Advertisement

ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ: ಎಚ್.ವಿಶ್ವನಾಥ್

02:05 PM Mar 25, 2023 | Team Udayavani |

ಮೈಸೂರು : ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ. ಅನರ್ಹಗೊಳಿಸುವ ಉದ್ದೇಶದಿಂದಲೇ ಶಿಕ್ಷೆಯ ಅವಧಿ ವಿಸ್ತರಿಸಲಾಗಿದೆ ಎಂದು ಬಿಜೆಪಿ ಎಂಎಲ್‌ಸಿ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ, ಸಾಮಾಜಿಕ ಜಾಲತಾಣಗಳು ಪಪ್ಪು, ಬುದ್ದಿಗೇಡಿ ಅಂತೆಲ್ಲ ಗೇಲಿ ಮಾಡಿದ್ದರು. ಇದಕ್ಕೆ ಭಾರತ್ ಜೋಡೋ ಯಾತ್ರೆ ಮೂಲಕ ಪ್ರತ್ಯುತ್ತರ ನೀಡಿದರು. ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರು.  ಅಲ್ಲಿಂದ ಬಂದ ಬಳಿಕ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ.  ಸ್ಪೀಕರ್ ಕೂಡ ಅವರಿಗೆ ಸಹಕಾರ ನೀಡಲಿಲ್ಲ. ವಿರೋಧ ಪಕ್ಷ, ನಾಯಕರನ್ನು ದಮನ ಮಾಡಲಾಗುತ್ತಿದೆ.  ತಮಗೆ ಬೇಕಾದ ನ್ಯಾಯಾಧೀಶರು ಇರುವ ಕಡೆ ಕೇಸ್ ಹಾಕಿದ್ದರು.  ಜನತಂತ್ರವನ್ನು ಮುಗಿಸಲಾಗುತ್ತಿದೆ ಎಂದು ಎಚ್.ವಿಶ್ವನಾಥ್ ಖಂಡಿಸಿದರು.

ಇದನ್ನೂ ಓದಿ: ಭಾರತದ ಅಭಿವೃದ್ಧಿಯಲ್ಲಿ ಸಾಮಾಜಿಕ- ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದು: ನರೇಂದ್ರ ಮೋದಿ

ನಿಮ್ಮವರು ತಪ್ಪು ಮಾಡಿದರೆ ತಪ್ಪಲ್ಲ. ಅದೇ ವಿರೋಧಿಗಳು ಮಾಡಿದರೆ ಐಟಿ, ಇಡಿ ಮೂಲಕ ಕಿರುಕುಳ ನೀಡಲಾಗುತ್ತದೆ. ಪ್ರಧಾನಿಗಳೇ ಕಾಂಗ್ರೆಸ್ ವಿರುದ್ಧ ಯಾವ ರೀತಿ ಮಾಡಿದ್ದಾರೆ ಅನ್ನೋದನ್ನು ನೋಡಿದ್ದೇವೆ.  ಯಾರನ್ನೂ ದಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ.  ರಾಹುಲ್ ಗಾಂಧಿ ಸ್ಪರ್ಧೆ ಮಾಡದಂತೆ ತಡೆಯುವ ಪ್ರಯತ್ನ ನಡೆದಿದೆ.  ಬಿಜೆಪಿಯವರು ಆತಂಕದಿಂದ ರಾಹುಲ್ ಗಾಂಧಿ ತಡೆಯುತ್ತಿದ್ದಾರೆ ಎಂದು ಗುಡುಗಿದರು.

ಸಂಸತ್ತಿನ ಶೇ.54ರಷ್ಟು ಸದಸ್ಯರಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಸಂಸದೀಯ ಮಂಡಳಿ ಅವರನ್ನೂ ಅನರ್ಹಗೊಳಿಸಬೇಕು. ರಾಹುಲ್ ಗಾಂಧಿ ಅನರ್ಹತೆಗೆ ತೋರಿದ ಆಸಕ್ತಿಯನ್ನು ಶೇ.54ರಷ್ಟು ಸದಸ್ಯರಿಗೂ ಅನ್ವಯಿಸಿ. ಸಂಸತ್ತಿನಲ್ಲಿ ರೇಪ್ ಮಾಡಿದವರು, ಕಳ್ಳತನ ಮಾಡಿಸಿದವರು, ದುಡ್ಡು ಮಾಡಿದವರು, ಜೈಲು ಶಿಕ್ಷೆ ಅನುಭವಿಸಿದವರು ಸಂಸತ್ತಿನಲ್ಲಿ ಇದ್ದಾರೆ. ಈ ಇಬ್ಬಂದಿತನ ಯಾಕೆ? ಎಂದು ಪ್ರಶ್ನಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next