Advertisement

ಮನೆ ನಿರ್ಮಾಣಕ್ಕೆ ಚೆಕ್ ವಿತರಿಸಿದ ಶಾಸಕ ವಿ.ಸೋಮಣ್ಣ

06:33 PM Jul 31, 2021 | Team Udayavani |

ಬೆಂಗಳೂರು: ಪ್ರತಿಯೊಬ್ಬರ ಮನೆಯು ಮಂತ್ರಾಲಯವಾಗಬೇಕು ,ಮನಸ್ಸು ದೇವಾಲಯವಾಗಬೇಕು ಆಗ ಉತ್ತಮ ಸಮಾಜ ನೋಡಲು ಸಾಧ್ಯ ಎಂದು  ಶಾಸಕ ವಿ.ಸೋಮಣ್ಣ ನುಡಿದರು.

Advertisement

ಅವರು ಶನಿವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ  ಶಾಸಕರ ಕಚೇರಿಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು,  ಮನೆ ಮಾಲೀಕರಿಗೆ ಅನುದಾನದ ಚಕ್ಕು ಗಳನ್ನು ಮಾಜಿ ಸಚಿವರು ,ಸ್ಥಳೀಯ ಶಾಸಕರಾದ ವಿ.ಸೋಮಣ್ಣರವರು ಅರ್ಹ ಫಲಾನುಭವಿಗಳಿಗೆ ಚೆಕ್ಕುಗಳನ್ನು ವಿತರಣೆಯ ಮಾಡಿದರು .

ಬಳಿಕ  ಮಾತನಾಡಿದ ಅವರು, ಪ್ರತಿಯೊಬ್ಬರು ಸ್ವಂತ ಸೂರು ಇರಬೇಕು  ಮತ್ತು ಸುಸಜ್ಜಿತ ಮನೆ ನಿರ್ಮಿಸಬೇಕು ಎಂದು ಆಸೆ ಹೊಂದಿರುತ್ತಾರೆ .ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9 ವಾರ್ಡ್ ಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸ್ವಂತ ಜಾಗದಲ್ಲಿ ಶೀಟ್ ಮನೆಯಲ್ಲಿ ವಾಸವಿರುವವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 15×20 ಮತ್ತು 20×30 ಚದರ ಅಡಿಯಲ್ಲಿ ವಾಸಿಸುವ ನಿವಾಸಿಗಳಿಗೆ ಪ್ರತಿ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಹಣ ನೀಡಲಾಗುತ್ತಿದೆ ಎಂದರು .

ಈ ವೇಳೆ ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ವಿಶ್ವನಾಥ್ ಗೌಡ ಹಾಗೂ ಮಾಜಿ  ಬಿಬಿಎಂಪಿ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ ,ಮೋಹನ್ ಕುಮಾರ್ ,ವಾಗೇಶ್ ಶ್ರೀಮತಿ ರೂಪಲಿಂಗೇಶ್ವರ್ , ರಾಜೇಶ್ವರಿ ಬೆಳಗೊಡ್,ಶಂಕುತಲ ಡೊಡ್ಡಲಕ್ಕಪ್ಪರವರು,ಕೊಳಚೆ ನಿರ್ಮೂಲನ ಮಂಡಳಿ ಸಂಘದ ಅಧ್ಯಕ್ಷರಾದ ಎಂ.ಸೋಮಶೇಖರ್ ಮತ್ತು ಮಂಡಳಿ ಅಧಿಕಾರಿಗಳು  ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next