Advertisement
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿಯ ಕೇಂದ್ರ ನಾಯಕರ ಆಗಮನದ ವೇಳೆ ಬಿಜೆಪಿ ರಾಜ್ಯ ಮುಖಂಡರ ಮನವಿಯಂತೆ ಅಧಿ ಕಾರಿಗಳು ಸ್ವಾಗತ ಕೋರಿದ್ದರು. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಇಡೀ ರಾಷ್ಟ್ರದ ನಾಯಕರು ರಾಜ್ಯಕ್ಕೆ ಬಂದಾಗ ಹಿರಿಯ ಅಧಿಕಾರಿಗಳು ಸ್ವಾಗತಕ್ಕೆ ತೆರಳಿದ್ದರು ಎಂದು ಹರೀಶ್ ಕುಮಾರ್ ಹೇಳಿದರು.
ನಿಲ್ಲಿಸಲು ಅಸಾಧ್ಯವೇಕೆ
3 ತಿಂಗಳಿನಿಂದ ಮಣಿಪುರ ಜನಾಂಗೀಯ ದ್ದೇಷದಿಂದ ಹೊತ್ತಿ ಉರಿಯುತ್ತಿದ್ದು, ಶಾಲೆಗಳು ಇನ್ನೂ ಆರಂಭವಾಗಿಲ್ಲ. ಕೃಷಿ ಚಟುವಟಿಕೆ, ವ್ಯಾಪಾರ ವಹಿವಾಟು ನಡೆಸಲಾರದ ಸ್ಥಿತಿಯಲ್ಲಿ ಜನರಿ¨ªಾರೆ. ಸಾವಿರಾರು ಜನರು ನಿರಾಶ್ರಿರಾಗಿ¨ªಾರೆ. ವಿಶ್ವ ಗುರು ವಿನ ಒಂದು ಕರೆಗೆ ರಷ್ಯಾ- ಉಕ್ರೇನ್ ಯುದ್ಧ ನಿಲ್ಲುತ್ತದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಮಣಿಪುರ ಗಲಭೆ ನಿಲ್ಲಿಸಲು ವಿಶ್ವಗುರುವಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು. ಸಿಎಂ ಮಾಡಲೂ ಗೊತ್ತು ಇಳಿಸಲೂ ಗೊತ್ತು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹರೀಶ್, “ಅವರು ಏನು ಹೇಳಿದ್ದಾರೆ ಗೊತ್ತಿಲ್ಲ. ದೊಡ್ಡವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡವರೂ ನಾವಲ್ಲ. ಆದರೆ ಕಾಂಗ್ರೆಸ್‌ನಿಂದ ಈಡಿಗ, ಬಿಲ್ಲವರಿಗೆ ಅನ್ಯಾಯವಂತೂ ಆಗಿಲ್ಲ’ ಎಂದರು.
Related Articles
ಐವನ್ ಮಾತನಾಡಿ, ಮಣಿಪುರ ಸಿಎಂ ರಾಜೀನಾಮೆ ಮತ್ತು ಜನರಿಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್‌ನಿಂದ ಜು.24, 25, 26ರಂದು ವಿವಿಧ ತಾಲೂಕುಗಳಲ್ಲಿ ಮತ್ತು ಜು. 29ರಂದು ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನಾ ಆಯೋಜಿಸಿದ್ದೇವೆ ಎಂದರು.ಮುಖಂಡರಾದ ಪ್ರಕಾಶ್ ಬಿ. ಸಾಲಿಯಾನ್, ಅಪ್ಪಿ, ಜಯಶೀಲ ಅಡ್ಯಂತಾಯ, ನೀರಜ್‌ಪಾಲ್, ಭಾಸ್ಕರ್ ರಾವ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
Advertisement