Advertisement

ಮಿಸ್‌ ಟು ಮಿಸೆಸ್‌

06:50 PM Mar 10, 2021 | Team Udayavani |

ಜೀವನದ ಈ ಸುಂದರ ಪಯಣದಲ್ಲಿ ಬದಲಾವಣೆಗಳು ಸಹಜ ಹಾಗೆಯೇಅನಿವಾರ್ಯವೂ ಕೂಡ. ನಿಂತ ನೀರಂತೆ ನಿಲ್ಲದೆ, ನದಿಯಂತೆ ನಿರಂತರವಾಗಿ ಹರಿದು ಸಾಗಬೇಕು.ಹೆಣ್ಣಿನ ಜೀವನ ನದಿಯ ಹಾಗೆ ಅನೇಕತಿರುವು, ಏರಿಳಿತಗಳನ್ನು ಕಂಡರೂ ನಿಲ್ಲದೆ ಹರಿದು ಸಾಗುತ್ತದೆ.ಬಹುಶಃ ನದಿಗಳಿಗೆ ಹೆಣ್ಣಿನ ಹೆಸರಿರುವುದು ಇದಕ್ಕೇಇರಬಹುದು. ಹೆಣ್ಣುಮಕ್ಕಳಜೀವನದ ಬದಲಾವಣೆಯ ಪ್ರಮುಖ ಘಟ್ಟವೇ ಈ ಮಿಸ್‌ ಟು ಮಿಸೆಸ್‌.

Advertisement

ಅಪ್ಪ, ಅಮ್ಮ,ಅಕ್ಕ- ತಮ್ಮ,  ಅಣ್ಣ-ತಂಗಿ ಎನ್ನುವ ಪುಟ್ಟಪ್ರಪಂಚದಲ್ಲಿ ಒಂದಿಷ್ಟು ವರ್ಷಗಳ ಕಾಲ ಬೆಳೆಯುವ ಹೆಣ್ಣು ಮಗಳು, ಇದ್ದಕಿದ್ದಂತೆಒಂದು ದಿನ ಭುಜದೆತ್ತರಕ್ಕೆ ಬೆಳೆದು ನಿಂತು ಬಿಡುತ್ತಾಳೆ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದವಳು ನೋಡನೋಡುತ್ತಿದ್ದಂತೆಯೇ ಸಪ್ತಪದಿ ಹೆಜ್ಜೆಗೆ ಸಿದ್ಧವಾಗಿ ಬಿಡುವಳು.

ಆ ಹೆಣ್ಣು ಮಗುವನ್ನು ಧಾರೆ ಎರೆದು ಕೊಡುವ ನೋವು ಹೆತ್ತ ತಂದೆ-ತಾಯಿಗಷ್ಟೇ ತಿಳಿಯುವುದು. ಮೊದಲ ದಿನ ಮಗುವನ್ನು ಶಾಲೆಗೆ ಕಳಿಸಿ ಬರುವ ನೋವು ಹೆಚ್ಚು ಎನ್ನುವರು. ಅಂಥಹದ್ದರಲ್ಲಿ ಮಗಳನ್ನು ಹುಟ್ಟಿನಿಂದ ಮದುವೆಯಾಗುವವರೆಗೂ ಚಿಪ್ಪಿನೊಳಗಿನ ಮುತ್ತಿನಂತೆ ಕಾಪಾಡಿ ಆ ಮುತ್ತನ್ನು ಅವಳರಸನ ಕತ್ತಿಗೆ ಕಟ್ಟಿ ಕಳಿಸುವ ಅನುಭವಅನುಭವಿಸಿದವರಿಗಷ್ಟೇ ತಿಳಿಯುವುದು. ಚಿಕ್ಕವಳಿರುವಾಗ ಅವಳನ್ನು ಮನೆಯಲ್ಲಿ ರೇಗಿಸುತ್ತಾ “ನಿನ್ನನ್ನು ಬೇಗ ಗಂಡನ ಮನೆಗೆ ಓಡಿಸಿಬಿಡ್ತೀವಿ’ ಅಂತೆಲ್ಲಾ ಹೇಳುವಾಗ ಅವಳುಪ್ರತಿಕ್ರಿಯಿಸಿ- “ನಾನೆಲ್ಲೂ ಹೋಗಲ್ಲ, ಇಲ್ಲೇ ಇರ್ತೀನಿ’ ಅಂದರೂ ಕಾಲ ಚಕ್ರ ತಿರುಗಿದಂತೆ ಎಲ್ಲವೂ ನಡೆಯುವುದು.

