ಚಿಕ್ಕಬಳ್ಳಾಪುರ: ಕೃಷಿ ಸಚಿವರಾಗಿ ತಮ್ಮ ಕ್ಷೇತ್ರದ ರೈತರಿಗೆ ನ್ಯಾಯ ಕೊಡಸಲಾಗದಿದ್ದರೆ ಮಂತ್ರಿ ಯಾಗಿ ಏಕೆ ಇರಬೇಕು ? ತಮ್ಮ ಸ್ಥಾನಕ್ಕೆ ರಾಜೀ ನಾಮೆ ಕೊಡಲಿ. ಇಲ್ಲ ರೈತರಿಗೆ ನ್ಯಾಯ ಕಲ್ಪಿಸ ಬೇಕು. ಆದರೆ ರೈತರ ಹೋರಾಟ ದಮನ ಮಾಡಲು ಹೊರಟರೆ ಹೋರಾಟ ನಿಲ್ಲುವುದಿಲ್ಲ. ಇನ್ನಷ್ಟು ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಜಿಲ್ಲಾಡಳಿತಕ್ಕೆ ಹಾಗೂ ಉಸ್ತುವಾರಿ ಸಚಿವರಿಗೆ ಸಿಪಿಎಂ ಪಕ್ಷದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಎಚ್ಚರಿಸಿದರು.
ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಪವರ್‌ಗ್ರಿಡ್ ಸಂಸ್ಥೆ ಯಿಂದ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ನಡೆಸುತ್ತಿದ್ದ ರೈತರನ್ನು ಕಳೆದ ಬುಧವಾರ ರಾತ್ರಿ ಬಂಧಿಸಿರುವ ಕ್ರಮ ಖಂಡಿಸಿ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಅವೈಜ್ಞಾನಿಕ ಬೆಲೆ ನಿಗದಿ: ಶಿಡ್ಲಘಟ್ಟ ತಾಲೂಕಿನಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಒಂದು ರೀತಿ ಬೆಲೆ, ಗೌರಿಬಿದನೂರು ತಾಲೂಕಿನಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಮತ್ತೂಂದು ರೀತಿ ಪರಿಹಾರ ನಿಗದಿಪಡಿಸಿ ಜಿಲ್ಲಾಧಿಕಾರಿಗಳು ತಾರ ತಮ್ಯ ಎಸಗಿದ್ದಾರೆ. ಒಮ್ಮೆ ಭೂಮಿ ಕಳೆದುಕೊಳ್ಳುವ ರೈತರು ಬದುಕಿನುದ್ದಕ್ಕೂ ಕಷ್ಟ ಎದುರಿಸಬೇಕಾ ಗುತ್ತದೆ. ಆದರೆ ಜಿಲ್ಲಾಡಳಿತ ಪ್ರತಿ ಚದರ ಮೀಗೆ ಅವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಿದೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಶಾಮೀಲಾಗಿ ರೈತರಿಗೆ ವಂಚಿಸುತ್ತಿದ್ದಾರೆ. ಜಿಲ್ಲೆಯ ರೈತ ಹೋರಾಟ ದಮನ ಮಾಡಲು ಜಿಲ್ಲಾಧಿಕಾರಿ ಗಳು ಮುಂದಾಗಿದ್ದಾರೆ. ಶಾಂತಿಯುತವಾಗಿ ಹೋರಾಡುವ ರೈತರನ್ನು ಕಳ್ಳರಂತೆ ಬಂಧಿಸಿ ಆಸ್ಪತ್ರೆ ಗಳಲ್ಲಿ ಇಟ್ಟಿದ್ದಾರೆ.
ಎಲ್ಲಾ ರೈತರನ್ನು ಒಂದೇ ಆಸ್ಪತ್ರೆ ಯಲ್ಲಿ ಇಡುವ ಬದಲು ಶಿಡ್ಲಘಟ್ಟ, ಗುಡಿಬಂಡೆ, ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ಆಸ್ಪತ್ರೆ ಗಳಲ್ಲಿ ಸೇರಿಸಿದ್ದಾರೆ. ಇದರ ಅರ್ಥ ಏನು? ಎಂದು ಪ್ರಶ್ನಿಸಿದರು. ರೈತ ಮುಖಂಡರಾದ ಜಯ ರಾಮ ರೆಡ್ಡಿ, ಮಂಜುನಾಥ, ಚೆನ್ನರಾಯಪ್ಪ, ಲಕ್ಷ್ಮೀನಾರಾ ಯಣ ರೆಡ್ಡಿ, ಬಿ.ಎನ್.ಮುನಿಕೃಷ್ಣಪ್ಪ, ರಾಮಕೃಷ್ಣಪ್ಪ, ರವಿಪ್ರಕಾಶ್, ಆಂಜನೇಯರೆಡ್ಡಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.