Advertisement
ಮಂಗಳವಾರ ಬೆಳಗ್ಗೆ ಕೆಪಿಎಸ್‌ಸಿ ಕಚೇರಿ ಬಳಿಯ ಪಾದಚಾರಿ ಮಾರ್ಗದಲ್ಲಿ ಏಕಾಂಗಿಯಾಗಿ ಕೂತು ಪ್ರತಿಭಟನೆ ಆರಂಭಿಸಿದ ಸುರೇಶ್ ಕುಮಾರ್, 2022ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 436 ಹುದ್ದೆ ಗೆ ಅರ್ಜಿ ಆಹ್ವಾನಿಸಿ, 2023 ರ ಫೆಬ್ರವರಿಯಲ್ಲಿ ಆಯೋಗದಿಂದ ಪರೀಕ್ಷೆ ನಡೆಸಲಾಗಿತ್ತು. 2023 ಆ. 17 ರಂದು ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ್ದರೂ ಇನ್ನೂ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ. ಇದರೊಂದಿಗೆ ಆಯೋಗದಲ್ಲಿ ಒಳ ಜಗಳ ಉಂಟಾಗಿದೆ ಎಂದು ಆರೋಪಿಸಿದ ಸುರೇಶ್ ಕುಮಾರ್, ಒಳ ಜಗಳ ಸಾಕು, ನ್ಯಾಯ ಬೇಕು’ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ 2023ರಲ್ಲಿ ವಿವಿಧ ಇಲಾಖೆಗಳ 1,600ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಆಯಾ ಇಲಾಖೆಗಳಿಂದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಅವುಗಳು ಸದ್ಯ ಆಯೋಗದ ಪರಿಶೀಲನೆಯಲ್ಲಿದೆ. ಈ ಪೈಕಿ 400 ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಪಶುಸಂಗೋಪನಾ ಇಲಾಖೆ ಕಳೆದ ವರ್ಷದ ಜೂನ್‌ನಲ್ಲಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಈ ಹುದ್ದೆಗಳ ನೇಮಕಾತಿಗೆ ಹೈಕೋರ್ಟ್ ತಡೆ ಇದ್ದು, ಮಾಹಿತಿ ಕೋರಿ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.