Advertisement

ಪರಿಷತ್ ಫೈಟ್: ಶಿವಮೊಗ್ಗ, ಬಳ್ಳಾರಿಯಲ್ಲಿ ಅರಳಿದ ಕಮಲ, ರಾಯಚೂರಿನಲ್ಲಿ ಕಾಂಗ್ರೆಸ್ ಗೆಲುವು

01:27 PM Dec 14, 2021 | Team Udayavani |

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಹುತೇಕ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಬಳ್ಳಾರಿ, ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ರಾಯಚೂರಿನಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ.

Advertisement

ಬಳ್ಳಾರಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರಿಗಿಂತ 757 ಹೆಚ್ಚು ಮತಗಳ ಪಡೆದು ಗೆಲುವು ಸಾಧಿಸಿದರು.

ಬಿಜೆಪಿಯ ಸತೀಶ್ ಅವರು 2659 ಮತಗಳನ್ನು ಪಡೆದರೆ, ಕೆ.ಸಿ.ಕೊಂಡಯ್ಯ ಅವರು 1902 ಮತಗಳು , ಪಕ್ಷೇತರ ಅಭ್ಯರ್ಥಿಗಳಾದ ಗಂಗಿರೆಡ್ಡಿ 4 ಮತ, ಸಿ.ಎಂ. ಮಂಜುನಾಥ ಸ್ವಾಮಿ 2 ಮತಗಳನ್ನು ಪಡೆದರು. 87 ಮತಗಳು ತಿರಸ್ಕೃತವಾದವು.

ಬಿಜೆಪಿಯ ಅರುಣ್ ಭರ್ಜರಿ ಜಯ

ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಭರ್ಜರಿ ಗೆಲುವು ದಾಖಲಿಸಿ ವಿಜಯದ ನಗೆ ಬೀರಿದ್ದಾರೆ.

Advertisement

ಡಿ.ಎಸ್.ಅರುಣ್ ಮೊದಲ ಪ್ರಾಶಸ್ತ್ಯದ 2192 ಮತಗಳನ್ನು ಗಳಿಸಿದರು. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಆರ್. ಪ್ರಸನ್ನಕುಮಾರ್ ಅವರನ್ನು 344 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಜೆಡಿಯು ಅಭ್ಯರ್ಥಿ ಶಶಿಕುಮಾರ್ 03, ಪಕ್ಷೇತರ ಅಭ್ಯರ್ಥಿ ರವಿ 04 ಮತಗಳನ್ನು ಪಡೆದರು. 109 ಮತಗಳು ತಿರಸ್ಕೃತವಾದವು.  ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಇದನ್ನೂ ಓದಿ:ಪರಿಷತ್ ಫೈಟ್: ಚಿತ್ರದುರ್ಗ, ಉ. ಕನ್ನಡ, ಚಿಕ್ಕಮಗಳೂರು, ಮಂಗಳೂರು ಕ್ಷೇತ್ರದ ಫಲಿತಾಂಶ ಪ್ರಕಟ

ಶರಣಗೌಡ ಪಾಟೀಲ್ ಗೆಲುವು

ರಾಯಚೂರು: ರಾಯಚೂರು -ಕೊಪ್ಪಳ ಎಂಎಲ್ ಸಿ ಕ್ಷೇತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ಯಾಪೂರ 427 ಮತ ಅಂತರದ ಗೆಲವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಬನಹಟ್ಟಿಗೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ 3369 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ 2942 ಮತಗಳನ್ನು ಪಡೆದಿದ್ದಾರೆ. 152 ಮತಗಳು ತಿರಸ್ಕೃತಗೊಂಡಿವೆ‌. ಜನಹಿತ ಪಕ್ಷದ ಅಭ್ಯರ್ಥಿ ತಿರುಪತಿ 13 ಪಡೆದರೆ, ಪಕ್ಷೇತರ ಅಭ್ಯರ್ಥಿ ನರೇಂದ್ರ ಆರ್ಯ ಕೇವಲ ಒಂದು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next