ಇಂಡಿ: ಗ್ರಾಮ ಪಂಚಾಯತ್‌ಗಳಲ್ಲಿ ಭ್ರಷ್ಟಾಚಾರ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಶಾಸಕ ಯಶವಂತರಾಯಗೌಡ ಪಾಟೀಲ ತಾಪಂ ಇಒ ಸುನೀಲ ಮದ್ದಿನ್ ಅವರಿಗೆ ಸೂಚಿಸಿದರು.
ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಸಬಾಭವನದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಾಭಿವೃದ್ಧಿ ಮಾಡಬೇಕಾದ ಅಧಿ ಕಾರಿಗಳೆ ಭ್ರಷ್ಟಾಚಾರ ಮಾಡಿದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು. ತಾಲೂಕಿನಲ್ಲಿ ನೀರಿಲ್ಲದೆ ಬಿತ್ತಿದ ಬೀಜಗಳು ಮೊಳಕೆಯೊಡೆಯುತ್ತಿಲ್ಲ.
ಸಚಿವ ಉಮೇಶ ಕತ್ತಿಯವರು ಇಲ್ಲಿನ ರೈತರ ಸ್ಥಿತಿ ಅರಿತು ತಕ್ಷಣ ಕಾಲುವೆಗೆ ನೀರು ಹರಿಸಬೇಕು. ಐಸಿಸಿ ಸಭೆ ಕರೆದು ಅನುಮೋದನೆ ಪಡೆಯಬೇಕು ಎಂದು ಸಚಿವರಿಗೆ ಮತ್ತು ಕೆಬಿಜೆಎನ್ನೆಲ್ ಅಧಿ ಕಾರಿಗಳಿಗೆ ವಿನಂತಿಸಿರುವುದಾಗಿ ತಿಳಿಸಿದರು. ಕಳೆದ ಬಾರಿ ನೆರೆ ಹಾವಳಿಯಿಂದ ಇಂಡಿ, ಚಡಚಣ ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ, ಆಸ್ತಿ-ಪಾಸ್ತಿ, ಜನ ಜಾನುವಾರು ಹಾನಿಯಾಗಿತ್ತು. ಈ ಕುರಿತು ಎರಡು ರಾಜ್ಯಗಳ ಅಧಿ ಕಾರಿಗಳು ಮೇಲಿಂದ ಮೇಲೆ ಚರ್ಚೆ ನಡೆಸಿ ಸಮನ್ವಯ ಸಾಧಿ ಸಬೇಕು. ಈ ಕುರಿತು ಮಹಾರಾಷ್ಟ್ರದ ನೀರಾವರಿ ಸಚಿವ ಜಯಂತರಾವ್ ಪಾಟೀಲರ ಜೊತೆಗೆ ಮಾತನಾಡಿ ಇಲ್ಲಿಯ ಪರಿಸ್ಥಿತಿ ಬಗ್ಗೆ ಮನವರಿಗೆ ಮಾಡಿ ಕೊಟ್ಟಿದ್ದೇನೆ ಎಂದರು.
ಪಟ್ಟಣದಲ್ಲಿನ ಮಿನಿ ವಿಧಾನಸೌಧಕ್ಕೆ ಲಿಫ್ಟ್ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಸಕ್ಕರೆ ಕಾರ್ಖಾನೆ ಬಿಲ್ಲು ರೈತರ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಿಸಿದೆ. ಕೃಷ್ಣಾ ಕಾಲುವೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಬೇಕು. ಈ ಕುರಿತು ಪ್ರಾ ಧಿಕಾರದ ಅ ಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದ ಅವರು, ಉಡಚಣ ರೋಡಗಿ ಬ್ರಿಡ್ಜ್ ಕಾರ್ಯ ಮುಗಿಯುವ ಹಂತದಲ್ಲಿದ್ದು ಶೀಘ್ರ ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದರು. ಡ್ರಗ್ಸ್ ಮಾμಯಾ: ತಾಲೂಕು ಗಡಿ ಪ್ರದೇಶದಲ್ಲಿರುವುದರಿಂದ ಮಧ್ಯಪ್ರದೇಶದಿಂದ ಡ್ರಗ್ಸ್ ಇಂಡಿ ತಾಲೂಕಿಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಧಾಬಾಗಳಲ್ಲಿ ಡ್ರಗ್ಸ್ ದಂಧೆ ಜೋರಾಗಿದ್ದು ಪೊಲೀಸ್ ಇಲಾಖೆ ಅಂತಹ ಜಾಲವನ್ನು ಕಂಡು ಹಿಡಿಯಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಯುವ ಸಮೂಹ ಹಾಳಾಗುತ್ತದೆ. ಇಲ್ಲಿ ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಇನ್ನೂ ಅನೇಕ ದಂಧೆಗಳು ನಡೆಯುತ್ತಿವೆ.
