಾರ್ಯಾಚರಣೆ

05:25 PM Nov 05, 2021 | Team Udayavani |

ಪಣಜಿ: ಮಡಗಾಂವ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ನಡೆದಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ಮಡಗಾಂವ ಪೋಲಿಸರು ಕಾರ್ಯಾಚರಣೆ ನಡೆಸಿ ಕರ್ನಾಟಕದ ಹುಬ್ಬಳ್ಳಿಯ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಕಳ್ಳತನದ ಮೂರು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಮಡಗಾಂವ ಪೋಲಿಸರು ನೀಡಿರುವ ಮಾಹಿತಿಯ ಅನುಸಾರ- ಮಡಗಾಂವ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿರುವ ಸಂದರ್ಭದಲ್ಲಿ ಆಹಶೆದ್ ಸಯ್ಯದ್ ರವರ 85,000 ರೂ ಮೌಲ್ಯದ ಮೊಬೈಲ್ ನವೆಂಬರ್ 1 ರಂದು ಕಳ್ಳತನವಾಗಿತ್ತು. ಈ ಕುರಿತಂತೆ ಸಯ್ಯದ್ ರವರು ಮಡಗಾಂವ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.

Advertisement

ಇದನ್ನೂ ಓದಿ;- ಹರ್ಯಾಣದಲ್ಲಿ ರೈತರ ಪ್ರತಿಭಟನೆ, ಬಿಜೆಪಿ ಸಂಸದರ ಕಾರು ಜಖಂ
ಪೋಲಿಸ್ ನಿರೀಕ್ಷಕ ಕಪಿಲ್ ನಾಯ್ಕ ರವರ ನೇತೃತವದಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿಯ ರಾಕೇಶ್ ಗುಂಜನ್ (28), ವಿಶ್ವನಾಥ ಭೋವಿ (34), ಸದಾನಂದ ಭೋವಿ(29) ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಪೋಲಿಸರು 3 ಮೊಬೈಲ್ ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next