Advertisement

2020: ಕರ್ನಾಟಕದಲ್ಲಿ 11,230 ಅಪಘಾತಗಳು

12:42 AM Jul 30, 2021 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳ ಪೈಕಿ ಕರ್ನಾಟಕದಲ್ಲಿ 2020ನೇ ಸಾಲಿನಲ್ಲಿ 11,230 ರಸ್ತೆ ಅಪಘಾತಗಳು ಸಂಭವಿಸಿವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವಾಲಯದ ಸಾರಿಗೆ ಸಂಶೋಧನ ವಿಭಾಗ (ಟಿಆರ್‌ಡಬ್ಲ್ಯು)ದ ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ.

Advertisement

2019ರಲ್ಲಿ 13,363 ಅಪಘಾತಗಳು ಸಂಭವಿಸಿವೆ.  ರಾಜ್ಯದಲ್ಲಿ 551 ಬ್ಲ್ಯಾಕ್‌ಸ್ಪಾಟ್‌ಗಳು (ಹೆಚ್ಚು ಅಪಘಾತವಾಗುವ ಸ್ಥಳಗಳು) ಇವೆ. ಕರ್ನಾಟಕ ಹೊರತುಪಡಿಸಿ, ತಮಿಳುನಾಡು, ಉ.ಪ್ರ., ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡುಗಳಲ್ಲಿ ಮೂರು ವರ್ಷಗಳಲ್ಲಿ ಹೆಚ್ಚಿನ ಅಪಘಾತಗಳಾಗಿವೆ.

ದೇಶದಲ್ಲಿನ ಬ್ಲ್ಯಾಕ್‌ಸ್ಪಾಟ್‌ಗಳ ಒಟ್ಟು ಸಂಖ್ಯೆ  2015 ರಿಂದ 2018ರ ವರೆಗೆ 5,803 ಬ್ಲ್ಯಾಕ್‌ಸ್ಪಾಟ್‌ ಇವೆ.  ತಮಿಳುನಾಡುನಲ್ಲಿ 748, ಪ.ಬಂಗಾಲ 701, ತೆಲಂಗಾಣ 485, ಆಂಧ್ರ 466, ಉ.ಪ್ರ. 405, ಮ.ಪ್ರದೇಶಗಳಲ್ಲಿ 303 ಬಾÕéಕ್‌ಸ್ಪಾಟ್‌ಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next