Advertisement

Traditional Vegan Dishes; ಅತ್ಯುತ್ತಮ ಖಾದ್ಯ ಪಟ್ಟಿಗೆ “ಮಿಸಲ್‌ ಪಾವ್‌’

09:12 PM Apr 24, 2023 | Team Udayavani |

ಮುಂಬೈ: ಜಗತ್ತಿನ “ಅತ್ಯುತ್ತಮ ಸಾಂಪ್ರದಾಯಿಕ ಸಸ್ಯಾಹಾರಿ ಖಾದ್ಯ’ಗಳ ಪಟ್ಟಿಯಲ್ಲಿ ಈಗ ಮಹಾರಾಷ್ಟ್ರದ ಜನಪ್ರಿಯ ಮಿಸಲ್‌ ಪಾವ್‌ ಸ್ಥಾನ ಪಡೆದಿದೆ.

Advertisement

ಟಾಪ್‌ 10 ಸ್ಥಾನಗಳಲ್ಲಿ ವಿದೇಶಿ ಖಾದ್ಯಗಳು ಪಡೆದಿದ್ದರೆ, 11ನೇ ಸ್ಥಾನ ಮಿಸಲ್‌ ಪಾವ್‌ಗೆ ದೊರೆತಿದೆ. ಆಹಾರ ಮಾರ್ಗದರ್ಶಿ ಪ್ಲಾಟ್‌ಫಾರಂ ಆಗಿರುವ ಟೇಸ್ಟ್‌ ಅಟ್ಲಾಸ್‌ ಈ ರ್‍ಯಾಂಕಿಂಗ್‌ ಅನ್ನು ಬಿಡುಗಡೆ ಮಾಡಿದೆ.

ಇನ್ನು, ಭಾರತದ ಖಾದ್ಯಗಳಾದ ಆಲೂ ಗೋಬಿ 20ನೇ ಸ್ಥಾನ ಪಡೆದರೆ, 22ನೇ ಸ್ಥಾನವನ್ನು ರಾಜ್ಮಾ ಪಡೆದಿದೆ. ಗೋಬಿ ಮಂಚೂರಿಯನ್‌ 24ನೇ ಸ್ಥಾನವನ್ನು ಆಕ್ರಮಿಸಿಕೊಂಡರೆ, ಮಸಾಲ ವಡೆ 27ನೇ ಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next