Advertisement

ಮಿರ್ಜಾಪುರ್‌ :ಕಾಮಾಖ್ಯ ಎಕ್ಸ್‌ಪ್ರೆಸ್‌ ರೈಲಿನ ಇಂಜಿನ್‌ನಲ್ಲಿ ಅಗ್ನಿ ಅವಘಡ

09:40 AM May 10, 2019 | Vishnu Das |

ಮಿರ್ಜಾಪುರ: ಕಾಮಾಖ್ಯ ಎಕ್ಸ್‌ಪ್ರೆಸ್‌ ರೈಲಿನ ಇಂಜಿನ್‌ ಮತ್ತು ಜನರೇಟರ್‌ ರೂಮ್‌ನಲ್ಲಿ ಗುರುವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ.

Advertisement

ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದ್ದು ಚಾಲಕ ತಕ್ಷಣ ರೈಲು ನಿಲ್ಲಿಸಿ ಜನರೇಟರ್‌ ರೂಮ್‌ ಮತ್ತು ಸರಕು ಸಾಗಾಣಿಕೆಯ ಬೋಗಿಗಳನ್ನು ಬೇರ್ಪಡಿಸಿದ್ದಾರೆ.

ಅದೃಷ್ಟವಷಾತ್‌ ಯಾರೊಬ್ಬರಿಗೂ ಗಾಯಗಳಾಗಿಲ್ಲ.ಘಟನೆಯಿಂದಾಗಿ ದೆಹಲಿ -ಹೌರಾ ಮಾರ್ಗವಾಗಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next