ನವ ದೆಹಲಿ : ಕೇಂದ್ರ ಸರ್ಕಾರವು ‘ಸಮೃದ್ಧ್’ ಯೋಜನೆಯನ್ನು ಆಂಭಿಸುತ್ತಿದೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಐ.ಟಿ.) 300 ನವೋದ್ಯಮಗಳಿಗೆ ನೆರವಾಗಲು ದೃಷ್ಟಿಯಿಂದ ಸ್ಟಾರ್ಟ್‌ಅಪ್ ಆಕ್ಸಲರೇಟರ್ ಆಫ್ ಎಂಇಐಟಿವೈ ಫಾರ್ ಪ್ರಾಡಕ್ಟ್ ಇನೊವೇಷನ್, ಡೆವಲಪ್‌ಮೆಂಟ್ ಆ್ಯಂಡ್ ಗ್ರೋತ್ ಅಥವಾ ಸಮೃದ್ಧ್ ಯೋಜನೆಯನ್ನು ಆರಂಭಿಸಿದೆ.
ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಜಾರಿಗೆ ತಂದ ಈ ಸಮೃದ್ಧ್ ಯೋಜನೆ ಅಡಿಯಲ್ಲಿ ಆಯ್ದ ನವೋದ್ಯಮಗಳಲ್ಲಿ 100 ಯೂನಿಕಾರ್ನ್ ಗಳನ್ನು ರಚಿಸುವ ದೃಷ್ಟಿಯಿಂದ ಪ್ರಾರಂಭಿಕ ಬಂಡವಾಳ, ಮಾರ್ಗದರ್ಶನ ಮಾತ್ರವಲ್ಲದೇ ಮಾರುಕಟ್ಟೆ ಪ್ರವೇಶದ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಇದನ್ನೂ ಓದಿ : ಸುಪ್ರೀಂ ಕೋರ್ಟ್ ನಲ್ಲಿನ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಜಾರಿಗೆ ತರುತ್ತಿರುವ ಈ ಸಮೃದ್ಧ್ ಯೋಜನೆಯ ಅಡಿಯಲ್ಲಿ, ಆಯ್ಕೆ ಆಗುವ ನವೋದ್ಯಮಗಳಿಗೆ ಮಾಹಿತಿ ಹಗೂ ತಂತ್ರಜ್ಞಾನ ಸಚಿವಾಲಯವು ಸುಮಾರು 40 ಲಕ್ಷಗಳ ತನಕ ಆರಂಭಿಕ ಬಂಡವಾಳ ಮಾತ್ರವಲ್ಲದೇ, ಸುಮಾರು ಆರು ತಿಂಗಳುಗಳ ಕಾಲ ಮಾರ್ಗದರ್ಶನವನ್ನು ಕಲ್ಪಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಯೋಜನೆಯನ್ನು ಉದ್ಯಮವನ್ನಾಗಿ ಪರಿವರ್ತಿಸುವ ಕೌಶಲದ ಕೊರತೆಯು ಬಹುತೇಕ ನವೋದ್ಯಮಗಳ ಅತಿದೊಡ್ಡ ಸಮಸ್ಯೆಗಳಾಗಿವೆ. ಹಾಗಾಗಿ ಕೇಂದ್ರ ಸರ್ಕಾರ ಈ ಯೋಜನೆಯ ಅಡಿಯಲ್ಲಿ ಆರಂಭಿಕ ಬಂಡವಾಳ ಮಾತ್ರವಲ್ಲದೇ ಮಾರ್ದರ್ಶನ ಹಾಗೂ ಮಾರ್ಕೇಟಿಂಗ್ ಪ್ರವೇಶವನ್ನು ಕೂಡ ಒದಗಿಸಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ : ಸಿಖ್, ಹಿಂದೂಗಳು ಸೇರಿ 140 ಭಾರತೀಯರು ಅಫ್ಘಾನ್ ಬಿಟ್ಟು ತೆರಳದಂತೆ ತಾಲಿಬಾನ್ ತಡೆ!