Advertisement

ಉತ್ತರ ಪ್ರದೇಶದಲ್ಲಿ 15ರ ಬಾಲಕಿಯ ಮೇಲೆ ಅತ್ಯಾಚಾರ

12:33 PM May 21, 2018 | udayavani editorial |

ಬಲ್ಲಿಯಾ, ಉತ್ತರ ಪ್ರದೇಶ : ಬಲ್ಲಿಯಾ ಜಿಲ್ಲೆಯ ಗ್ರಾಮವೊಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ಕಾಮಾಂಧ ಯುವಕನೋರ್ವ ಅತ್ಯಾಚಾರ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಬಾಲಕಿಯು ತನ್ನ ಮನೆ ಸಮೀಪದ ಹೊಲಕ್ಕೆ ಬಹಿರ್ದೆಷೆಗಾಗಿ ಹೋಗಿದ್ದಾಗ ಅಲ್ಲಿ ಮನೀಷ್‌ ಯಾದವ್‌ ಎಂಬ ತರುಣ ಆಕೆಯ ಮೇಲೆ ಅತ್ಯಾಚಾರ ಎಸಗಿದ ಎಂದವರು ಹೇಳಿದ್ದಾರೆ. 

ಬಾಲಕಿಯ ತಂದೆ ಕೊಟ್ಟಿರುವ ದೂರಿನ ಪ್ರಕಾರ ಚಿಲ್‌ಬಡಾಗಾಂವ್‌ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ; ತಲೆ ಮರೆಸಿಕೊಂಡಿರುವ ಆರೋಪಿ ಮತ್ತು ಆತನ ಇಬ್ಬರು ಸಹಚರರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next