ಉಡುಪಿ: ಮಣಿಪಾಲ ಎಂಐಟಿಯ ಪ್ರಿಂಟಿಂಗ್ ಆ್ಯಂಡ್ ಮೀಡಿಯಾ ವಿಭಾಗದ ವತಿಯಿಂದ “ನೌ ಆ್ಯಂಡ್ ದೆನ್’ ಎನ್ನುವ ಮುದ್ರಣ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮ ಎ. 12ರಂದು ಮಣಿಪಾಲದಲ್ಲಿ ಜರಗಿತು.
ಮಣಿಪಾಲ ಸ್ಕೂಲ್ ಆಫ್ ಕಮ್ಯೂನಿಕೇಶನ್‌ನ ನಿರ್ದೇಶಕಿ ಡಾ| ನಂದಿನಿ ಲಕ್ಷ್ಮೀಕಾಂತ್ ಮತ್ತು ಮಣಿಪಾಲ್ ಟೆಕ್ನಾಲಜೀಸ್ ಲಿ.ನ ಸಪ್ಲೆ„ ಚೈನ್ ಮ್ಯಾನೇಜ್‌ಮೆಂಟ್ ವಿಪಿ ಮುರಲೀಧರ ಭಟ್ ಪ್ರದರ್ಶನ ಉದ್ಘಾಟಿಸಿದರು.
ಮಣಿಪಾಲ ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು, ಎಂಐಟಿ ಜಂಟಿ ನಿರ್ದೇಶಕ ಡಾ| ಬಿ.ಎಚ್.ವಿ. ಪೈ, ರಿಸರ್ಚ್ ಆ್ಯಂಡ್ ಕನ್ಸಲ್ಟೆನ್ಸಿ ಅಸೋಸಿಯೇಟ್ ಡೈರೆಕ್ಟರ್ ಡಾ| ಮನೋಹರ್ ಪೈ, ಸ್ಟೂಡೆಂಟ್ ವೆಲ್‌ಫೇರ್ ಅಸೋಸಿಯೇಟ್ ಡೈರೆಕ್ಟರ್ ಡಾ| ನಾರಾಯಣ ಶೆಣೈ, ಎಂಐಟಿ ಡೈಮಂಡ್ ಜುಬಿಲಿ ಸೆಲಬ್ರೇಶನ್ ಚೇರ್‌ಮನ್ ಡಾ| ರಮೇಶ ಸಿ., ಮಣಿಪಾಲ ಪ್ರಿಂಟ್ ಪಾರ್ಕ್ ಅಧ್ಯಕ್ಷ ಮೋಹನ್ ಉಪಾಧ್ಯ, ರೊಟೇರಿ ಯನ್ ಡಾ| ಶೇಷಪ್ಪ ರೈ ಮೊದ ಲಾದವರು ಉಪಸ್ಥಿತರಿದ್ದರು.
ಇತ್ತೀಚೆಗಿನ ಸಮಕಾಲೀನ ಮುದ್ರಣ ತಂತ್ರಜ್ಞಾನ,ಜೀವನಶೈಲಿ, ಹಿಂದಿನ ಮುದ್ರಣ ಉಪಕರಣ, ಇಮೇಜಿಂಗ್ ತಂತ್ರಜ್ಞಾನ, ಪ್ಯಾಕೇಜಿಂಗ್ ವಿನ್ಯಾಸ, ಸೆಕ್ಯೂರಿಟಿ ಪ್ರಿಂಟಿಂಗ್ ಮಾದರಿ, ನಾಣ್ಯಗಳ ವಿನ್ಯಾಸ, ವಿದ್ಯುತ್ ಮತ್ತು ಗೃಹೋಪಕರಣಗಳ ಪ್ರದರ್ಶನ ಇದ್ದವು. ಮುದ್ರಣ ವಲಯಗಳು ಮತ್ತು ಸಂಬಂಧಪಟ್ಟ ಕ್ಷೇತ್ರಗಳ ಅಭಿವೃದ್ಧಿ ಕುರಿತು ಸಾರ್ವಜನಿಕ ಅರಿವು ಮೂಡಿಸಲು ಎಂಐಟಿ ಡೈಮಂಡ್ ಜುಬಿಲಿ ಸಂಭ್ರಮಾಚರಣೆ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.