ಅವುಗಳಿಗೆಲ್ಲ ಇಲಾಖೆ ಕಡಿವಾಣ ಹಾಕಬೇಕು. ಇಲ್ಲವಾದರೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಸಿದರು. ಮೆಗಾ ಮಾರ್ಕೆಟ್: ಪಟ್ಟಣದಲ್ಲಿ ಮುಂಬರುವ ಸೋಮವಾರ ಮೆಗಾ ಮಾರ್ಕೆಟ್ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಲಿದೆ. ಇಂಡಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ರುದ್ರಭೂಮಿಯಲ್ಲಿ ಲೈಟು, ನೀರು ಮತ್ತು ಆಸನದ ವ್ಯವಸ್ಥೆ ಪುರಸಭೆಯವರು ಮಾಡಬೇಕು. ತಾಲೂಕಿನಲ್ಲಿ ನೀರು ಬಳಕೆದಾರರ ಸಮಿತಿ ಅಸ್ಥಿತ್ವಕ್ಕೆ ಬರಬೇಕು. ಬಂದರೆ ಬೇರೆಯವರಿಗೆ ಮಾದರಿಯಾಗಲಿದೆ. ಪಟ್ಟಣದಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆಗೆ ಬೂದಿಹಾಳ ಹತ್ತಿರ ಭೂಮಿ ತೆಗೆದುಕೊಳ್ಳಬೇಕು. ಹೊಲಗಳಿಗೆ ಹೋಗುವ ರೈತರಿಗೆ ದಾರಿ ಮಾಡಿ ಕೊಡಬೇಕು.
ಈ ಕುರಿತು ಎಸಿ, ತಹಶೀಲ್ದಾರರು, ತಾಲೂಕು ಪಂಚಾಯತ್ ಇಓ ಮಧ್ಯಸ್ಥಿಕೆ ವಹಿಸಬೇಕೆಂದರು. ಸಭೆಯಲ್ಲಿ ಆರೋಗ್ಯ, ಕೃಷಿ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಕುರಿತು ಚರ್ಚೆ ನಡೆಯಿತು. ಇಂಡಿ ಪಟ್ಟಣದಲ್ಲಿ ವಿಜಯಪುರ ಮಾದರಿಯಲ್ಲಿ ಅಂಬೇಡ್ಕರ್ ಮೂರ್ತಿ ನಿರ್ಮಾಣ ಕುರಿತು, ಇಂಡಿಯ ವೈದ್ಯ ಸಂಘಕ್ಕೆ ಮತ್ತು ನಿವೃತ್ತ ಸೈನಿಕರ ಸಂಘಕ್ಕೆ ಸ್ಥಳ ನೀಡುವ ಕುರಿತು ಪುರಸಭೆ ಸಭೆಯಲ್ಲಿ ಚರ್ಚಿಸಿ ಠರಾವು ನೀಡುವ ಕುರಿತು ತಿಳಿಸಿದರು.
ಎಸಿ ರಾಹುಲ್ ಶಿಂಧೆ, ಡಿವೈಎಸ್‌ಪಿ ಶ್ರೀಧರ ದೊಡ್ಡಿ, ತಹಶೀಲ್ದಾರ್ ಚಿದಂಬರ ಕುಲಕರ್ಣಿ ವೇದಿಕೆಯಲ್ಲಿದ್ದರು. ಆರೋಗ್ಯಾ ಧಿಕಾರಿ ಅರ್ಚನಾ ಕುಲಕರ್ಣಿ, ವೈದ್ಯಾ ಧಿಕಾರಿ ರಾಜೇಶ ಕೋಳೆಕರ, ಚಿಕ್ಕ ನೀರಾವರಿ ಇಲಾಖೆ ಎಇಇ ಬಸವರಾಜ ಬಿರಾದಾರ, ಜಿಪಂನ ಆರ್.ಎಸ್. ರುದ್ರವಾಡಿ, ಬಿಇಒ ವಸಂತ ರಾಠೊಡ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಅರಣ್ಯಾಧಿ ಕಾರಿ ಸುಮಾ ಹಳೆಹೊಳೆ, ರಾಜಕುಮಾರ ತೊರವಿ, ತೋಟಗಾರಿಕೆಯ ಆರ್.ಟಿ. ಹಿರೇಮಠ, ನಾಮ ನಿರ್ದೇಶಿತ ಸದಸ್ಯರಾದ ಅದೃಶ್ಯಪ್ಪ ವಾಲಿ, ಬೋರಮ್ಮ ಮುಳಜಿ, ಪರಶುರಾಮ ಭೋಸಲೆ, ಅಣ್ಣಪ್ಪ ಮದರಿ ಮತ್ತಿತರರಿದ್ದರು.