Advertisement

ಮಿತ್ರೋಂ…ಇಲ್ಲಿ ಕೇಳಿ…

03:36 PM Jan 20, 2018 | |

ಪ್ರಧಾನಿ ನರೇಂದ್ರ ಮೋದಿಯವರ ಹಾವಭಾವ ಮತ್ತು ನುಡಿಗಳನ್ನು ಅನುಕರಣೆ ಮಾಡಿದ ಹುಡುಗನೊಬ್ಬನ ವಿಡಿಯೋ ವಾಟ್ಸಾಪ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದನ್ನು ವೀಕ್ಷಿಸಿದವರೆಲ್ಲರೂ ಆ ಹುಡುಗನ ಪ್ರತಿಭೆ ಕಂಡು ಬೆರಗಾಗಿದ್ದರು.

Advertisement

22 ವರ್ಷದ ಅವನ ಹೆಸರು ಶಾಮ್‌ ರಂಗೀಲಾ. ಆತನ ಹಾಸ್ಯ ಕಾರ್ಯಕ್ರಮ ನಗರದಲ್ಲಿ ನಡೆಯುತ್ತಿದೆ. ರಾಜಕಾರಣಿಗಳ ಅನುಕರಣೆ ಮಾಡುವುದರಲ್ಲಿ ಆತನದು ಎತ್ತಿದ ಕೈ. ಕಾರ್ಯಕ್ರಮದಲ್ಲಿ ಆತನ ಜೊತೆಗೆ ಸೌರಭ್‌ ಅವಸ್ತಿ ಮತ್ತು ಆಶಿಶ್‌ ತಿವಾರಿ ಕೂಡಾ ಇದ್ದಾರೆ. ಸ್ಟೇಜ್‌ ಅಡ್ಡಾ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ.

ಎಲ್ಲಿ?: ರಂಗೋಲಿ ಮೆಟ್ರೊ ಆರ್ಟ್‌ ಸೆಂಟರ್‌
ಯಾವಾಗ?: ಜನವರಿ 21
ಟಿಕೆಟ್‌: 199- 299 ರೂ., ಸಂಜೆ 6

Advertisement

Udayavani is now on Telegram. Click here to join our channel and stay updated with the latest news.

Next