Advertisement

ಬೆಳೆಹಾನಿ ಮಾಹಿತಿಗೆ ಮೊಬೈಲ್‌ ಆ್ಯಪ್‌

12:06 PM Jan 17, 2018 | Team Udayavani |

ಬೆಂಗಳೂರು: ಪ್ರಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಬೆಳೆ ನಷ್ಟವಾದ ರೈತರಿಗೆ ಸಕಾಲದಲ್ಲಿ ಪರಿಹಾರ ವಿತರಿಸಲು ಸಹಕಾರಿಯಾಗುವ ಮೊಬೈಲ್‌ ಆ್ಯಪ್‌ನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗದಿಂದ ಸಿದ್ಧಪಡಿಸಲಾಗಿದೆ.

Advertisement

ಈ ನೂತನ ತಂತ್ರಾಂಶದ ಮೂಲಕ ರೈತರು ತಮ್ಮ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ಖುದ್ದಾಗಿ ವರದಿ ಸಲ್ಲಿಸ ಬಹುದಾಗಿದೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ ಎಂದು ಪ್ರಾಧಿಕಾರ ಪ್ರಕಟಣೆ ತಿಳಿಸಿದೆ.

ವಿಪತ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ 1070ಗೆ ತುರ್ತು ಸಮಯದಲ್ಲಿ ಕರೆ ಮಾಡಬಹುದಾಗಿದೆ. ಜನರು ವಿಪತ್ತು ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ರಾಜ್ಯ ವಿಪತ್ತು ನಿಯಂತ್ರಣಾ ಕೊಠಡಿಗೆ ಸಂಪರ್ಕಿಸಬಹುದು. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ.

ವಿಪತ್ತು ನಿರ್ವಹಣಾ ಕೇಂದ್ರದಿಂದ ರಾಜ್ಯದ ಜನರು ಪ್ರಪಂಚದ ಯಾವುದೇ ಮೂಲೆಯಲ್ಲಿ ವಿಪತ್ತಿಗೆ ಸಿಲುಕಿರುವ ಬಗ್ಗೆ ಅವರ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ರಾಜ್ಯ ವಿಪತ್ತು ನಿಯಂತ್ರಣಾ ಕೊಠಡಿಗೆ ಕರೆ ಮಾಡಿ ಅವರ ಸಂಪೂರ್ಣ ಮಾಹಿತಿ ನೀಡಬೇಕು. ಆಗಾ ವಿಪತ್ತು ನಿಯಂತ್ರಣಾ ಕೊಠಡಿಯ ಅಧಿಕಾರಿಗಳು ಸಂಬಂಧಪಟ್ಟ ಸರ್ಕಾರದ ಜತೆ ಸಂಪರ್ಕಿಸಿ ರಕ್ಷಣಾ ಕಾರ್ಯ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next