Advertisement

ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತೀರ್ಮಾನಿಸುವುದು ಜನ,ಬಿಜೆಪಿ ನಾಯಕರಲ್ಲ: ರಮೇಶ್ ಕುಮಾರ್

02:50 PM Jul 27, 2022 | Team Udayavani |

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುವುದು ರಾಜಕೀಯ ಸಹಜ. ಆದರೆ ಯಾರು ಅಧಿಕಾರಕ್ಕೆ ಬರಬೇಕೆಂದು ತೀರ್ಮಾನಿಸುವುದು ರಾಜ್ಯದ ಜನತೆಯೇ ಹೊರತು ಬಿಜೆಪಿ ನಾಯಕರಲ್ಲ ಎಂದು ರಾಜ್ಯ ವಿಧಾನಸಭೆ ಮಾಜಿ ಅಧ್ಯಕ್ಷರಾದ ಶಾಸಕ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ನಾಯಕರೇ ಹೇಳಿದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತೆಂದು ಕಾಂಗ್ರೆಸ್ ನಾಯಕರು ಹೇಳಿದರೆ ಅದರ ರಾಜಕಾರ ಏನಿರುತ್ತೆ ಎಂದು ಪ್ರಶ್ನಿಸಿದ ರಮೇಶಕುಮಾರ, ಅವರ ಕೆಲಸ ಅವರು ಮಾಡಲಿ, ನಮ್ಮ ಕೆಲಸ ನಾವು ಮಾಡುತ್ತೇವೆ. ಅಂತಿಮವಾಗಿ ಜನ ತೀರ್ಮಾನಿಸುತ್ತಾರೆ ಎಂದರು.

ಬೆಳ್ಳಾರೆಯ ಪ್ರವೀಣ ಹತ್ಯೆಯನ್ನು ಖಂಡಿಸಿದ ರಮೇಶ್ ಕುಮಾರ್, ಇಂಥ ಯಾವುದೇ ಅಸಹಜ ಸಾವುಗಳು ನಾಗರಿಕ ಸಮಾಜಕ್ಕೆ ತರವಲ್ಲ. ಹಿಂದು, ಮುಸ್ಲೀಂ ಕ್ರೈಸ್ತ ಯಾರದೇ ಹತ್ಯೆಯಾದರೂ ಜೀವ ಒಂದೇ ಅಲ್ಲವೇ. ಜಾತಿ ಧರ್ಮದ ಹೆಸರಲ್ಲಿ ಹತ್ಯೆ ನಡೆಸುವುದು ನಾಗರಿಕತೆ ಅಲ್ಲ. ನಾಗರಿಕ ಸಮಾಜಕ್ಕೆ ಇದು ಶೋಭೆ ತರುವ ವಿಷಯವೂ ಅಲ್ಲ, ನಾಗರಿಕ ಸಮಾಜಕ್ಕೆ ಇಂಥ ಘಡನೆಗಳು ಅಪಮಾನ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಸಗಬೇಕು ಎಂದು ಆಗ್ರಹಿಸಿದರು.‌

ಇದನ್ನೂ ಓದಿ: ರ‍್ಯಾಗಿಂಗ್ ಕುಚೋದ್ಯ- ದಿಂಬು, ಸಹಪಾಠಿಗಳ ಜತೆ ಸೆಕ್ಸ್‌ ನಟನೆ..!ಪೋಷಕರ ಆಕ್ರೋಶ

ದುಡ್ಡು ಸಂಪಾದನೆ ಮಾಡಿದ್ದೇವೆಂದು ಹೇಳಿದೆನಾ.?: ರಮೇಶ್ ಕುಮಾರ್

Advertisement

ವಿಜಯಪುರ: ಸೋನಿಯಾ ಗಾಂಧಿ ಪರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಹೋರಾಟದಲ್ಲಿ ನಾನು ಮಾತನಾಡಿದ್ದನ್ನು ನೀವು (ಮಾಧ್ಯಮದವರು) ಕಟ್-ಪೇಸ್ ಮಾಡಿದರೆ ನಾನೇನು ಮಾಡಲಿ. ದುಡ್ಡು, ಹಣ ಸಂಪಾದನೆ ಮಾಡಿದ್ದಾಗಿ ಹೇಳಿದೆನಾ? ಭಾವನಾತ್ಮಕವಾಗಿ ಮಾತನಾಡಿದ್ದನ್ನು ಮಾಧ್ಯಮದ ನೀವೇ ವಿವಾದ ಮಾಡಿದಿರಿ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ, ಹಾಲಿ ಶಾಸಕ ರಮೇಶಕುಮಾರ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದೇಶದ ಸ್ವಾತಂತ್ರ್ಯ ಸಂಗ್ರಾಮ, ಬಲಿದಾನ, ಸ್ವಾತಂತ್ರ್ಯ ನಂತರ ನೆಹರು ಕುಟುಂಬದ ಕೊಡುಗೆ ಬಗ್ಗೆ ಮಾತನಾಡಿದೆ. ಆದರೆ ನಾನೆಲ್ಲೂ ಹಣದ ಬಗ್ಗೆ ಮಾತನಾಡಿಲ್ಲ. ಆದರೂ ನೀವು ನನ್ನ ಹೇಳಿಕೆಯನ್ನು ಕಟ್-ಪೇಸ್ಟ್ ಮಾಡಿದ್ದೇ ವಿವಾದಕ್ಕೆ ಕಾರಣವಾಯ್ತು ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next