ಹೊಸದಾಗಿ ಗಂಡನ ಮನೆಗೆ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವ ಆ ಟ್ರಾನ್ಸಿಷನ್‌ ಫೇಸ್‌ ಅಂಥ ನಾವು ಏನು ಕರೆಯುತ್ತೇವೋ, ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವಳಿಗೆಇಷ್ಟವಾದ ಹುಡುಗನೊಂದಿಗೆ ಮದುವೆಯಾದಖುಷಿ, ಸುಖ, ಸಂತೋಷ ಒಂದೆಡೆಯಾದರೆ,ಇನ್ನೊಂದೆಡೆ ಯಾವುದೋ ಒಂದು ಆಪ್ತ ಕೊಂಡಿ ಕಳಚಿದ ಭಾವನೆ. ಪ್ರತಿದಿನ ಅಮ್ಮನೊಂದಿಗೆ ಕೂತುಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದವಳು, ಫೋನ್‌ಮಾಡಿ ಮಾತನಾಡಿಸುವ ಸಂದರ್ಭ ಬಂದಾಗದುಃಖ ಆಗದೆ ಇರಲು ಸಾಧ್ಯವೇ? ತಂಗಿ,ತಮ್ಮನೊಂದಿಗೆ ಜಗಳವಾಡಿ, ರೇಗಿಸಿಕೊಂಡುಇರುತ್ತಿದ್ದವಳಿಗೆ ಹೊಸ ಜನರೊಂದಿಗೆ ಬೆರೆಯಲು,ಮಾತನಾಡಲು ಏನೋ ಒಂದು ರೀತಿಯ ಭಯ,ಬಿಗುಮಾನ ಮೊದಲ ಕೆಲವು ದಿನಗಳು ಇದ್ದೇ ಇರುತ್ತದೆ. ಅಕಸ್ಮಾತ್‌ ಅವಿಭಕ್ತ ಕುಟುಂಬಕ್ಕೆ ಸೊಸೆಯಾಗಿ ಸೇರಿದರೆ ಹೊಂದಾಣಿಕೆ ಸ್ವಭಾವ ತುಸು ಹೆಚ್ಚೇ ಬೇಕಾಗುತ್ತದೆ. ವಿಭಕ್ತ ಕುಟುಂಬವಾದರೆ ಕೆಲಸಗಳು ಮತ್ತು ಜವಾಬ್ದಾರಿಗಳು ಜಾಸ್ತಿ ಇರುತ್ತವೆ.

ಮೇಲ್ನೋಟಕ್ಕೆ ಕತ್ತಿನ ತಾಳಿ, ಕಾಲಿನಉಂಗುರ, ಹಣೆಯ ಸಿಂಧೂರ ಮಾತ್ರಹೊಸದಾಗಿ ಸೇರ್ಪಡೆಯಾಗಿರುವ ಹಾಗೆ ಕಂಡರೂ ಗೋತ್ರದಿಂದ ಹಿಡಿದುಅವಳು ಮುಂದೆ ಆಚರಿಸುವ ಹಬ್ಬ ಹರಿದಿನಗಳ ವಿಧಿ ವಿಧಾನ,ಸಂಪ್ರದಾಯಗಳು, ಅಡುಗೆ ಹಾಗೂ ಊಟದ ಪದ್ಧತಿ, ಅವಳು ಮುಂದೆ ಇರಬೇಕಾದ ಮನೆ, ಆಮನೆಯವರ ಆಚಾರ, ವಿಚಾರಎಲ್ಲವೂ ಬದಲಾಗುವುದು.

Advertisement

ಮದುವೆ ಮುಗಿದು ಹೆಣ್ಣು ಒಪ್ಪಿಸಿ ಕೊಟ್ಟು, ಅವಳೀಗಇನ್ನೊಬ್ಬರ ಮನೆಯ ಸೊಸೆ ಅಂತಸುಲಭವಾಗಿ ಹೇಳಿಬಿಡುತ್ತೇವೆ.ಹೊಸ ಜಾಗ, ಹೊಸ ಜನ, ಹೊಸ ವಾತಾವರಣಕ್ಕೆ ಹೊಂದಿಕೊಂಡುಹೋಗುವುದು ಸುಲಭದ ಮಾತಲ್ಲ.ಹೆಣ್ಣಿಗೆ ಹೊಂದಾಣಿಕೆ ಸ್ವಭಾವ ಹುಟ್ಟುತ್ತಲೇಬರುವುದು. ಆದ್ದರಿಂದ ವರ್ಷಗಳು ಕಳೆದಂತೆಅವಳು ಹೋದ ಮನೆಗೆ ಸಂಪೂರ್ಣವಾಗಿ ಸೇರಿ, ಹೊಂದಿಕೊಂಡು ಅವರೆಲ್ಲರಲ್ಲಿ ಒಬ್ಬಳಾಗಿ ಬಿಡುತ್ತಾಳೆ.

ಇಷ್ಟೆಲ್ಲಾ ಬದಲಾವಣೆಗಳ ಹಂತದಲ್ಲಿ ಅವಳ ಕೈ ಹಿಡಿದ ಗಂಡ, ಅತ್ತೆ, ಮಾವ ಹಾಗೂ ಅವಳ ಆಪ್ತರುನಿನ್ನೊಂದಿಗೆ ನಾವಿರುವೆವು ಎಂಬ ವಿಶ್ವಾಸಮೂಡಿಸಿದಾಗಲಷ್ಟೇ ಈ ಮಿಸ್‌ ಟು ಮಿಸಸ್‌ ಎಂಬ ಬದಲಾವಣೆ ಅರ್ಥಪೂರ್ಣ ಹಾಗೂ ಭಾವಪೂರ್ಣಗೊಳ್ಳಲು ಸಾಧ್ಯ.

 

– ಶ್ರೀಲಕ್ಷ್ಮೀ , ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next