Advertisement

ಮಿಷನ್ ವಾತ್ಸಲ್ಯ ಕಾರ್ಯಕ್ರಮ; ಮಕ್ಕಳನ್ನು ದತ್ತು ಪಡೆಯುವುದು ಹೇಗೆ?

12:39 AM Jul 31, 2023 | Team Udayavani |

ಮಕ್ಕಳು ಇರದ ಪೋಷಕರ ಸಂಕಟ, ಸಂಕಷ್ಟ ಹೇಳತೀರದು. ಅದಕ್ಕಾಗಿ ದಂಪತಿಗಳು ಬಂಧು ಬಳಗದಲ್ಲೇ ದತ್ತು ಪಡೆಯುವುದು ಸಾಮಾನ್ಯ. ಇನ್ನೂ ಕೆಲವರು ಗಂಡು ಮಕ್ಕಳು ಇಲ್ಲ ಎಂದು ದತ್ತು ಪಡೆಯುವುದು ಉಂಟು. ಮಕ್ಕಳನ್ನು ದತ್ತು ಪಡೆಯಲು ಕಾನೂನಿನಲ್ಲಿಯೂ ಅವಕಾಶವಿದ್ದು, ಅದಕ್ಕಾಗಿ ರಾಷ್ಟ್ರಮಟ್ಟಕ್ಕೆ ಅನುಗುಣವಾಗಿ ಮಾನದಂಡಗಳು, ನಿಯಮಗಳಿವೆ. ದತ್ತು ಪಡೆಯಲು ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಡಿಡಿಡಿ.cಚrಚ.nಜಿc.ಜಿn )ಪೋರ್ಟಲ್‌ ಸಹ ಇದ್ದು, ದತ್ತು ಪಡೆಯುವ ಪೋಷಕರು ಇದರಲ್ಲಿ ತಮ್ಮ ಹೆಸರು ನೋಂದಾಯಿಸಿದ ಬಳಿಕವೇ ದತ್ತು ಪ್ರಕ್ರಿಯೆ ಆರಂಭವಾಗುತ್ತದೆ.

Advertisement

ದತ್ತು ಎಂದರೇನು?
ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಕಲಂ 2 (2)ರನ್ವಯ “ದತ್ತು’ ಎಂದರೆ ತನ್ನ ಜೈವಿಕ ತಂದೆ-ತಾಯಿಯಿಂದ ಶಾಶ್ವತವಾಗಿ ಬೇರ್ಪಟ್ಟು, ಕಾನೂನಿನನುಗುಣವಾಗಿ ದತ್ತು ಪಡೆದ ಪೋಷಕರಿಗೆ ಜೈವಿಕ ಮಗುವಿಗೆ ಇರಬಹುದಾದ ಎಲ್ಲ ಹಕ್ಕು, ಅವಕಾಶಗಳು ಮತ್ತು ಜವಾಬ್ದಾರಿಯೊಂದಿಗಿನ ಸಂಬಂಧದೊಂದಿಗೆ ಮಗುವಾಗುವ ಕಾನೂನು ಬದ್ಧ ಪ್ರಕ್ರಿಯೆ. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಅನ್ವಯ ಮಕ್ಕಳನ್ನು ಕಾನೂನು ಬಾಹಿರವಾಗಿ ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ.

ಯಾರು ದತ್ತು ಪಡೆಯಬಹುದು
ಮಕ್ಕಳು ಇರುವ ಮತ್ತು ಇಲ್ಲದಿರುವ ಆರೋಗ್ಯವಂತ ದಂಪತಿಗಳು
ಲಿವ್‌ ಇನ್‌ ರಿಲೇಷನ್‌ನಲ್ಲಿರುವ ಅರ್ಹರು
ಅವಿವಾಹಿತ, ವಿಚ್ಛೇದಿತ, ವಿಧುರ, ವಿಧವಾ, ಮಹಿಳೆ, ಪುರುಷರು ಅರ್ಹರು

