Advertisement

ಮುಸ್ಲಿಂ ಮೃತಪಟ್ಟಿದ್ರೆ ಸೋನಿಯಾ-ರಾಹುಲ್ ಬರುತ್ತಿದ್ರು; ಹರ್ಷ ಮನೆಗೆ ಯಾರೂ ಬಂದಿಲ್ಲ:ಯತ್ನಾಳ್

10:03 AM Feb 24, 2022 | Team Udayavani |

ಶಿವಮೊಗ್ಗ: ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಒಬ್ಬ ಮುಸ್ಲಿಂ ಮೃತಪಟ್ಟಿದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೂ ಬರುತ್ತಿದ್ದರು. ಆದರೆ ಹರ್ಷ ಮನೆಗೆ ಯಾವೊಬ್ಬ ಕಾಂಗ್ರೆಸ್ ನಾಯಕರೂ ಬಂದಿಲ್ಲ. ಹಿಂದೂಗಳನ್ನು ವಿರೋಧಿಸಿದ್ದಕ್ಕೆ ಕಾಂಗ್ರೆಸ್ ಹಾಳಾಗಿದೆ. ಆದರೂ ಕಾಂಗ್ರೆಸ್ ಗೆ ಪಾಠ ಬಂದಿಲ್ಲ‌ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡಿದರು.

Advertisement

ಹತ್ಯೆಯಾದ ಹಿಂದೂ ಕಾರ್ಯಕರ್ತ ಹರ್ಷ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಿಮ್ಮೊಂದಿಗೆ ಎಂದೆಂದಿಗೂ ನಾವಿರುತ್ತೇವೆ ಎಂದು ನಾಯಕರು ಅಭಯ ನೀಡಿದರು. ಇದೇ ವೇಳೆ ಹರ್ಷ ಕುಟುಂಬದವರಿಗೆ ಯತ್ನಾಳ್ ಸಿದ್ಧಸಿರಿ ಸೌಹಾರ್ದ ವತಿಯಿಂದ 50 ಸಾವಿರ ರೂಪಾಯಿ ಚೆಕ್ ನೀಡಿದರು.

ಹಿಂದೂ ಕಾರ್ಯಕರ್ತ ಹರ್ಷನನ್ನು ದಾರುಣವಾಗಿ‌ ಕೊಲೆ ಮಾಡಿದ್ದಾರೆ. ಹಿಂದೂ ಯುವಕರ ಕೊಲೆಗೆ ಅಂತ್ಯ ಹಾಡಬೇಕಿದೆ. ಹರ್ಷನ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಿದ್ದಾರೆ. ಈ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಇಲ್ಲದಿದ್ದಲ್ಲಿ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:ಶಿವಮೊಗ್ಗ ಪರಿಸ್ಥಿತಿ ವಿಚಾರವಾಗಿ ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಹಿಂದೂ ಕಾರ್ಯಕರ್ತರ ಹತ್ಯೆ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಅಡಗಿದೆ. ಎಲ್ಲೆಲ್ಲಿ ಮುಸ್ಲಿಮರು ಹೆಚ್ಚಿದ್ದಾರೋ ಅಲ್ಲಿ ಹಿಂದೂಗಳು ಬದುಕುವುದೇ ಕಷ್ಟವಾಗಿದೆ. ಹಿಂದೂ ಯುವಕರ ಕೊಲೆ ಮಾಡಿದವರು ಖುಲಾಸೆಯಾಗುತಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು. ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಎನ್ ಐಎ ಗೆ ವಹಿಸಬೇಕು ಎಂದು ಆಗ್ರಹಿಸಿದರು.

Advertisement

ಹೆಣ್ಣುಮಕ್ಕಳನ್ನು ಮುಂದಿಟ್ಟುಕೊಂಡು ಮುಸ್ಲಿಂ ಯುವಕರು ದುಷ್ಕೃತ್ಯ ಎಸಗುತ್ತಿದ್ದಾರೆ. ಹಿಂದೆ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಹಿಜಾಬ್ ವಿಷಯದಲ್ಲಿ ಗಲಾಟೆ ಆರಂಭಿಸಿದರು‌. ಹರ್ಷನ ಹತ್ಯೆ ಪ್ರಕರಣದಲ್ಲಿಯೂ ಸಹ ಯುವತಿಯರನ್ನು ಮುಂದಿಟ್ಟುಕೊಂಡಿದ್ದು ದೃಢಪಟ್ಟಿದೆ‌. ಹಿಂದೂಗಳ ರಕ್ಷಣೆ, ದೇಶದ ರಕ್ಷಣೆ ನಮ್ಮ ಮೊದಲ ಕರ್ತವ್ಯ. ಹಿಂದೂಗಳ ಹಿಂದೆ ನಾವೆಂದೂ ಇರುತ್ತೇವೆ. ನಮಗೆ ಹಿಂದೂಗಳ ಸಮಾಧಿ ಮೇಲೆ ಅಧಿಕಾರ ನಡೆಸುವ ಅಗತ್ಯವಿಲ್ಲ‌. ಗೋಹತ್ಯೆ ನಿಷೇಧ, ಹಿಂದುತ್ವದ ರಕ್ಷಣೆಗಾಗಿ ಹೋರಾಟ ಮಾಡಿ ಮಡಿಯುವ ಪ್ರಸಂಗ ಹರ್ಷನ ಕೊಲೆಗೇ ಕೊನೆಯಾಗಬೇಕು ಎಂದು ಯತ್ನಾಳ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next