Advertisement

ಭವಿಷ್ಯದಲ್ಲಿ ಬ್ಲೂ ಫ್ಲೇಗ್ ಬೀಚ್ ಆಗುವ ಹಂತದಲ್ಲಿ 8 ಕೋಟಿ ರೂಪಾಯಿ ಅನುದಾನ: ಡಾ.ಭರತ್ ಶೆಟ್ಟಿ

02:34 PM Aug 23, 2022 | Team Udayavani |

ಸುರತ್ಕಲ್: ಪ್ರವಾಸಿಗರ ಅನುಕೂಲಕ್ಕಾಗಿ 1 ಕೋಟಿ 85 ಲಕ್ಷ ರೂಪಾಯಿ ವೆಚ್ಚದಲ್ಲಿ ಪಣಂಬೂರು 11ನೇ ವಾರ್ಡಿನ ತಣ್ಣೀರು ಬಾವಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪ್ರಕೃತಿ ವಿಕೋಪದಿಂದ ಹಾಳಾದ ರಸ್ತೆಯ ಭಾಗಗಳು ಕೂಡ ಇದೇ ಪ್ಯಾಕೇಜಿನಲ್ಲಿ ಒಳಗೊಂಡಿರುತ್ತದೆ. ಮುಂದಿನ ದಿನಗಳಲ್ಲಿ ಪಿಪಿಪಿ ಮಾದರಿಯಲ್ಲಿ ಬೀಚ್ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

Advertisement

ಅವರು 85 ಲಕ್ಷ ರೂಪಾಯಿ ವೆಚ್ಚದಲ್ಲಿ ತಣ್ಣೀರುಬಾವಿ ರಸ್ತೆಯ ಕಾಂಕ್ರೀಟಿಕರಣ ಮತ್ತು ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಭವಿಷ್ಯದಲ್ಲಿ ಬ್ಲೂಫ್ಲೇಗ್ ಬೀಚ್ ಆಗುವ ಹಂತದಲ್ಲಿ 8 ಕೋಟಿ ರೂಪಾಯಿ ಅನುದಾನದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ, ಸುರಕ್ಷತಾ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪಮೇಯರ್ ಸುಮಂಗಲಾ ರಾವ್, ಸ್ಥಳೀಯ ಕಾರ್ಪೊರೇಟರ್ ಸುನೀತಾ ಸಾಲಿಯಾನ್, ಮಾಜಿ ಕಾರ್ಪೋರೇಟರ್ ರಘುವೀರ್ ಪಣಂಬೂರು, ಬೂತ್ ಅಧ್ಯಕ್ಷರಾದ ಸುಜೀರ್ ಕೋಟ್ಯಾನ್,ವರದರಾಜ್, ಪ್ರದೀಪ್ ಕೋಟ್ಯಾನ್,ಬೇಬಿ, ಸುರೇಶ್, ಭಾರತಿ, ದೀಪಿಕಾ, ಉಷಾ,ಸರಿತಾ, ದಿನೇಶ್, ಕ್ಲೊಟಿ, ಸ್ಥಳೀಯ ಮುಖಂಡರು, ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next