ದತ್ತು ಪಡೆಯುವುದು ಹೇಗೆ?
ದತ್ತು ಪಡೆಯಲು ಇಚ್ಛಿಸುವ ಪೋಷಕರು ಜಿಲ್ಲಾ ಮಕ್ಕಳ ರಕ್ಷಣ ಘಟಕ, ದತ್ತು ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಡಿಡಿಡಿ.cಚrಚ.nಜಿc.ಜಿn ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಸರು ನೋಂದಾಯಿಸಬೇಕು. ಎರಡು ತಿಂಗಳಲ್ಲಿ ದತ್ತು ಕೇಂದ್ರದ ವತಿಯಿಂದ ವ್ಯಕ್ತಿ, ಕುಟುಂಬದ ಕುರಿತಾಗಿ ಮನೆಗೆ ಭೇಟಿ ನೀಡಿ ಅವರ ವಾರ್ಷಿಕ ಆದಾಯ, ದಾಖಲೆ ಪರಿಶೀಲನೆ, ಮಾನದಂಡಗಳ ಆಧರಿಸಿ ಮಾನಸಿಕ ಸಿದ್ಧತೆ, ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ.

ಪೋಷಕರ ಅರ್ಹ ದಾಖಲೆಗಳು
ಆಧಾರ್‌ ಕಾರ್ಡ್‌/ಚುನಾವಣ ಗುರುತಿನ ಚೀಟಿ
ಪಾನ್‌ ಕಾರ್ಡ್‌, ವಯಸ್ಸಿನ, ವಿವಾಹ, ವಾಸಸ್ಥಳ, ಆದಾಯ ದೃಢೀಕರಣ ದಾಖಲೆ
ಏಕ ಪೋಷಕರಾಗಿದ್ದಲ್ಲಿ ವಿಚ್ಛೇದನ/ವಿಧವಾ ಪ್ರಮಾಣ ಪತ್ರ, ಪೋಸ್ಟ್‌ ಕಾರ್ಡ್‌ ಅಳತೆ ಭಾವಚಿತ್ರ

Advertisement

ಮಕ್ಕಳ ಆಯ್ಕೆ ಪ್ರಕ್ರಿಯೆ ಹೇಗೆ ?
ಆಶ್ರಮ, ದತ್ತು ಕೇಂದ್ರಗಳ ಹಾಗೂ ಪೋಷಣೆ ಮಾಡುವ ಎನ್‌ಜಿಒಗಳಲ್ಲಿಯ ಮಕ್ಕಳ ಬಗ್ಗೆ ದತ್ತು ಕೇಂದ್ರಗಳಲ್ಲಿ ದಾಖಲೆ ನಮೂದಾಗಿರುತ್ತದೆ. ನೋಂದಣಿ ವೇಳೆ ಪ್ರಾದೇಶಿಕವಾರು (ಅಂತಾರಾಜ್ಯ) ದತ್ತು ಕೇಂದ್ರದಿಂದಲೂ ಮಗು ಪಡೆಯಬಹುದು. ದತ್ತು ಪಡೆಯುವವರು ಡಿಡಿಡಿ.cಚrಚ.nಜಿc.ಜಿn ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿದ ಕೂಡಲೇ ಅವರಿಗೆ ಮಗು ಪಡೆಯುವುದು ಅಸಾಧ್ಯ. ಅವರಿಗಿಂತ ಮುಂಚೆ ಯಾರೂ ನೋಂದಾಯಿಸಿರುತ್ತಾರೋ ಅವರಿಗೆ ಕ್ರಮನುಸಾರವಾಗಿ ಮಾನದಂಡ ಪಾಲನೆಯಾಗುತ್ತದೆ.

ದತ್ತು ಕೇಂದ್ರದ ನಿರ್ಧಾರವೇ ಅಂತಿಮ
ದತ್ತು ಸಂಸ್ಥೆಯವರು ಅವರ ಮನೆಗೆ ಭೇಟಿ ನೀಡಿ ವಾರ್ಷಿಕ ಆದಾಯ, ಸಾಮರ್ಥ್ಯ, ಇತ್ಯಾದಿ ಬಗ್ಗೆ ಕೂಲಂಕುಷ ಪರಿಶೀಲನೆ ಬಳಿಕ ಇವರಿಗೆ ಮಗುವನ್ನು ಪೋಷಿಸುವಷ್ಟು ಸಾಮರ್ಥ್ಯ ಇದೆಯೇ ಎಂಬುದನ್ನು ಅರಿತು ದತ್ತು ನೀಡಬಹುದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಬಳಿಕ ಪ್ರಕ್ರಿಯೆ ಪ್ರಾರಂಭವಾಗುತ್ತದೆ.

  • ನಾಗಪ್ಪ ಹಳ್ಳಿಹೊಸೂರು
Advertisement

Udayavani is now on Telegram. Click here to join our channel and stay updated with the latest news.

Next